ರಾಯಚೂರು: ಜು-1:
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲು ೬೯ರಲ್ಲಿ ೧.೧೦ ಅಡಿ ವ್ಯತ್ಯಾಸವಿರು ಅಳತೆ ಪಟ್ಟಿಯನ್ನು ಮುಂಬರುವ ಹಂಗಾಮಿಗೆ ಕಾಲುವೆಗೆ ನೀರು ಸರಬರಾಜು ಪ್ರಾರಂಭಿಸುವ ಮುಂಚೆ ಸರಿಯಾದ ಅಳತೆಪಟ್ಟಿ ಸ್ಥಾಪಿಸಬೇಕೆಂದು ತುಂಗ ಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್ ೬೯ರ ನಂತರ ಸರಕಾರದ ನೀರಾವರಿ ಇಲಾಖೆಯಿಂದ ಅಧಿಕೃತ ನೀರಾವಿ ವ್ಯವಸ್ಥೆ ಕಲ್ಪಿಸಿರುವ ಜಮೀನುಗಳನ್ನು ಹೊಂದಿರುವ ರೈತರಿಗೆ ಬೆಳೆ ಬೆಳಸಲು ಸಮರ್ಪಕವಗಿ ನೀರು ಸರಬರಾಜು ಮಾಡಲಜು ಕಾಲುವೆ ನೀರಿನ ಕೊರತೆಗೆ ಮುಕ್ಯ ಕಾರಣವಾಗಿರುವ ಮೈಲ್ ೬೯ರ ೧.೧೦ ಅಡಿ ಪ್ರಾರಂಭಿಸುವ ಮುಂಚೆ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ವ್ಯತ್ಯಾಸವಿರುವ ಅಳತೆಪಟ್ಟಿಯನ್ನು ಮುಂಬರುವ ಹಂಗಾಮಿ ನೀರಾವರಿಗೆ ನೀರು ಸರಬರಾಜು ಸಂಧಭದಲ್ಲಿ ಕಾಲುವೆಯಲ್ಲಿ ಅಳತೆಪಟ್ಟಿ ಸರಿಪಸಿಲು ಬರುವುದಿಲ್ಲವೆಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಕಾಲುವೆ ಖಾಲಿ ಇರವು ಈ ಸಮಯದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ, ನೀರಾವರಿ ಇಲಾಖೆ ಅಧಿಕಾರಿಗಳು ಪ್ರತ್ಯಕ್ಷವಾಗಿ ಎದುರಿಗೆ ನಿಂತು ಸರಿಯಾದ ಅಳತೆಪಟ್ಟಯನ್ನು ಅಳವಡಿಸಬೇಕೆಂದು ಒತ್ತಾಯಿಸಿದರು.
ಇಲ್ಲದಿದ್ದರೆ ಮೈಲ್ ೬೯ರ ನಂತರ ರೈತರು ತೊಂದರೆ ಅನುಭವಿಸಬೇಕಾಗುತ್ತದೆ. ತ್ವರಿತವಾಗಿ ಕ್ರಮಕೈಗೊಂಡು ಮೈಲ್ ೪೯ರ ಅಳತೆಪಟ್ಟಿ ಸರಿಪಡಿಸುವ ಮಹತ್ವದ ಕೆಲಸ ಜಾರಿಗೆ ಬರುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತರರಾದ ಶಂಕರಗೌಡ, ಅಮರೇಶ ಹೊಸಮನಿ,ಬಸವಗೌಡ, ಹೆಚ್.ವಿಶ್ವನಾಥ,ಶಿವು ಕುಮಾರ ಹಳ್ಳಿ ಹೊಸೂರು, ಎಂ.ಶರಣಗೌಡ ಮಾಡಿಗಿರಿ, ಆರ್.ಎಸ್.ಪಾಟೀಲ್ ಉಪಸ್ಥಿತರಿದ್ದರು.