ರಾಯಚೂರು: ಮೇ-19:
ಕೋವಿಶಿಲ್ಡ್ ಅಡ್ಡ ಪರಿಣಾಮ ದಿಂದ ಲಿಂಗಸೂಗೂರ ತಾಲೂಕಿನ ಗೆಜ್ಜೆಲಗಟ್ಟಾ ಗ್ರಾಮದ ಹುಸೇನಪ್ಪನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇತನ ಪ್ರಾಣ ಉಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಾಲಿಟೋ ಬಿರೋ ಸದಸ್ಯ ಆರ್. ಮಾನಸಯ್ಯ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರೀಮ್ಸ್)ನ ತೀವ್ರ ಘಟಕದಲ್ಲಿ ಹುಸೇನಪ್ಪ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದ ಸ್ಥಿತಿ ಅತ್ಯಂತ ಗಂಭೀರ ಹಂತಕ್ಕೆ ತಲುಪಿದೆ. ವೈದ್ಯರು ಕಳೆದ ೧೦ ದಿನಗಳಿಂದ ನೀಡುತ್ತಿರುವ ಚಿಕಿತ್ಸೆ ಫಲಿತಾಂಶ ಸೊನ್ನೆಯಾಗಿದೆ.
ಈತ ಆಸ್ಪತ್ರೆಗೆ ಮಾತನಾಡುತ್ತಲೇ ನಡೆಯುತ್ತಲೇ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಆದರೆ ದಾಖಲಾದ ನಂತರ ಇತನ ರಕ್ತ ಹೆಪ್ಪುಗಟ್ಟಿ, ಹೃದಯ ನಿಂತು, ಶ್ವಾಸಕೋಶ ಸ್ಥಗಿತಗೊಂಡು, ಪ್ರಜ್ಞಾಹೀನನಾಗಿ ಆಸ್ಪತ್ರೆ ಐಸಿಯುನ ಬೆಡ್‌ನಲ್ಲಿ ಬಿದ್ದಿದ್ದಾನೆ. ಆಸ್ಪತ್ರೆಗೆ ಬಂದು ದಾಖಲಾದ ಒಂದೇ ಗಂಟೆಯಲ್ಲಿಯೇ ಇಂತಹ ಗಂಭೀರ ಹೊಡೆತಕ್ಕೆ ಗುರಿಯಾಗಿದ್ದಾನೆಂದರು. ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳೆಂದು ಶೇ. ನೂರರಷ್ಟು ಸಾಬೀತಾಗಿದೆ ಎಂದರು. ಈ ಅಡ್ಡ ಪರಿಣಾಮದ ರೋಗಾಣುವಿಗೆ ಟ್ರಾಮಬೋಸಿಸ್ ವಿತ್ ಟ್ರಾಂಬೋ ವಿತ್ ಟ್ರಾಂಬೋ ಸೈತೋಷಪಿಯನ್ ಸಿನ್ರೂಮ್ಸ್ (ಟಿಟಿಎಸ್) ಎಂದು ಅಂತರಾಷ್ಟಿçÃಯ ಮತ್ತು ರಾಷ್ಟಿçÃಯ ಉನ್ನತ ಅಧ್ಯಯನ ಸಂಸ್ಥೆಗಳು ಹೆಸರು ನೀಡಿವೆ. ಈ ಲಸಿಕೆಯನ್ನು ಅಭಿವೃದ್ದಿ ಪಡಿಸಿದ ಬ್ರಿಟನ್ ಸ್ವೀಡನ್ ಮೂಲದ ಆಸ್ಟಾçಜೆನೆಕಾ ಕಂಪನಿಯು ಈ ಅಡ್ಡ ಪರಿಣಾಮದ ಬಗ್ಗೆ ಬ್ರಿಟನ್ ನ್ಯಾಯಾಲಯ ಒಂದರಲ್ಲಿ ದೃಢಪಡಿಸಲಾಗಿದೆ. ಸಾಕಷ್ಟು ಪೂರ್ವ ಪರೀಕ್ಷೆಗಳಿಲ್ಲದೆ ಇದನ್ನು ಜನಗಲ ಮೇಲೆ ಬಲ್ಕಾರ ದಿಂದ ಪ್ರಯೋಗಿಸಿದ ಭಾರತ ಸರಕಾರ ಇದಕ್ಕೆ ಹೊಣೆಯಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಟಿಟಿಎಸ್‌ಗೆ ಮೊಟ್ಟ ಮೊದಲು ಬಲಿ ಪಶುವಾದ ಹುಸೇನಪ್ಪ ಗೆಜ್ಜಲಗಟ್ಟ ಇವರ ಪ್ರಾಣವನ್ನು ಸರಕಾರವೇ ರಕ್ಷಿಸಬೇಕಾಗಿದೆ ಎಂದರು. ಈಗಾಗಲೇ ಸಂತ್ರಸ್ತ ಪತ್ನಿ ಬಳ್ಳಮ್ಮ ನೀಡಿದ ದೂರಿನ ಅನ್ವಯ ಕೂಡಲೇ ಆಸ್ಟಾçಜೆನೆಕಾ ಹಾಗೂ ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಆರೋಗ್ಯ ಇಲಖೆ ಉನ್ನತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೋವಿಡ್-೧೯ ತಡೆಗಟ್ಟುವ ಹೆಸರಲ್ಲಿ ದೇಶದ ಶೇ.೭೦ರಷ್ಟು ಜನರನ್ನು ಬಲಾತ್ಕಾರ ದಿಂದ ಕಡ್ಡಾಯವಾಗಿ ಲಸಿಕೆ ಹಾಕಲಾಯಿತು. ಲಸಿಕೆ ಹಾಕಿಸಿಕೊಳ್ಳದಿದ್ದರೆ ಸರಕಾರ ಸೌಲಭ್ಯ ರದ್ದು ಮಾಡುವ ಬೆದರಿಕೆ ಹಾಕಲಾಯಿತು ಎಂದು ಆರೋಪಿಸಿದರು.
ಈ ಬಲತ್ಕಾರದ ಮೇರೆಗೆ ಸಂತ್ರಸ್ತ ಹುಸೇನಪ್ಪ ದಿ.೨೨-೧೦-೨೦೨೧ ಹಾಗೂ ೧೧-೨-೨೦೨೨ ರಂದು ಎರಡು ಕೋವಿಶೀಲ್ಡ್ ಚುಚ್ಚುಮದ್ದು ಹಾಕಿಸಿಕೊಂಡಿದ್ದಾನೆ. ಈತನ ಸರ್ಟಿಫಿಕೇಟ್ ಐಡಿ ನಂ.೨೨೫೧೫೫೬೩೯೩೯ ಆಗಿರುತ್ತದೆ ಎಂದರು.
ರೀಮ್ಸ್ ಆಸ್ಪತ್ರೆ ದಾಖಲಾಗುವ ಮುಂಚೆ ತೀವ್ರ ತಲೆನೋವು, ಹೊಟ್ಟೆ ನೋವು,ವಾಂತಿ, ಜ್ವರ, ಕೈಕಾಲು ಊತ ಕಾಣಿಸಕೊಂಡಿವೆ. ಇವು ಟಿಟಿಎಸ್ ನ ಪ್ರಾಥಮಿಕ ಲಕ್ಷಣಗಳೆಂದರು.
ಆಸ್ಪತ್ರೆಗೆ ದಾಖಲಾದ ಮೇಲೆ ರಕ್ತ ಹೆಪ್ಪುಗಟ್ಟುವಿಕೆ, ಹೃದಯ ನಿಲುಗಡೆ, ಶ್ವಾಸಕೋಸ ಸ್ಥಗಿತ, ಮೆದುಳು ನಿಷ್ಕಿçÃಯ ಹಾಗೂ ಕಿಡ್ನಿ ಲಿವರ್ ಮುಂತಾದ ಗಂಭೀರ ಪರಿಣಾಮಗಳಿಂದ ಈತ ಜೀವಂತ ಹೆಣವಾಗಿದ್ದಾನೆಂದರು.
ದಿ.೧೬ ರಂದು ಜಿಲ್ಲಾಧಿಕಾರಿಗಳು,ಜಿಲ್ಲಾ ಆರೋಗ್ಯಾಧಿಕಾರಿಗಳು,ರೀಮ್ಸ್ ನಿರ್ಧೇಶಕರಿಗೆ ಹುಸೇನಪ್ಪ ಪತ್ನಿ ಬುಳ್ಳಮ್ಮ ದೂರು ನೀಡಿ ನೆರವು ಕೋರಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದರು.
ಸAತ್ರಸ್ತ ಹುಸೇನಪ್ಪನ ಪ್ರಾಣ ಉಳಿಸಬೆಕು, ಸೂಕ್ತ ಪರಿಹಾರ ನೀಡಬೇಕು, ತಪ್ಪಿತಸ್ಥ ಆಸ್ಟಾçಜೆನೆಕಾ ಹಾಗಜು ಸಿರಮ್ ಇನ್ಸಿಟೂಟ್ ಆಫ್ ಇಂಡಿಯಾ ಕಂಪನಿ ಹಾಗೂ ಸರಕಾರಿ ಆರೋಗ್ರಯ ಏಜೆನ್ಸಿಗಳ ಮೇಲೆ ಪ್ರಕರಣ ದಾಖಲಿಸಬೇಕು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಟಿಟಿಎಸ್ ಸ್ವಾತನ ಉನ್ನತಾ ಚಿಕಿತ್ಸಾ ಕೇಂದ್ರಗಳು ಆರಂಭಿಸಬೇಕು, ಟಿಟಿಎಸ್ ಪ್ರಾಥಮಿಕ ಲಕ್ಷಣ ಗುರುತಿಸುವ ಸಮೀಕ್ಷೆ ಆರಂಭಿಸಬೇಕು, ಸರಕಾರ ಈ ಕುರಿತು ಪ್ರಕಟಣೆ ಹೊರಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಂಗಾಧರ, ಜಿ.ಅಮರೇಶ, ಅಜೀಜ್ ಜಾಗೀರದಾರ್ ಉಪಸ್ಥಿತರಿದ್ದರು.