ರಾಯಚೂರು,ಜು.29: ತುಂಗಭದ್ರ ಎಡದಂಡೆ ಕಾಲುವೆ ಮೈಲ್ 69ರ ನಂತರದಲ್ಲಿ ನೀರಾವರಿಗಾಗಿ ನಿಗಧಿ ಪಡಿಸಿದ ಭೂ ಪ್ರದೇಶಕ್ಕೆ ಆಧರಿಸಿ ಆಯಾ ಭಾಗದ ಪ್ರಮಾಣಿಗತ ಅನುಸಾರ ರೈತರ ಜಮೀನುಗಳಿಗೆ ನೀರು ಹರಿಸುವಂತೆ ತುಂಗಾಭದ್ರ ಎಡದಂಡೆ ಕಾಲುವೆ ರೈತರ ವೇದಿಕೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಜು. 19 ರಿಂದ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಹರಿಸಿದ್ದು, ಅಂದಿನಿ0ದ ಇಂದಿನವರೆಗೆ ಮೈಲ್ ನಂ.69 ಹಾಗೂ ಮೈಲ್ ನಂ.104ರವರೆಗೆ ಹರಿಸಬೇಕಾದ ಪ್ರಮಾಣ ನೀರುಹರಿಸಿಲ್ಲ, ತುಂಗಭದ್ರ ಎಡದಂಡ ಕಾಲುವೆ ವ್ಯಾಪ್ತಿಯಲ್ಲಿ ನೀರಾವರಿ ಒಳಪಟ್ಟ ಪ್ರದೇಶ ಎಂದು ಗುರುತಿಸಿ ಪ್ರಕಟಿಸಿರುವ ಎಲ್ಲಾ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಸರಿಯಾಗಿ ಹರಿಸಿಕೊಡುವ ಜವಾಬ್ದಾರಿ ನಿರ್ವಹಿಸಿಲ್ಲವೆಂದು ದೂರಿದರು.
ಇತ್ತೀಚಿಗೆ ತುಂಭದ್ರ ಎಡದಂಡೆ ಮುಖ್ಯ ಕಾಲುವೆ ಮೇಲೆ 69 ರಲ್ಲಿ ಕಾಲುವೆ ಮಧ್ಯದಲ್ಲಿ ನೇರವಾಗಿ ನಿಂತಿರುವ ಸರಿಯಾದ ಅಳತೆ ಪಟ್ಟಿ ಅಳವಡಿಸಲಾಗಿದೆ. ನೀರು ಬಿಟ್ಟ ನಂತರ ಪ್ರತಿ ಗಂಟೆಗಮ್ಮೆ ದಾಖಲಿಸಬೇಕು, ಗಂಟೆಗೊಮ್ಮೆ ನೀರಿನ ಗೇಜ್ ಪರಿಶೀಲಿಸಿ ಕೊನೆ ಭಾಗದ ರೈತರಿಗೆ ನೀರಿನ ತೊಂದರೆಯಾಗದ0ತೆ ಕ್ರಮಕ್ಕೆ ಮುಂದಾಗಬೇಕೆ0ದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಶಂಕರಗೌಡ ಹರವಿ, ವಿ.ಬಸನಗೌಡ, ಅಮರೇಶ ಹೊಸಮನಿ,ಆರ್.ಎಸ್. ಪಾಟೀಲ್, ಎಚ್.ವಿಶ್ವನಾಥ, ಶಿವಲಿಂಗಯ್ಯ ಸ್ವಾಮಿ, ರಮೇಶ, ಶಿವಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.