ರಾಯಚೂರು: ಮೇ-22: ನಗರದ ಮಾವಿನ ಕೆರೆ ಜಮೀನನ್ನು ಅತಿಕ್ರಮಿಸಿಕೊಂಡು ರಾಜಾರೋಷವಾಗಿ ಕಟ್ಟಡ(ಮಳಿಗೆ)ಗಳನ್ನು ನಿರ್ಮಾಣ ಮಾಡುತ್ತಿರುವವರೆ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಅಂಬಾಜಿರಾಜ್ ಮೈದರ್‌ಕರೆ ಒತ್ತಾಯಿಸದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಗರದ ಹೃದಯ ಭಾಗದಲ್ಲಿ ಇರುವ ಮತ್ತು ಅತ್ಯಂತ ಬೆಳ ಬಾಳುವ ಐತಿಹಾಸಿಕ ಮಾವಿನಕೆರೆ ರಕ್ಷಣೆಗಾಗಿ ಜಮೀನು ಸಮೀಕ್ಷೆ ಮತ್ತು ಅದ್ದುಬಸ್ತಿನ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಮತ್ತೋಂದು ಕಡೆ ರಾಜಾರೋಷವಾಗಿ ಕೆರೆ ಜಮೀನು ಅತಿಕ್ರಮಿಸಿಕೊಂಡು ಮಳಿಗೆಗಳು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಮತ್ತು ನಗರಸಭೆ ಆಡಳಿತ ಕಣ್ಣು ಮುಚ್ಚಿ ಗಾಢ ನಿದ್ರೆಯಲ್ಲಿ ಇವೆ ಎಂದು ದೂರಿದ್ದಾರೆ.
ಎಂ.ಈರಣ್ಣ ವೃತ್ತ ದಿಂದ ರೆಡಿಯೋ ಸ್ಟೇಷನ್ ಸಂಪರ್ಕ ರಸ್ತೆಯಲ್ಲಿ ಏಕಕಾಲಕ್ಕೆ ರಾತ್ರೋರಾತ್ರಿ ಸುಮಾರು ೧೧ ಮಳಿಗೆಗಳು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಕೆರೆಗೆ ಅಡ್ಡಲಾಗಿ ಅಡ್ಡಗೋಡೆ ನಿರ್ಮಾಣ ಕಾರ್ಯ ನಡೆದಿದೆ ಎಂದು ದೂರಿದ್ದಾರೆ.
ತಕ್ಷಣ ಒತ್ತುವರಿಯನ್ನು ತೆರವುಗೊಳಿಸಿ ೧೧ ಮಳಿಗೆಗಳನ್ನು ನೆಲಸಮಾ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೇ ಸದರಿ ಸರ್ವೇ ನಂ.೧೨೧೨/೧ಎ ವಿಸ್ತೀರ್ಣ ೧೪ ಎಕರೆ ೧೭ ಗುಂಟೆ ಶ್ರೀ ಷ.ಬ್ರ.ಶಾಂತಮಲ್ಲ ಶಿವಾಚಾರ್ಯ ಸ್ವಾಮಗಳು ಶ್ರೀ ೧೦೮ ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠ ಇವರ ಪಟ್ಟಾ ಜಮೀನು ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ತಕ್ಷಣ ನಿಜಾಂಶವನ್ನು ಪರಿಶೀಲಿಸಿ ಈ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಶ್ರೀ ಮಠದ ಜಾಗವಿದ್ದರೆ ಅವರಿಗೆ ನ್ಯಾಯ ಒದಗಿಸಿ ಕೊಂಡುವAತೆ ಅಥವಾ ಕೆರೆ ಜಾಗವಿದ್ದರೆ ತಮ್ಮ ಸುಪರ್ಧಿಗೆ ತೆಗೆದುಕೊಳ್ಳುವಂತೆ ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಮಹಿಂದ್ರಾ ಮಿತ್ರ ಭೀಮೇಶ ವಕೀಲ್, ಮಸೂದ್ ಅಲಿ ರವಿ ಕುಮಾರ ಉಪಸ್ಥಿತರಿದ್ದರು.