ರಾಯಚೂರು: ಜೂ-26:
ಕೇಂದ್ರ ವಿಮಾನಯಾನ ಸಚಿವ ರಾಮ ಮೋಹನ ನಾಯ್ಡು ಅವರನ್ನು ದೆಹಲಿಯಲ್ಲಿ ಭೇಟಿಯಾದ ರಾಯಚೂರು ಸಂಸದ ಜಿ.ಕುಮಾರ ನಾಯಕ ರಾಯಚೂರು ವಿಮಾನ ನಿಲ್ದಾಣದ ಸ್ಥಳಕ್ಕೆ ಸಂಭAದಿಸಿದ ಸಮಸ್ಯೆಗಳ ಪರಿಹಾರಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.
ನವದೆಹಲಿಯ ವಿಮಾನಯಾನ ಸಚಿವರ ನಿವಾಸದಲ್ಲಿ ಭೇಟಿಯಾದ ಸಂಸದರು ಮೊದಲಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ನಂತರ ಸಚಿವರೊಂದಿಗೆ ಚರ್ಚಿಸಿ ರಾಯಚೂರಿನಲ್ಲಿ ಲಭ್ಯವಿರುವ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮತ್ತು ಅಗತ್ಯವಿರುವ ಅನುದಾನವನ್ನು ರಾಜ್ಯ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ. ಆದರೆ ವಿಮಾನ ನಿಲ್ದಾಣ ಸ್ಥಳದ ಕುರಿತಂತೆ ಭಾರತೀಯ ವಿಮಾನ ಪ್ರಾಧಿಕಾರ ಕೆಲ ಆಕ್ಷೇಪಣೆಗಳನ್ನು ಸಲ್ಲಿಸಿದೆ.
ಈಗಾಗಲೇ ಜಿಲ್ಲಾಡಳಿತ ಪೂರಕವಾಗಿ ಒತ್ತುವರಿ ತೆರವು ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದೆ. ಕೇಂದ್ರದ ವಿಮಾನ ಯಾನ ಇಲಾಖೆಯಹಿಂದ ಅನುಮೋದನೆ ದೊರೆತಲ್ಲಿ ಕಾಮಗಾರಿ ಪ್ರಾಂರಲಿಸಲು ಅನುಕೂಲವಾಗುತ್ತದೆ. ಮಹತ್ವಕಾಂಕ್ಷಿ ಜಿಲ್ಲೆ ಹಾಗೂ ಹಿಂದುಳಿದ ಪ್ರದೇಶವಾದ ರಾಯಚೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾನ ನಿರ್ಮಾಣ ಅವಶ್ಯಕತೆಯಿದೆ. ದೇಶದ್ಯಾಂತ ಅನೇಕ ಜಿಲ್ಲೆಗಳಲ್ಲಿ ಉಡಾನ್ ಸೇರಿದಂತೆ ಇತರೆ ಯೋಜನೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ, ಅನುದಾನ ಲಭ್ಯವಿದ್ದರೂ ವಿಳಂಬವಾಗುತ್ತಿದೆ ಎಂದು ಮನವರಿಕೆ ಮಾಡಿದರು.
ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು,ಕ ಅನುಮೋದನೆಗೆ ಇರುವ ಸಮಸ್ಯೆಗಳನ್ನು ನೀಗಿಸಿ ಅನುಮತಿಸಬೇಕೆಂದು ಮನವಿ ಮಾಡಿದಜರು. ಶೀಘ್ರದಲ್ಲಿ ಸಂಭ0ದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಮನ ನಿಲ್ದಾಣ ಕಾಮಗಾರಿಗೆ ಬೇಕಾದ ಕ್ರಮ ಕೈಗೊಳ್ಳುವದಾಗಿ ರಾಮ ಮೋಹನ ನಾಯ್ಡು ಭರವಸೆ ನೀಡಿದ್ದಾರೆ.