ರಾಯಚೂರು: ಮೇ-14:
ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರ್ಡನ್‌ಗಳ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಹಾಸ್ಟೆಲ್ ಗಳಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಫುಡ್ ಗ್ರೇನ್ಸ್ ಸಪ್ಲೈ ಮಾಡಬೇಕು, ಹಾಸ್ಟೆಲ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ದೂರುಗಳು ಅಮಾನತು ಪ್ರಕರಣಗಳ ಕುರಿತು ಪರಿಶೀಲಿಸಿ ವಿಚಾರಣಾ ನೋಟಿಸ್ ನೀಡುವುದರ ಮೂಲಕ ಪ್ರಕರಣಗಳ ಕುರಿತು ಕೂಲಂಕುಶವಾಗಿ ತಪ್ಪು ಸರಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುಬೇಕು,
ಸಾರ್ವಜನಿಕ ಕೊಡುವ ದೂರುಗಳು ,ಪತ್ರಿಕೆ ಮಾಧ್ಯಮದ ವರದಿಗಳ ಆಧಾರದ ಮೇಲೆ ಕ್ರಮ ವಹಿಸದೆ ಸ್ಥಳಕ್ಕೆ ಭೇಟಿ ನೀಡಿ ಸರಿ ತಪ್ಪು ಗಮನಿಸಿ ಸಂಬAಧ ಪಟ್ಟ ಮೇಲೆ ಕ್ರಮ ಜರುಗಿಸಬೇಕು, ಪ್ರತಿ ತಿಂಗಳು ಹಾಸ್ಟೆಲ್‌ಳಿಗೆ ದವಸ ಧಾನ್ಯಗಳನ್ನು ಸರಬರಾಜು ಮಾಡಬೇಕು, ಕುಡಿಯುವ ನೀರು ಮತ್ತು ಶೌಚಾಲಯ ಸ್ವಚ್ಛತೆಗಳ ಬಗ್ಗೆ ಮತ್ತು ಇತರೆ ಬಿಲ್ಲುಗಳ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಸಹಕರಿಸಿ ವಾರ್ಡನ್ ಗಳಿಗೆ ಕರ್ತವ್ಯ ನಿರ್ಮಿಸಲು ನೈತಿಕ ಬೆಂಬಲ ನೀಡಬೇಕು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸಿ ತಮ್ಮ ಸಮಸ್ಯೆಗಳು ಪರಿಹಾರಕ್ಕೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಸಂಘದ ಪದಾಧಿಕಾರಿಗಳು ಮತ್ತು ಬಿಸಿಮ್ ,ಮೈನಾರಿಟಿ,ಪ.ಪಂ,ಪ.ಜಾಹಾಸ್ಟೇಲ್ ವಾರ್ಡನಗಳು ಉಪಸ್ಥಿತರಿದ್ದರು.