ರಾಯಚೂರು: ಸೆ-೧೮: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ಬದ್ದವಾಗಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಲ್ಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ೫೪ ಯೋಜುನೆಗಳಿಗೆ ಅನುಮೋದನೆ ನೀಡಿ ಅಭಿವೃದ್ದಿ ವೇಗ ಹೆಚ್ಚಿಸಲು ಮುಂದಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ಹೇಳಿದರು.
ನಗರದ ಅವರ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಗೆ ಸಂಭAದಿಸಿದAತೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದ ಎಲ್ಲಾ ಭರವಸೆಗಳಿಗೆ ಸರಕಾರ ಅನುಮೋದನೆ ನೀಡುವ ಮೂಲಕ ಕೊಟ್ಟ ಭರವಸೆ ಇಡೇರಿಸಿದಂತಾಗಿದೆ. ೧೩ ಯೋಜನೆಗಳನ್ನು ಬಜೆಟನಲ್ಲಿ ಘೋಷಿಸಲಾಗಿತ್ತು. ಎಲ್ಲಾ ಯೋಜನೆಗಳಿಗೆ ಸರಕಾರ ಅನುಮೋದನೆ ನೀಸಿದೆ.
೧೩೨ ಕೋಟಿ ರೂ.ಗಳಲ್ಲಿ ಕುರ್ಡಿ, ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ,ಜೇವರ್ಗಿ ಹಾಘೂ ಸೇಡಂಗಳಲ್ಲಿ ಕೆರೆಗಳ ನಿರ್ಮಾಣಕ್ಕೆ ಅನುಮೊದನೆ ನೀಡಲಾಗಿದೆ. ೪೭೯ ಕೋ.ರೂ. ಕಾಮಗಾರಿಗಳು ಚಾಲನೆ ಪಡೆಯಲಿವೆ ಎಂದರು.
ನಗರದ ಜನತೆಯ ಬಹುದಿನದ ನೀರಿಕ್ಷೆಯಂತೆ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲದ್ದರ್ಜೇಗೆರಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಅನುದಾನ ಲಭ್ಯವಾಗಲಿದ್ದು, ನಗರದ ಸರ್ವತೋಮು ಅಭಿವೃದ್ದಿಗೆ ಸಹಕಾರಿಯಾಗಲಿದೆ. ಹಿಂದಿನ ಸರ್ಕಾರದಲ್ಲಿ ಪ್ರಸ್ತಾವನೆಯಿತ್ತಾದರೂ ಸಚಿವ ಸಂಪುಟ ಅನುಮೋದನೆ ದೊರಕಿರಲಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಮಹಾನಗರ ಪಾಲಿಕೆ ಆಸ್ತಿತ್ವಕ್ಕೆ ಬರಲಿದೆ ಎಂದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಆರೋಗ್ಯ ಸೌಲಭ್ಯ ಹೆಚ್ಚಿಸಲು ೪೫ ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸಲು ತಿರ್ಮಾನಿಸಲಾಗಿದೆ. ೩೧ ಸಮೂದಾಯ ಆಸ್ಪತ್ರೆಗಳು,೯ ತಾಲೂಕ ಆಸ್ಪತ್ರೆಗಳು ಹಾಗೂ ಎರಡು ತಾಲೂಕಗಳ ಆಸ್ಪತ್ರೆಗಳನ್ನು ೨೦೦ ಹಾಸಿಗೆ ಆಸ್ಪತ್ರೆಗಳಾಗಿ ಪರಿವರ್ತಿಸಲಾಗುತ್ತದೆ. ಜಿಲಲೆಯ ಲಿಂಗಸೂಗೂರು ತಾಲೂಕ ಆಸ್ಪತ್ರೆ ೨೦೦ ಹಾಸಿಗೆ ಆಸ್ಪತ್ರೆಯಾಗಿ ಪರವರ್ತಿಸಲಾಗುತ್ತದೆ ಎಂದರು.
ಪ್ರತಿವಿಧಾನಸಭಾ ಕ್ಷೇತ್ರದ ಕೂಡ ರಸ್ತೆಗಳ ಅಭಿವೃದ್ದಿಗೆ ಕಲ್ಯಾಣ ಪಥ ಯೋಜನೆಗೂ ಅನುಮೋದನೆ ನೀಡಲಾಗಿದೆ. ೪೦ ವಿಧಾನಸಭಾ ಕ್ಷೇತ್ರಗಳ ಅಭಿವೃದ್ದಿಗೆ ೧ ಸಾವಿರ ಕೋ.ಅನುದಾನ ನೀಡಲಾಗುತ್ತದೆ.
ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಮನೆಗಳನ್ನು ನಿರ್ಮಾಣ ಮಾಡಲು ಟೌನ್ ಶಿಪ್ ನಿರ್ಮಿಸಲು೯೯೮ ಕೋ.ರೂ.ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ. ಮನೆಗಳ ನಿರ್ಮಾಣದ ಕುರಿತುಂತೆ ಗಣಿ ಇಲಾಖೆ,ಹಟ್ಟಿ ಚಿನ್ನದ ಗಣಿ ಅಧಿಕಾರಿಗಳು ನಿರ್ಧಾರಿಸಲಿದ್ದಾರೆ. ಹೀರಾ ಬುದ್ದಿನಿ ಗಣಿ ೧೯೨ ಕೋ.ಅನುದಾನ ನೀಡಲಾಗಿದೆ. ಮಂತ್ರಾಲಯ ಹಾಗು ಚಿಕ್ಕಲಪರ್ವಿ ಬಳಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುವುದೆಂದರು. ಕೆಕೆಆರ್‌ಡಿಬಿ ವ್ಯಾಪ್ತಿಯಲ್ಲಿ ೧೬ ತಾಲೂಕಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಣ ಮಾಡಲು ಅನುಮೋದನೆ ನೀಡಲಾಗಿದೆ. ಸಿರವಾರ ಮತ್ತು ಮಸ್ಕಿಯಲ್ಲಿ ೮.೬೦ ಕೋ.ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುತ್ತದೆ ಎಂದರು. ಸಿಂಧನೂರು ಪಟ್ಟಣದಲ್ಲಿ ೧೧೯ ಎಕರೆ ಪ್ರದೇಶದಲ್ಲಿ ೨೯ ಕೋ.ರೂ. ವೆಚ್ಚದಲ್ಲಿ ಕುಡಿಯುವ ನೀರು ಕೆರೆ ನಿರ್ಮಿಸಲು ಅನುಮೋದನೆ ದೊರಕಿದೆ ಎಂದರು. ನವಲಿ ಜಲಾಶಯ ನಿರ್ಮಾಣದ ಕುರಿತಂತೆ ಈಗಾಗಲೇ ಆಂದ್ರ ಮತ್ತು ತೆಲಂಗಾಣದ ಅಧಿಕಾರಿಗಳು, ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಚಿವ ಸಂಪುದಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸಹ ನಿರ್ಧರಿಸಲಾಗಿದೆ. ಈ ಭಾಗದ ಅಭಿವೃದ್ದಿಗೆ ಮತ್ತಷ್ಟು ವೇಗ ದೊರೆಯಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಶಾಸಕ ಹಂಪಯ್ಯ ಸಾಹುಕಾರ,ನಗರಸಭೆ ಉಪಾಧ್ಯಕ್ಷ ಸಾಜೀದ್ ಸಮೀರ್,ಸದಸ್ಯರಾದ ಜಯಣ್ಣ,ಬಿರಮೇಶ,ಮುಖಂಡ ಮಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಕೆ.ಶಾಂತಪ್ಪ,ಜಿ.ಸುರೇಶ,ಅಮರೇಗೌಡ ಹಂಚಿನಾಳ,ಜಯAತರಾವ್ ಪತಂಗೆ,ಜಿ.ಬಸವರಾಜ್ ರೆಡ್ಡಿ,ಜಾವೀದ್ ಉಲ್ ಹಕ್,ರುದ್ರಪ್ಪ ಅಂಗಡಿ,ಮಹೇಶ ಪಾಟೀಲ್ ಉಪಸ್ಥಿರರಿದ್ದರು.