ರಾಯಚೂರು:
ಜೀವನದಲ್ಲಿ ಅನುಭವಿಸಿದ ನೋವು ನಲಿವುಗಳನ್ನು ಭಗತರಾಜ್ ನಿಜಾಮಕಾರಿ ಅವರು ಭಗತನ ಪದಗಲು ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆಂದು ಗಡಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ಎಸ್.ಜಿ.ಹೇಳಿದರು.
ನಗರದ ಕನ್ನಡ ಭವನದಲ್ಲಿ ಬರಹ ಪ್ರಕಾಶನ, ವಿಮಲಾಬಾಯಿ ನಿಜಾಮಕಾರಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯಪರಿಷತ ಮತ್ತು ದೇವರಾಜ್ ಅರಸು ವಿಚಾರ ವೇದಿಕೆಗಳ ಸಂಯುಕ್ತಶ್ರಯದಲ್ಲಿ ಆಯೋಜಿಸಿದ ಭಗತನ ಪದಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಭಗತರಾಜ ನಿಜಾಮಕಾರಿ ಅವರು ರಚಿಸಿದ ಭಗತನ ಪದಗಳು ಕೃತಿಯಲ್ಲಿ ೧೨೮ ಗಧ್ಯಗಳನ್ನು ರಚಿಸಿದ್ದಾರೆ. ಅದರಲ್ಲಿ ೬೫ನೇ ಗದ್ಯದಲ್ಲಿ ತಮ್ಮ ಪತ್ನಿ ಹೆಸರು ಒಳಗೊಂಡAತೆ ತಮ್ಮ ಅನುಭಾವ ದಿಂದ ನೋವು ನಲಿವುಗಳ, ತಮ್ಮ ಮಾತಿನಲ್ಲಿ ಪದಗಳನ್ನು ಜೋಡಿಸಿ ಬರೆದಿದ್ದು ವಿಶೇಷವಾಗಿದೆ ಎಂದರು. ಈ ಕೃತಿಯಲ್ಲಿ ಅವರು ಪದಗಳ ಬಳಕೆಯಿಂದ ಈ ಕೃತಿಗೆ ಒಂದು ಅರ್ಥ ಬಂದಿದೆ. ಸಾಕಷ್ಟು ವಚನಕಾರರು ವಚನಗಳನ್ನು ರಚಿಸಿದ್ದಾರೆ. ಅ ವಚನಗಳಲ್ಲಿ ಕೊನೆಯಲ್ಲಿ ಅಂಕಿತವನ್ನು ಹಾಕಿದ್ದಾರೆ. ಅವರ ಸಾಲಿನಲ್ಲಿ ಇವರ ಕೃತಿ ಸೇರುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಸಾಪ ಮಾಜಿ ಅಧ್ಯಕ್ಷ ಬಸವ ಪ್ರಭು ಪಾಟೀಲ್ ಬೆಟ್ಟದೂರು ಮಾತನಾಡಿ, ಭಗತರಾಜ ನಿಜಾಮಕಾರಿ ಅವರ ಮನಸು ಮೃದು ಸ್ವಭಾವರಾಗಿದ್ದರೂ ಅವರು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು, ಬಂಡಾಯ ಸಾಹಿತ್ಯ ಹುಟ್ಟಿಗೆ ಇವರೂ ಸಹ ಒಬ್ಬರು ಕಾರಣರಾಗಿದ್ದಾರೆ. ಬೋಳ ಬಂಡೆಪ್ಪ,ಜAಬಣ್ಣ, ಶಾಂತರಸ ಸಮಕಾಲಿನವರು, ಜೊತೆಗೆ ಶಾಂತರಸರ ಪ್ರೀತಿಯ ಶಿಶ್ಯರಾದವರು ಎಂದು ತಿಳಿಸಿದರು.
ವೇದಿಕೆ ಮೇಲೆ ಕಸಾಪ ಜಿಲ್ಲಾ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು ಚಿತ್ರಕಲಾವಿದ ಎಂ.ಕೃಷ್ಣ, ತಾಲೂಕ ಕಸಾಪ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ದಂಡಪ್ಪ ಬಿರಾದಾರ ಉಪಸ್ಥಿತರಿದ್ದರು.