ರಾಯಚೂರು: ಆ-5:
ಯಾದಗಿರಿ ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಸಾವಿಗೆ ಕಾರಣಿಭೂತರಾದ ಶಾಶಕ ಚೆನ್ನಾರೆಡ್ಡಿ ಪಾಟೀಲ್ ತನ್ನೂರು ಮತ್ತು ಪುತ್ರ ಪಂಪನಗೌಡನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶಾಸಕ ಚೆನ್ನರೆಡ್ಡಿ ಪಾಟೀಲ್ ತನ್ನೂರು ವೇಷಧಾರಿಗೆ ಬಿಕ್ಷೆ ಹಾಕುವ ಮೂಲಕ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಮುಖಂಡರು ಮತ್ತು ಕಾರ್ಯಕರ್ತರು ಶಾಸಕ ಚೆನ್ನಾರೆಡ್ಡಿ ವೇಷಧಾರಿಗೆ ಬಿಕ್ಷೆ ಹಾಕುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ, ಯಾದಗಿರಿ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ್ ಅವರಿಗೆ ಅದೇ ಸ್ಥಳದಲ್ಲಿ ಕರ್ತವ್ಯದಲ್ಲಿ ಮುಂದುವರೆಯಬೇಕಾದರೇ ಕೇಳಿದಷ್ಟು ಹಣ ನೀಡಬೇಕೆಂದು ಪರಶುರಾಮ್ ಅವರಿಗೆ ಮಾನಸಿಕ ಒತ್ತಡ ಕಿರುಕುಳ ನೀಡಿದ್ದರೆಂದು ದೂರಿದರು. ಆದರೆ ಕನಿಷ್ಠ ಒಂದು ಸ್ಥಳದಲ್ಲಿ ಎರಡು ವರ್ಷ ಕರ್ತವ್ಯ ನಿರ್ವಹಿಸಬೇಕೆಂಬ ನಿಯಮವಿದ್ದು, ಏಕಾಏಕಿ ವರ್ಗಾವಣೆ ಮಾಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಪೊಲೀಸ್ ಮೇಲಾಧಿಕಾರಿಗಳು ಸಹ ಕಾರಣರಾಗಿದ್ದಾರೆಂದು ಆರೋಪಿಸಿದರು.
ಹಣದ ಬೇಡಿಕೆ ಮತ್ತು ಕಿರುಕುಳದಿಂದಾಗಿ ಪಿಎಸ್‌ಐ ಪರಶುರಾಮ ಸಾವನ್ನಪ್ಪಿದ್ದಾರೆಂದು ದೂರಿದರು. ಈಗಾಗಲೇ ಪ್ರಕರಣ ದಾಖಲಾಗಿದ್ದು, ೪೮ ಗಂಟೆ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ, ಕೂಡಲೇ ಪಿಎಸ್‌ಐ ಸಾವಿಗೆ ಕಾರಣರಾದ ಶಾಸಕ ಮತ್ತು ಪತ್ರನನ್ನು ಬಂಧಿಸಿ ಮೃತ ಪಿಎಎಸ್‌ಐ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವಿಶ್ವನಾಥ ಪಟ್ಟಿ, ವಸಂತಕುಮಾರ,ವೈ.ನರಸಪ್ಪ, ನರಸಿಂಹಲು ನೆಲಹಾಳ, ಕೆ.ಈ.ಕುಮಾರ, ಕುಮಾರ ಸ್ವಾಮಿ,ಮಹೇಶಕುಮಾರ, ಕೆ.ಸಂತೋಷ,ಆAಜನೇಯ್ಯ, ಆರ್.ಸಿ. ವೆಂಕಟೇಶ,ಮಾರುತಿ ಚಿಕ್ಕಸುಗೂರು, ಸತ್ಯ ನಾರಾಯಣ, ಮಾರೆಪ್ಪ, ಲಕ್ಷö್ಮಣ ಹುಲಿಗಾರ,ರಾಘವೇಂದ್ರ,ರವಿ ದಾದಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.