ರಾಯಚೂರು
ಸುರಪುರದ ಶಾಸಕರು ಹಾಗೂ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರು, ಹಿರಿಯರಾದ ರಾಜಾ ವೆಂಕಟಪ್ಪ ನಾಯಕ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಮನಸಿಗೆ ತುಂಬಾ ನೋವುಂಟು ಮಾಡಿದೆ. ಈ ಭಾಗದ ಪಕ್ಷ ಸಂಘಟನೆಗೆ ಹಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಅವರ ಮಾರ್ಗದರ್ಶನ ಅವಶ್ಯವಿತ್ತು ಅವರ ಅಗಲಿಕೆ ಪಕ್ಷಕ್ಕೆ ಹಾಗೂ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಮುಖಂಡರಾದ ರವಿ ಬೋಸರಾಜು ಸಂತಾಪ ಸೂಚಿಸಿದ್ದಾರೆ.
ಬಹುಕಾಲದ ಹಿರಿಯ ರಾಜಕಾರಣಿ ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು. ಇತ್ತೀಚೆಗೆ ಅವರೊಂದಿಗೆ ಮಾತನಾಡಿ ಕಲ್ಯಾಣ ಕರ್ನಾಟಕದ ಸಮಸ್ಯಗಳು ಹಾಗೂ ಅಭಿವೃದ್ಧಿ ವಿಷಯಗಳ ಕುರಿತು ಅನೇಕ ಬಾರಿ ಮಾತನಾಡಿ ಮಾಹಿತಿ ಹಾಗೂ ಅವರ ಸಲಹೆ ಪಡೆದಿದ್ದೇನೆ. ಅವರ ಅಗಲಿಕೆ ಪಕ್ಷಸಂಘಟನೆಗೆ, ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.
ಹಿರಿಯರಾಗಿದ್ದ ವೆಂಕಟಪ್ಪ ನಾಯಕ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.