WhatsApp Group
Join Now
ಬಾಗಲಕೋಟೆ,ಸೆ.02:ಆಹಾರ ಸುರಕ್ಷತ ಆಂದೋಲನ ಹಿನ್ನಲೆಯಲ್ಲಿ ಬಾಗಲಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಹೋಟೆಲ್, ರೆಸ್ಟೋರೆಂಟ್, ಖಾನಾವಳಿ ಹಾಗೂ ಬೀದಿಬದಿ ಎಗ್ರೈಸ್ ಅಂಗಡಿಗಳಿಗೆ ಜಿಲ್ಲಾ ಆಹಾರ ಸುರಕ್ಷತಾ ಪರಿಶೀಲನಾ ತಂಡ ದಾಳಿ ನಡೆಸಿ ಆಹಾರ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿತು.
ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ ಸಾಳಗುಂದ, ಬಸವರಾಜ ಮೊಳೆಗಾಂವಿ, ಇಮಾಮ ಹಸನ್ ಡೋನೂರ, ಶರಣು ರೇವಡಿ ಒಳಗೊಂಡ ತಂಡ ದಾಳಿ ನಡೆಸಿ ರೈಸ್ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ, ಆಹಾರದಲ್ಲಿ ಬೆರೆಸುತ್ತಿರುವ ಕಲರ್ಗಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೆಲವೊಂದು ಅಂಗಡಿಗಳಿಗೆ ನೋಟ್ ಸಹ ನೀಡಲಾಯಿತು. ಅಲ್ಲದೇ ವ್ಯಾಪಾಸ್ಥರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಕುರಿತು ಜಾಗೃತಿ ಸಹ ಮೂಡಿಸಲಾಯಿತು.