ಸ್ವಾಮಿನಾಥನ್ ವರದಿ ಜಾರಿ ಮಾಡದೇ ರೈತ ಸಮುದಾಯಕ್ಕೆ ಅನ್ಯಾಯ: ಬಡಗಲಪುರ ನಾಗೇಂದ್ರ

Eshanya Times
WhatsApp Group Join Now

ಬೀದರ. ಏ.೩೦ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ರ‍್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆ ಬೆಲೆ ನೀಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕರ‍್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸುವುದರ ಮೂಲಕ ಮಾತಿಗೆ ತಪ್ಪಿ ರೈತ ಸಮುದಾಯಕ್ಕೆ ಮೋಸ ಮಾಡಿದರು ಎಂದು ರ‍್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರೈತರ ಆದಾಯ ದುಪ್ಪಟ್ಟುಗೊಳ್ಳಲಿಲ್ಲ, ಬದಲಿಗೆ, ಕೃಷಿ ಸಬ್ಸಿಡಿಗಳನ್ನು ಕಡಿತಗೊಳಿಸಿ, ಕೃಷಿ ಪರಿಕರಗಳ ಬೆಲೆ ಹೆಚ್ಚಿಸಿ ಕೃಷಿಗೆ ತಗಲುವ ವೆಚ್ಚವನ್ನು ದುಪ್ಪಟ್ಟುಗೊಳಿಸಿದರು. ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು ೫ ಲಕ್ಷ ಕೋಟಿ ಹಣ ಸಾಕು, ಆದರೆ ಹಣವಿಲ್ಲ ಎಂಬ ಕಾರಣ ನೀಡಿ ಕೇಂದ್ರ ರ‍್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ, ಆದರೆ ಮೋದಿಯವರ ಆಳ್ವಿಕೆಯಲ್ಲಿ ಕರ‍್ಪೋರೇಟ್ ಕಂಪನಿಗಳ ೨೦ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗ ರೈತ ಕುಟುಂಬಗಳ ಮೇಲಿನ ಸಾಲದ ಹೊರೆಯಲ್ಲಿ ಶೇ ೩೦ ರಷ್ಟು ಹೆಚ್ಚಳವಾಗಿದೆ. ರೈತರನ್ನು ಶಾಶ್ವತವಾಗಿ ಸಾಲ ವಿಷ ವೃತ್ತದಲ್ಲಿ ಸಿಕ್ಕಿಸಲಾಗಿದೆ. ರ‍್ಕಾರ ಕೃಷಿ ಅಭಿವೃದ್ಧಿಗೆ ಕೇಂದ್ರ ರ‍್ಕಾರ ಪ್ರತಿ ರ‍್ಷ ಬಜೆಟ್ಟಿನಲ್ಲಿ ನೀಡುವ ಹಣದಲ್ಲಿ ಶೇ.೩೦ ಕಡಿತಗೊಳಿಸಿದೆ. ಮೋದಿ ಆಡಳಿತದ ಹತ್ತು ರ‍್ಷಗಳಲ್ಲಿ ದಾಖಲಿತ ಅಂಕಿ ಸಂಖ್ಯೆಗಳ ೧ ಲಕ್ಷದ ೪೭೪ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ಸರಾಸರಿ ೩೦ ರೈತರು ಬದುಕಿನ ಬಾಧೆ ತಾಳಲಾರದೆ ಸಾವಿಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಸಾಂತ್ವಾನ ಹೇಳಲಿಲ್ಲ ಇದಕ್ಕೆ ಮೋದಿಯವರಿಗೆ ಸಮಯಾವಕಾಶ ಇರಲಿಲ್ಲ, ಆದರೆ ಅದಾನಿ ಮೊಮ್ಮಗನನ್ನು ನೋಡಲು ಸಮಯವಿತ್ತು ಎಂದರು.
ರಾಜ್ಯದ ೨೨೩ ತಾಲ್ಲೂಕುಗಳಲ್ಲಿ ಹಿಂದೆಂದೂ ಕಂಡರಿಯದಂತಹ ಬರ ಉದ್ಭವವಾಗಿದೆ. ರಾಜ್ಯಕ್ಕೆ ಎನ್.ಡಿ.ಆರ್.ಎಫ್ ನೀತಿ ಪ್ರಕಾರ ಬರಬೇಕಾದ ೧೮ ಸಾವಿರ ಕೋಟಿ ಅನುದಾನದಲ್ಲಿ ಒಂದು ಪೈಸವನ್ನು ಬಿಡುಗಡೆಮಾಡಿಲ್ಲ. ರ‍್ಕಾರ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ. ಆಪತ್ಕಾಲಿನ ನಿಧಿಯನ್ನೂ ಕೂಡ ದರ‍್ಬಳಕೆ ಮಾಡಿಕೊಂಡಿದೆ. ಬದಲಿಗೆ ವಿಮೆ ಕಡೆ ಬೊಟ್ಟು ಮಾಡುತ್ತಿದೆ. ಬೆಳೆ ವಿಮೆ ಪರ‍್ತಿ ಖಾಸಗಿ ಕಂಪನಿಗಳ ಕೈಗಳಲ್ಲಿದ್ದು, ರೈತರಿಗೆ ಮಹಾ ವಂಚನೆ ನಡೆಯುತ್ತಿದೆ.
ರ‍್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘದ ಗೌರವಾಧ್ಯಕ್ಷರು ಹಾಗೂ ರೈತ ರ‍್ವೋದಯ ಪಕ್ಷದ ಮುಖಂಡರಾದ ಚಾಮರಸ ಮಾಲೀಪಾಟೀಲ ಮಾತನಾಡಿ, ೧೯೮೭ರಲ್ಲಿ ರಾಜ್ಯದಲ್ಲಿ ಗುಂಡೂರಾವ ರ‍್ಕಾರವಿದ್ದಾಗ ಸಾವಿರಾರು ರೈತರ ಆತ್ಮಹತ್ಯೆ ನಡೆದವು. ಹಾಗಾಗಿ ಗುಂಡು ಹೊಡೆದ ಗುಂಡುರಾವ ರ‍್ಕರಕ್ಕೆ ನಮ್ಮ ಮತವಿಲ್ಲ ಎಂಬ ಅಭಿಯಾನ ಹಮ್ಮಿಕೊಂಡು ಗುಂಡುರಾವ ರ‍್ಕಾರವನ್ನು ಸೋಲಿಸಲಾಗಿತ್ತು. ಹಾಗೇ ೨೦೧೪ರಿಂದ ಕಳೆದ ೧೦ ರ‍್ಷಗಳಿಂದ ಮೋದಿ ರ‍್ಕಾರ ರೈತರಿಗೆ ಮಾಡಿದ ಮೋಸ ಅಷ್ಟಿಷ್ಟಲ್ಲ. ಸಂಸತ್ತಿನಲ್ಲಿ ಮೂರು ೩ ಕೃಷಿ ಕಾಯ್ದೆ ಜಾರಿಗೆ ತಂದು ರೈತರ ಬದುಕು ನಾಶ ಮಾಡಿದ್ದಾರೆ. ಇಂಥ ರ‍್ಕಾರ ಮತ್ತೆ ಅಧಿಕಾರಕ್ಕೆ ಬರಬಾರದೆಂದು ಮನೆ ಮನೆಗೆ ಅಭಿಯಾನ ಹಮ್ಮಿಕೊಂಡು ಎನ್.ಡಿ.ಎ ರ‍್ಕಾರದ ಕೈಗೆ ಅಧಿಕಾರ ನೀಡಬೇಡಿ ಎಂದು ಮನವಿ ಮಾಡಲಾಗುತ್ತಿದೆ. ನಾವು ಯಾವ ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ಆದರೆ ಮೋದಿ ನೇತೃತ್ವದ ಎನ್.ಡಿ.ಎ ರ‍್ಕಾರವನ್ನು ಕಿತ್ತೊಗೆಯಿರಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಲ್ಲಿಯ ರೈತ ಬಾಂಧವರು ಈ ಗಂಭಿರತೆ ಅರಿತು ಬಿಜೆಪಿ ರ‍್ಕಾರದ ವಿರೂದ್ಧ ಸಮರ ಸಾರಬೇಕಿದೆ ಎಂದವರು ಹೇಳಿದರು.
ರ‍್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕರ‍್ಜುನ್ ಸ್ವಾಮಿ, ರ‍್ವೋದಯ ಪಕ್ಷದ ಜಿಲ್ಲಾ ಅಧ್ಯಕ್ಷ ಕೊಂಡಿಬಾರಾವ ಪಾಂಡ್ರೆ, ರೈತ ಪ್ರಮುಖರಾದ ಖಾಸಿಮ್ ಅಲಿ, ನಾಗಶೆಟ್ಟೆಪ್ಪ ಲಂಜವಾಡೆ, ಶಾಂತಮ್ಮ ಮೂಲಗೆ, ಕರಬಸಪ್ಪ ಕರಬಸಪ್ಪ ಹುಡಗಿ, ಖಾನ್ ಸಾಬ್, ವೀರಾರೆಡ್ಡಿ ಪಾಟೀಲ, ಸನ್ಮುಖಪ್ಪ ಅಣದುರೆ, ವಿಠಲರೆಡ್ಡಿ ಅಣದುರ, ವಿಜಯಕುಮಾರ ಬಾವಗೆ, ಸೋಮನಾಥ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.

WhatsApp Group Join Now
Telegram Group Join Now
Share This Article

Eshanya Times, Regional Kannada Daily is a leading news paper in Kalyana Karnataka (North Karnataka). Which is having large number of circulation in the districts of Raichur, Koppla, Bellary, Yadgir, Gulbarga, Bidar, Vijayanagara, Bagalkote and in the capital city of Bangalore.

This News Paper having Registred Office in Raichur City, Karnataka State.

The main mooto of the Eshanya Times news paper is to serve the nation and to give wide publicity of Government Developmental programmes and policies which are execuited in Government and also to give social justice to the people of Karnataka.

Copyright © 2024. Eshanya Times.  All Rights Reserved,

Powered By KhushiHost
24/7 Help Desk Support – Call Now +919060329333 

error: Content is protected !!