ಎಂಎಸ್‌ಪಿ ಜಾರಿ, ರೈತ ವಿರೋಧಿ ಮಸೂದೆಗಳ ವಾಪಸ್ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಯಿಸಿ ಎಸ್‌ಕೆಎಂ ಪ್ರತಿಭಟನೆ

Eshanya Times

ರಾಯಚೂರು: ಆ-9:

ಎಂಎಸ್‌ಪಿ ಜಾರಿ, ರೈತ ವಿರೋಧಿ ಮಸೂದೆಗಳ ವಾಪಸ್‌ಗೆ ಒತ್ತಾಯಿಸಿ, ವಹಿನಾಡು ಭೂಕುಸಿತ ಪ್ರದೇಶವನ್ನು ರಾಷ್ಟಿçÃಯ ವಿಪತ್ತು ಎಂದು ಘೋಷಿಸಿಸಲು ಹಾಗೂ ಕಾರ್ಪೊರೇಟ್ ಕಂಪನಿಗÀಳೇ ದೇಶ ಬಿಟ್ಟು ತೊಲಗಿ ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ-ಕರ್ನಾಟಕ (ಎಸ್‌ಕೆಎಂ) ನೇತೃತ್ವದಲ್ಲಿ ಕಾರ್ಪೊರೇಟ್ ಕಂಪನಿಗಳ ಭೂತ ದಹನ ಮಾಡಿ ಪ್ರತಿಭಟನೆ ಮಾಡಲಾಯಿತು.
ಅಗಸ್ಟ್ ೯ ಕ್ವಿಟ್ ಇಂಡಿಯಾ ಚಳುವಳಿಯ ದಿನಾಚರಣೆ ಅಂಗವಾಗಿ ಶುಕ್ರವಾದಂದು ಸಂಯುಕ್ತ ಹೋರಾಟ-ಕರ್ನಾಟಕ (Sಏಒ) ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ವಿವಿಧ ಈಡೇರಿಕೆಗೆ ಒತ್ತಾಯಿಸಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹನ ಪ್ರತಿಭಟನೆ ನಡೆಸಲಾಯಿತು.
ಕಾರ್ಪೋರೇಟ್ ಕಂಪನಿಗಳೇ- ಭಾರತ ಬಿಟ್ಟು ತೊಲಗಿ,ಕೃಷಿಯ – ಕಾರ್ಪೋರೇಟಿಕರಣ ನಿಲ್ಲಿಸಿ,ರೈತ ವೀರೋಧಿ – ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಯಿರಿ,ಭಾರತದ ಕೃಷಿ ಉದ್ಪಾದನೆ- ಮಾರುಕಟ್ಟೆ-ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರಕಾದ ಆಧೀನದಲ್ಲಿಯೇ ಇರುವಂತೆ ಜೋಪಾನ ಮಾಡಬೇಕು,ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು,ಕೈಗಾರಿಕೆ- ರಾಷ್ಟಿçÃಯ ಹೆದ್ದಾರಿ- ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುವುದನ್ನು ನಿಲ್ಲಿಸಬೇಕು,ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿAದ ಹೊರಗಿಡಬೇಕು,ಕೃಷಿ ಉತ್ಪನ್ನಗಳಿಗೆ ಡಾ/ ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಪಾರಸ್ಸಿನಂತೆ ಉತ್ಪಾದನಾ ವೆಚ್ಚ ೫೦% ಬೆಂಬಲ ಬೆಲೆಯನ್ನು ಕಾನೂನಾತ್ಮಕ ಗೊಳಿಸಬೇಕು,ಕೃಷಿ ಒಳಸುರಿಗಳ ಮೇಲಿನ ಉSಖಿ ಹಿಂಪಡೆಯಬೇಕು,ಕೃಷಿಗೆ ಅಂತರಿಕ ಸಹಾಯಧನವನ್ನು ಹೆಚ್ಚು ನೀಡಲೂ ಸೂಕ್ತ ಕ್ರಮ ಕೈಗೊಳ್ಳಬೇಕು.ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಚಾಮರಸ ಮಾಲಿ ಪಾಟೀಲ, ಕೆ.ಜಿ.ವಿರೇಶ, ಬಸಲಿಂಗಪ್ಪ ಹೀರೆನೆಗನೂರು, ಖಾಜಾ ಅಸ್ಲಂ ಅಹ್ಮದ್, . ಮಾರೆಪ್ಪ ಹರವಿ, ಡಿ.ಎಸ್.ಶರಣಬಸವ,ಪ್ರಭಾಕರಪಾಟೀಲ್, ಬೂದೆಯ್ಯಸ್ವಾಮಿ, ಎಸ್. ಮಾರೆಪ್ಪ ವಕೀಲರು, ಶ್ರೀನಿವಾಸ್ ಕಲವಲದೂಡ್ಡಿ, ವಿ.ಮುದ್ದಕಪ್ಪ.ನಾಯಕ, ಆನಂದ, ಗೋವಿಂದ, ಅಂಜಿನೇಯ್ಯ ಕುರುಬದೂಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";