ರಾಯಚೂರು: ಆ-೯: ನಗರಸಭೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಸುಮಾರು ಏಳು ತಿಂಗಳುಗಳಿAದ ವೇತನ ಪಾವತಿಸದೇ ಬಾಕಿ ಇದ್ದು, ಇದರಿಂದ ನೊಂದು ಬೇಸತ್ತ ಗುತ್ತಿಗೆ ನೌPರÀನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ರಾಯಚೂರು ನಗರಸಭೆಯ ವಿದ್ಯುತ್ ನಿರ್ವಹಣೆ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರ ಅಫ್ಸರ್ ಅಲಿ ಏಳು ತಿಂಗಳ ವೇತನವಿಲ್ಲದೇ ದುಡಿಯುತ್ತಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದು, ಶುಕ್ರವಾರದಂದು ಬೆಳಿಗ್ಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ನೌಕರರನ್ನು ದಾಖಲಿಸಲಾಗಿದೆ.
ಕಳೆದ ಏಳು ತಿಂಗಳನಿAದ ವೇತನವಿಲ್ಲದೇ ತೊಂದರೆಯಾಗುತ್ತಿದ್ದು, ಬಾಕಿ ವೇತನ ನೀಡುವಂತೆ ಪೌರಾಯುಕ್ತರನ್ನು ಅನೇಕ ಬಾರಿ ಮನವಿ ಮಾಡಿದ್ದಾನೆ. ಆದರೆ ಪೌರಯುಕ್ತರು ಇಂದು ನಾಳೆ ಎಂದು ಕಾಲ ಕಳೆದಿದ್ದಾರೆ. ಮನೆಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ದಿನ ಬಳಕೆ ವಸ್ತುಗಳ ಖರೀದಿಗೂ ಹಣವಿಲ್ಲದಂತಾಗಿದೆ ಎಂದು ಗುರುವಾರ ರಾತ್ರಿ ಪೌರಾಯುಕ್ತರಿಗೆ ತಿಳಿಸಿ ಬಾಕಿ ಇರುವ ಹಣ ನೀಡುವಂತೆ ಕೋರಿದ್ದಾನೆ. ಆದರೆ ಪೌರಾಯುಕ್ತರು ಯಾವುದೇ ಪ್ರತಿಕ್ರಿಯೇ ನೀಡದೇ ಇರುವುದರಿಂದ ಶುಕ್ರವಾರ ಬೆಳಿಗ್ಗೆ ಮಾನಸಿಕವಾಗಿ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಅಫ್ಸರ್ ಅಲಿ ತಿಳಿಸಿದ್ದಾನೆ.
ಸದರಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.