ಮಾನ್ವಿ,:
ರಾಜ್ಯ ಸರಕಾರ ರೈತರಿಂದ ಜೋಳ ಖರೀದಿಸಿದರೂ ಇದುವರೆಗೂ ಹಣ ಜಮಾ ಆಗಿರುವುದಿಲ್ಲ ಹಾಗೂ ಬರಪರಿಹಾರ, ಜೆಸ್ಕಾಂ, ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳ, ಗ್ರಾಮೀಣ ಭಾಗದ ರಸ್ತೆಗಳ ಸಮಸ್ಯೆಗಳು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಬಸವವೃತ್ತದ ಬಳಿ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.
ಈ ಪ್ರತಿಭಟನೆಯನ್ನುz್ದೆÃಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸಪಾಟೀಲ್ ಬೆಟ್ಟದೂರು ಅವರು ಮುಂಗಾರು ಹಂಗಾಮು ಪ್ರಾರಂಭವಾಗಿದ್ದರೂ ಸರಕಾರ ತಮ್ಮ ತಮ್ಮ ಪ್ರತಿಷ್ಠೆಗೆ ಓಡಾಡುತ್ತಿದ್ದಾರೆ ವಿನಃ ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ರೈತರಿಂದ ಜೋಳ ಖರೀದಿಸಿ ೩-೪ ತಿಂಗಳು ಗತಿಸಿದರೂ ಇದುವರೆಗೂ ರೈತರಿಗೆ ಹಣ ಜಮೆ ಮಾಡಿರುವುದಿಲ್ಲ. ಜೆಸ್ಕಾಂ ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ಇಲ್ಲದೇ ಹಳ್ಳಿಗಳ ಮನೆಗಳಿಗೆ ನುಗ್ಗಿ ಇಷ್ಟ ಬಂದAತೆ ದಂಡ ಬರೆಯುತ್ತಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆಯ ಎಲ್ಲಾ ಉಪಕಾಲುವೆಗಳಲ್ಲಿ ಸೀಲ್ಟ್ ಮತ್ತು ಜಂಗಲ್ ತೆಗೆದಿರುವುದಿಲ್ಲ ಹಾಗೂ ರಸ್ತೆ ಹದಗೆಟ್ಟರೂ ಇವತ್ತಿನವರೆಗೆ ಸರಿಪಡಿಸಿರುವುದಿಲ್ಲ. ಸರ್ಕಾರ ಬರಪೀಡಿತ ಎಂದು ಘೋಷಣೆ ಆಗಿದ್ದರೂ ಕೂಡ ಪರಿಹಾರದ ಹಣ ರೈತರಿಗೆ ಸರಿಯಾದ ರೀತಿಯಲ್ಲಿ ಮುಟ್ಟಿರುವುದಿಲ್ಲ. ತಾಲೂಕಿನ ಬಹಳಷ್ಟು ಹಳ್ಳಿಗಳಲ್ಲಿ ರಸ್ತೆ ಹದಗೆಟ್ಟಿದ್ದರೂ ಕೂಡಾ ಸರಿಪಡಿಸಿರುವುದಿಲ್ಲ. ಕೂಡಲೇ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಈ ಕೂಡಲೇ ರೈತರು ಖರೀದಿ ಕೇಂದ್ರಕ್ಕೆ ಜೋಳವನ್ನು ಮಾರಾಟ ಮಾಡಿ ೩-೪ ತಿಂಗಳು ಕಳೆದಿದೆ. ಇವತ್ತಿನವರೆಗೆ ಹಣ ಬಿಡುಗಡೆ ಮಾಡಿರುವುದಿಲ್ಲ, ಕೂಡಲೇ ರೈತರಿಗೆ ಹಣ ಬಿಡುಗಡೆ ಮಾಡಬೇಕು. ಯಾವುದೇ ಮಾಹಿತಿ ಇಲ್ಲದೇ ಜೆಸ್ಕಾಂ ಇಲಾಖೆ ಅಧಿಕಾರಿಗಳು ಹಳ್ಳಿಯ ರೈತರ ಮನೆಗೆ ನುಗ್ಗಿ ತಮಗಿಷ್ಟ ಬಂದAತೆ ದಂಡ ಬರೆಯುತ್ತಿದ್ದಾರೆ ಇದನ್ನು ಕೂಡಲೇ ಸರಿಪಡಿಸಬೇಕು. ಬರಪರಿಹಾರದಲ್ಲಿ ರೈತರಿಗೆ ಸರಿಯಾದ ರೀತಿಯಲ್ಲಿ ಹಣ ತಲುಪಿರುವುದಿಲ್ಲ, ತಕ್ಷಣ ಎಲ್ಲಾ ರೈತರಿಗೆ ಸರಿಪಡಿಸಬೇಕು. ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳ ನಂ:೭೬,೮೧,೮೨, ೮೯ ಈ ಕಾಲುವೆಗಳಲ್ಲಿ ಸೀಲ್ಟ್ ಮತ್ತು ಜಂಗಲ್ ಹಾಗೂ ರಸ್ತೆ ಹದಗೆಟ್ಟಿದ್ದು, ಬೇಗನೆ ಈ ಕೆಲಸ ಮಾಡಿಸಿಕೊಡಬೇಕು. ತಾಲೂಕಿನ ಕೆಲವು ಹಳ್ಳಿಗಳ ಮುಖ್ಯ ರಸ್ತೆಗಳು ಹದಗೆಟ್ಟು ಹೋಗಿರುತ್ತವೆ. ಈ ಸಮಸ್ಯೆಗಳು ಕೂಡಲೇ ಸರಿಪಡಿಸಬೇಕು ಎಂದು ತಹಸೀಲ್ದಾರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದರು.
ಈ ಸಂಧರ್ಬದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸಪಾಟೀಲ್ ಬೆಟ್ಟದೂರು, ದೊಡ್ಡಬಸನಗೌಡ ಬಲ್ಲಟಗಿ, ಸೂಗುರಯ್ಯ ಆರ್.ಎಸ್.ಮಠ, ಬೂದೆಯ್ಯಸ್ವಾಮಿ, ಸಿದ್ದಯ್ಯಸ್ವಾಮಿ, ಶರಣಪ್ಪಗೌಡ ಸಿಂಧನೂರು, ಶಂಕ್ರಪ್ಪಗೌಡ ಜಾನೇಕಲ್, ಚಂದ್ರಕಾAತಸ್ವಾಮಿ ಕಪಗಲ್, ಬಸವರಾಜ ತಡಕಲ್, ಯಂಕಪ್ಪ ಕಾರಬಾರಿ ರಾಜ್ಯ ಕಾರ್ಯದರ್ಶಿ, ಲಿಂಗಾರೆಡ್ಡಿ ಪಾಟೀಲ್, ಹೆಚ್.ಶಂಕ್ರಪ್ಪಗೌಡ, ಬಸನಗೌಡ ಮಲ್ಲಿನಮಡಗು, ವೀರೇಶ ಗವಿಗಟ್, ದೇವರಾಜ ನಾಯಕ, ಹಾಜಿ ಮಸ್ತಾನ, ಬಸವರಾಜ ನವಲಕಲ್, ಮಲ್ಲಣ್ಣ ಗೌಡೂರು, ಚಾಮರಸ ಜಾನೇಕಲ್, ದೊಡ್ಡ ದೇವೆಂದ್ರಪ್ಪನಾಯಕ, ಶರಣಪ್ಪಗೌಡ ಗವಿಗಟ್, ಶರಣಬಸವ ಸೀಕಲ್, ಚಂದ್ರಶೇಖರ ಕಾವಲಿ, ಬಸವರಾಜ ಉಪ್ಪಾರ ವಿಠೋಬ ತುಪ್ಪದೂರು, ಹುಸೇನಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿAದ ಪ್ರತಿಭಟನಾ ಧರಣಿ
