ರಾಯಚೂರು: ಮೇ-26:
ಮುನ್ನೂರು ಕಾಪು ಸಮಾಜದ ವತಿಯಿಂದ ಕಾರ ಹುಣ್ಣುಮೆ ಅಂಗವಾಗಿ ಕಳೆದ ೨೩ ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಅತ್ಯಂತ ಆದ್ದೂರಿಯಾಗಿ ದಸರಾ ಹಬ್ಬದಂತೆ ವೈಭವ ದಿಂದ ಆಚರಣೆ ಮಾಡಲು ನಿರ್ಧಾರಿಸಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಮುಂಗಾರು ಸಾಂಸ್ಕೃತಿ ರಾಯಚೂರು ಹಬ್ಬದ ರೂವಾರಿ ಮತ್ತು ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ನಗರದ ಮಹಾಲಕ್ಷಿö್ಮ ಕಲ್ಯಾಣ ಮಂಟಪದಲ್ಲಿ ಮನ್ನೂರು ಕಾಪು ಸಮಾಜದ ಮುಖಂಡರ ನೇತೃತ್ವದಲ್ಲಿ ನಡೆದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ೨೪ನೇ ವರ್ಷದ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ಕಳೆದ ವರ್ಷಕ್ಕಿಂತ ಈ ವರ್ಷ ಆದ್ದೂರಿಯಾಗಿ ಆಚರಿಸುವ ಮೂಲಕ ದೇಶಕ್ಕೆ ಮಾದರಿಯಾಗಬೇಕೆಂದರು.
೨೪ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ರಾಯಚೂರು ಹಬ್ಬವನ್ನು ಜೂ.೨೧,೨೨ ಮತ್ತು ೨೩ ರಂದು ಮೂರು ದಿನ ಕಾಲ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿದ್ದು, ಮುಂಗಾರು ಹಬ್ಬದ ಆಚರಣೆ ಮೂಲಕ ನಶಿಸಿ ಹೋಗುತ್ತಿರುವ ಜಾನಪದ ಗ್ರಾಮೀಣ ಸೊಗಡು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದಿಂದ ಉಳಿಸಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಪ್ರತಿ ವರ್ಷ ಕಾರಹುಣ್ಣಿಮೆ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜ ದಿಂದ ಆಚರಣೆ ಮಾಡುವ ಮುಂಗಾರು ಹಬ್ಬ ರೈತರ ಕೃಷಿ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶ ಹೊಂದಲಾಗಿದೆ. ಸಾಂಸ್ಕೃತಿಕ ಹಬ್ಬದ ಆಚರಣೆ ಮೂಲಕ ಇತೆರ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಮುನ್ನೂರು ಕಾಪು ಸಮಾಜವು ಶೈಕ್ಷಣಿಕ, ರಾಜಿಕೀಯ, ಆರ್ಥಿಕವಾಗಿ ಬಲಿಷ್ಠವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿವಾಗಿ ಬಲಿಷ್ಠರಾಗಬೇಕು ಆ ನಿಟ್ಟಿನಲ್ಲಿ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕೆಂದರು. ಆಗ ಮಾತ್ರ ಸಮಾಜಕ್ಕೆ ಗೌರವ ಸಲ್ಲುತ್ತದೆ. ಯುವಕರು ಸಮಾಜಕ್ಕೆ ಶಕ್ತಿ, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಚರಣೆ ಮಾಡಬೇಕು, ಸಮಾಜದಿಂದ ಯುವಕರಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ಸಮಾಜ ವ್ಯಕ್ತಿಗತವಲ್ಲ ಸಮಾಜದ ಅಭಿವೃದ್ದಿ ಪರ ಕೆಲಸ ಮಾಡುತ್ತಿದೆ. ಸಮಾಜವನ್ನು ಗೌರಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಮಾತಿನ ಸ್ವಭಾವ ಕಡಿಮೆ ಮಾಡಿಕೊಂಡು ಅಭಿವೃದ್ದಿ ಪೂರ್ವಕ ಕಾರ್ಯಗಳನ್ನು ಹೆಚ್ಚಾಗಿ ಮಾಡಬೇಕು ಎಂದರು.
ಸಭೆಯಲ್ಲಿ ಸಮಾಜದ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಧನ ಕಾರ್ಯದರ್ಶಿ ಜಿ. ಬಸವರಾಜ್ ರೆಡ್ಡಿ, ಉಟೂಕುರು ಯು.ಕೃಷ್ಣಮೂರ್ತಿ, ರಾಳ ತಿಮ್ಮರೆಡ್ಡಿ, ಕುಕ್ಕಲ ದೊಡ್ಡ ನರಸಿಂಹಲು, ಬಂಗಿ ನರಸರೆಡ್ಡಿ, ಸುವರ್ಣಗಾರು ವೆಂಕಟರೆಡ್ಡಿ, ಬುಡತಪ್ಪಗಾರು ಆಂಜನೇಯ, ಜಿ.ಶೇಖರರೆಡ್ಡಿ, ಜಿ.ವೆಂಕಟರೆಡ್ಡಿ, ವಿನೋದರೆಡ್ಡಿ, ಮಹೇಂದ್ರರೆಡ್ಡಿ ಸೇರಿದಂತೆ ಮುನ್ನೂರು ಕಾಪು ಸಮಾಜದ ಎಲ್ಲ ಮುಖಂಡರು ಭಾಗವಹಿಸಿದರು.