ಟಿಬಿ ಡ್ಯಾಮ್‌ನ ಸ್ಟಾಪ್ ಲಾಕ್ ಗೇಟ್ ಅಳವಡಿಸಿದ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿದ ಸಂಸದ ಕುಮಾರ ನಾಯಕ

Eshanya Times

ರಾಯಚೂರು: ಆ18:

ಕರ್ನಾಟಕದ ನಾಲ್ಕು ಜಿಲ್ಲೆಗಳು ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದ್ದ ೪೦ ಟಿಎಂಸಿ ನೀರು ತಡೆಯುವ ಸ್ಟಾಪ್ ಲಾಕ್ ಗೇಟ್ ಅಳವಡಿಕೆಯಲ್ಲಿ ಯಶಸ್ವಿಯಾದ ಎಲ್ಲಾ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಕುಮಾರ್ ನಾಯಕ ಅವರು ಅಭಿನಂದನೆ ಸಲ್ಲಿಸಿದರು.
ಶನಿವಾರದಂದು ತುಂಗಭದ್ರಾ ಜಲಾಶಯದ ಪ್ರದೇಶಕ್ಕೆ ಭೇಟಿ ನೀಡಿದ ಸಂಸದರು ನದಿಗೆ ಹರಿದು ಹೋಗುತ್ತಿರುವ ನೀರು ತಡೆಯುವ ಗೇಟ್ ಅಳವಡಿಕೆಯಲ್ಲಿ ಯಶಸ್ವಿಯಾದ ಕಾರ್ಮಿಕರು,ಅಧಿಕಾರಿಗ ಅಭಿನಂದಿಸಿ ಮಾತನಾಡಿದರು.
ಭೋರ್ಗರೆದು ಪ್ರವಾಹದ ನೀರಿನೊಂದಿಗೆ ಸೆಣಸಾಡಿ ಜಲಾಶಯದ ಕುಸಿದ ೧೯ನೇ ಗೇಟ್ ಸ್ಥಳದಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸುವ ಮೂಲಕ ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಹೋಗುತ್ತಿರುವ ಸುಮಾರು ೪೦ ಟಿಎಂಸಿ ನೀರು ಉಳಿಸುವಲ್ಲಿ ಅಧಿಕಾರಿಗಳು ಮತ್ತು ವಿವಿಧ ಕಂಪನಿಯ ಕಾರ್ಮಿಕರ ಸಾಧನೆ ಶ್ಲಾಘನೀಯವಾಗಿದೆ ಎಂದರು.
ನಾನು ಒಬ್ಬ ಸಿವಿಲ್ ಇಂಜಿನಿಯರ್ ಆಗಿದ್ದರಿಂದ, ಈ ಕಾರ್ಯ ಎಂತಹ ಕಷ್ಟಕರ ಎನ್ನುವ ಮನವರಿಕೆ ಇದೆ. ಕೇವಲ ಆರು ದಿನಗಳಲ್ಲಿ ನದಿಗೆ ಹರಿದು ಹೋಗುತ್ತಿರುವ ಬಹುಪಾಲು ನೀರು ತಡೆಯುವಲ್ಲಿ ಯಶಸ್ವಿಯಾದ ಜಲಾಶಯದ ಕಾರ್ಮಿಕರು, ಅಧಿಕಾರಿಗಳು ಮತ್ತು ವಿವಿಧ ಕಂಪನಿಯ ತಜ್ಞರು ಪ್ರಶಂಸಾರ್ಹರಾಗಿದ್ದಾರೆAದರು.
ಜಲಾಶಯದ ೧೯ನೇ ಗೇಟ್ ಕುಸಿತದಿಂದ ಭಾರಿ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿರುವ ಘಟನೆಯಿಂದ ರೈತರು ತೀವ್ರ ಆತಂಕಕ್ಕೆ ಗುರಿಯಾಗಿದ್ದರು. ಗೇಟ್ ಅಳವಡಿಕೆ ಹೇಗೆ ಎನ್ನುವ ಸವಾಲನ್ನು ಜಲಾಶಯದ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ನಿವಾರಿಸುವ ಮೂಲಕ ಇಂದು ರೈತರ ಆತಂಕ ದೂರ ಮಾಡಿದ್ದಾರೆ. ಇವರ ಕಾರ್ಯ ಸಾಧನೆಗೆ ಸರ್ಕಾರದಿಂದ ಸೂಕ್ತ ಬಹುಮಾನ ನೀಡುವಂತೆ ನಾನು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
ಅದೃಷ್ಟವಶಾತ್ ಮೇಲ್ಭಾಗದಲ್ಲಿ ಇನ್ನೂ ಮಳೆ ಪ್ರಮಾಣ ಉತ್ತಮವಾಗಿದೆ. ಸ್ಟಾಪ್ ಲಾಂಗ್ ಗೇಟ್ ಅಳವಡಿಕೆಯ ನಂತರ ಆರು ಟಿಎಂಸಿ ನೀರು ಜಲಾಶಯಕ್ಕೆ ಸಂಗ್ರಹವಾಗಿದೆ. ಎಲ್ಲ ಶ್ರೇಯಸ್ಸು ಇಲ್ಲಿಯ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಸಲ್ಲುತ್ತದೆ ಎಂದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";