ಬೀದರ. ಆ. ೨೮ : ಜಿಲ್ಲೆಯಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ತಕ್ಷಣವೇ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ರ‍್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ರ‍್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹೆಸರು ರಾಶಿ ಕೆಲಸ ಪ್ರಾರಂಭಗೊಂಡು ಎರಡು ವಾರಗಳಾಗುತ್ತ ಬಂದಿದೆ. ಇದುವರೆಗೆ ರ‍್ಕಾರದಿಂದ ಹೆಸರು ಖರೀದಿ ಕೇಂದ್ರ ಆರಂಭಿಸಿಲ್ಲ. ಶೇ ೫೦ರಿಂದ ೬೦ರಷ್ಟು ಹೆಸರು ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆಗೆ ಮಾರಾಟ ಮಾಡಿದ್ದಾರೆ. ರ‍್ಕಾರದ ಎಂಎಸ್‌ಪಿ ಪ್ರಕಾರ ಪ್ರತಿ ಕ್ವಿಂಟಲ್ ಹೆಸರು ₹೮,೬೮೨ಕ್ಕೆ ಮಾರಾಟವಾಗಬೇಕು. ಆದರೆ, ₹೬ ಸಾವಿರದಿಂದ ₹೬,೫೦೦ಕ್ಕೆ ಮಾರಾಟವಾಗುತ್ತಿದೆ. ಪ್ರತಿ ಕ್ವಿಂಟಲ್‌ಗೆ ₹೨ ಸಾವಿರ ವ್ಯತ್ಯಾಸವಾಗುತ್ತಿದೆ. ರೈತರಿಗೆ ತಕ್ಷಣವೇ ಹಣದ ಅಗತ್ಯ ಇರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ.ರ‍್ಕಾರದಿಂದ ಖರೀದಿ ಕೇಂದ್ರ ಆರಂಭಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗೋಳು ತೋಡಿಕೊಂಡರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನರ‍್ಲಕ್ಷ್ಯದಿಂದ ಹೀಗಾಗಿದೆ. ಖರೀದಿ ಕೇಂದ್ರ ತೆರೆಯದೇ ಎಂಎಸ್‌ಪಿ ಘೋಷಿಸಿದರೆ ಏನು ಪ್ರಯೋಜನ? ಉದ್ದು, ಸೋಯಾ ಪ್ರದೇಶ ಕೂಡ ಹೆಚ್ಚಾಗಿದ್ದು, ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವಾದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಧಾನ ಕರ‍್ಯರ‍್ಶಿ ದಯಾನಂದ ಸ್ವಾಮಿ, ಕರ‍್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಮುಖಂಡರಾದ ಸುಭಾಷ ರಗಟೆ, ನಾಗಯ್ಯಾ ಸ್ವಾಮಿ, ಶಿವಾನಂದ ಹುಡಗೆ, ಪ್ರವೀಣ ಕುಲರ‍್ಣಿ, ಪ್ರಕಾಶ ಬಾವಗೆ ಮತ್ತಿತರರು ಹಾಜರಿದ್ದರು.
ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸಲು ಆಗ್ರಹ
WhatsApp Group
Join Now