ರಾಯಚೂರು: ಮೇ-೧೩: ಬಿಸಲಿನ ಧೆಗ್ಗೆಯಿಂದ ತತ್ತರಿಸಿದ ಜನತೆಗೆ ರವಿವಾರ ರಾತ್ರಿ ಸುರಿದ ಮಳೆ ತಂಪು ತಂದ್ದರೂ ಸಹ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯವಸ್ಥಗೊಂಡ ಘಟನೆ ನಡೆದಿದೆ.
ನಗರದ ಎಪಿಎಂಸಿಯಲ್ಲಿ ಮಾರಾಟಕ್ಕೆ ತಂದ ಭತ್ತ ನೀರಿನಲ್ಲಿ ತೋಯ್ದು ಲಕ್ಷಾಂತರ ರೂ. ರೈತರದ್ದು ನಷ್ಟವಾಗಿದೆ. ತೆಲಂಗಾಣ, ಆಂದ್ರ ಪ್ರದೇಶ ಸೇರಿದಂತೆ ಜಿಲ್ಲೆಯ ರೈತರ ಭತ್ತ ನೀರುಪಾಲಾಗಿದೆ. ಕೆಲ ವರ್ತಕರು ಖರೀದಿಸಿದ ಭತ್ತವೂ ನೀರಿನಲ್ಲಿ ತೋಯ್ದು ಹಾಳಾಗಿದೆ. ಸಾಯಿ ಕೃಪಾ ಟ್ರೇರ‍್ಸ್ಗೆ ಸೇರಿದ ನಾಲ್ಕು ನೂರು ಚೀಲ ಭತ್ತ ನೀರಿನಲ್ಲಿ ಮುಳಿಗಿದೆ. ಎಪಿಎಂಸಿಯಲ್ಲಿ ರೈತರು ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದೆ.ಪ್ರತಿಯೊಬ್ಬರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ರೈತರಿಗೆ ಕರ ಸಂಗ್ರಹಿಸುವ ಎಪಿಎಂಸಿ ರೈತರ ಮಾಲಿಗೆ ರಕ್ಷಣೆ ನೀಡುತ್ತಿಲ್ಲ, ಹಾನಿಗೆ ರೈರಿಗೆ ಪರಿಹಾರ ನೀಡಬೇಕೆಂದು ರೈತರ ಒತ್ತಾಯವಾಗಿದೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿಯೂ ರೈತರ ಜಮೀನುಗಳಿಗೆ ನುಗ್ಗಿದ ಮಳೆ ನೀರು ಸಮಸ್ಯೆಯನ್ನು ಉಂಟುಮಾಡಿದೆ. ಚಂದ್ರಬAಡಾ, ಕಡಗಂದೊಡ್ಡಿ, ಸಿಂಗನೋಡಿ, ಸಗಮಕುಂಟಾ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಬೆಳೆ ನಷ್ಟವಾಗಿದೆ. ಮಾವು, ಮೋಸಂಬಿ,ಪಪ್ಪಾಯಿ, ದಾಳಿಂಬೆ ಫಸಲು ಗಾಳಿ ಮಳೆಗೆ ನೆಲಕ್ಕುರುಳಿವೆ. ರಾತ್ರಿ ನಿದ್ದೆಯುಲ್ಲಿದ್ದ ಜನರು ಏಕಾಏಕಿ ಜೋರಾದ ಮಳೆಯಿಂದಾಗಿ ಜಾಗರಣೆ ಮಾಡುವಂತಾಗಿದೆ. ಮಳೆಯಿಂದ ಆಶ್ರಯ ಪಡೆಯಲು ಜನರು ಬೇರೆ ಸಥಳಕ್ಕೆ ತೆರಳುವಂತಾಗಿದೆ. ನಗರದ ತಗ್ಗು ಪ್ರದೇಶಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ರಸ್ತೆ ಪಕ್ಕದ ಚರಂಡಿ ನೀರು ರಸ್ತೆ ಮೇಲೆ ಬಂದು ಚರಂಡಿ ನೀರಿನಲ್ಲಿ ಜನ ಸಂಚಾರಿಸವAತಾಗಿದೆ.
ಯರಗೇರಾದಲ್ಲಿ 136 ಮಿ.ಮಿ.ಮಳೆ
ರಾಯಚೂರು: ಮೇ-೧೩: ತಾಲೂಕಾದ್ಯಂತ ರಾತ್ರಿಯಿಡಿ ಭಾರಿ ಮಳೆಯಾಗಿದ್ದು, ಯರಗೇರಾ ಹೋಬಳಿಯಲ್ಲಿ ೧೩೬ ಮಿಲಿ ಮೀಟರ್ ದಾಖಲೆ ಮಳೆಯಾಗಿದೆ.
ಸಿಂಗನೋಡಿ ವ್ಯಾಪ್ತಿಯಲ್ಲಿ ೫೨.೫ ಮಿ.ಮೀ. ಅತಿ ಕಡಿಮೆ ಮಳೆಯಾಗಿದೆ. ಮಿಟ್ಟಿ ಮಲ್ಕಾಪೂರದಲಿ ೧೩೨ ಮಿ.ಮೀ.ಕಲಮಲ ಹೋಬಳಿಯಲ್ಲಿ ೧೧೫ ಮಿ.ಮೀ., ಬೀಜಗೇರಾ ಮಿ.ಮೀ, ಶಾಖಾವಾದಿಯಲ್ಲಿ ೧೦೫.೫ ಮಿ.ಮೀ. ಮಳೆಯಾಗಿದೆ.
ಮರ್ಚೆಟಾಳ ವ್ಯಾಪ್ತಿಯಲ್ಲಿ ೧೦೨ ಮಿ.ಮೀ.ಪೂರ್ತಿಪ್ಲಿಯಲ್ಲಿ ೮೯ ಮಿ.ಮೀ. ಕಾಡ್ಲೂರು ವ್ಯಾಪ್ತಿಯಲ್ಲಿ ೮೭ ಮಿ.ಮೀ.ಯಾಪದಲದಿನ್ನಿ ವ್ಯಾಪ್ತಿಯಲ್ಲಿ ೮೭ ಮಿ.ಮೀ.ಲಿಂಗನದೊಡ್ಡಿಯಲ್ಲಿ ೮೪ ಮಿ.ಮೀ.ಚಂದ್ರಬAಡಾ ವ್ಯಾಪ್ತಿಯಲ್ಲಿ ೬೪ ಮಿ.ಮೀ.ಚಿಕ್ಕಸೂಗೂರು ವ್ಯಾಪ್ತಿಯಲ್ಲಿ ೬೩.೫ ಮಿ.ಮೀ. ಗಾಣದಾಳ ವ್ಯಾಪ್ತಿಯಲ್ಲಿ ೬೩.೫ ಮಿ.ಮೀ.ಇಡಪನೂರಿನಲ್ಲಿ ೫೯ ಮಿ.ಮೀ.,ಸಿಂಗನೋಡಿ ವ್ಯಾಪ್ತಿಯಲ್ಲಿ ೫೨.೫ ಮಿ.ಮೀ.ಮಳೆಯಾಇದೆ.