ಮುಸ್ಲಿಂ ಸಮುದಾಯ ಪಾಕಿಸ್ತಾನದ ಧ್ವಜದೊಂದಿಗೆ ಗುರಿತಿಸಿದ ಸುವರ್ಣ ನ್ಯೂಜ್ ನಿರುಪಕ ಅಜೀತ ಹನುಮಕ್ಕನವರ ಮೇಲೆ ಕ್ರಮಕ್ಕೆ ಒತ್ತಾಯ

Eshanya Times

ರಾಯಚೂರು: ಮೇ-11:

ಮತೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ,ರಾಷ್ಟçದ ಹಿತಾಸಕ್ತಿಗೆ ವಿರುದ್ದ ಹಾಗೂ ಇಡೀ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನ ಧ್ವಜದೊಂದಿಗೆ ಗುರುತಿಸಿ ಅವಮಾನಗೊಳಿಸಿದ ಸುವರ್ಣ ನ್ಯೂಜ್ ಏಷಿಯಾ ನೆಟ್ ಕನ್ನಡ ಸುದ್ದಿವಾಹಿನಿ ನಿರುಪಕ ಅಜೀತ ಹನುಮಕ್ಕನವರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸುವರ್ಣ ನ್ಯೂಜ್ ಸುದ್ದಿವಾಹಿನಿಯಲ್ಲಿ ಮೇ-೫ ರಂದು ಸಂಜೆ೮-೩೦ಕ್ಕೆ ಹಿಂದುಗಳ ಜನಸಂಖ್ಯೆಯಲ್ಲಿ ಭಾರಿ ಇಳಿಕೆ ಹಾಗೂ ಮುಸ್ಲಿಂ ಜನಸಂಖ್ಯೆಯಲ್ಲಿ ಭಾರಿ ಏರಿಕೆ ಎನ್ನುವ ಕಾರ್ಯಕ್ರಮ ಪ್ರಸಾರ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಚರ್ಚೆ ಸಂದರ್ಭದಲ್ಲಿ ನಿರೂಪಕ ಅಜೀತ್ ಹನುಮಕ್ಕನವರ್ ಅವರು ಹಿಂದು ಸಮುದಾಯದ ಜನಸಂಖ್ಯೆ ಏರಿಕೆಯನ್ನು ತೀರಿಸುವ ಸಂದರ್ಭದಲ್ಲಿ ಭಾರತದ ರಾಷ್ಟಿçÃಯ ಧ್ವಜ ಹಾಗೂ ಮುಸ್ಲಿಂ ಸಮುದಾಯದ ಜನಸಂಖ್ಯೆ ಏರಿಕೆಯನ್ನು ತೋರಿಸುವ ಸಂದರ್ಭದಲ್ಲಿ ಪಾಕಿಸ್ತಾನದ ಧ್ವಜವನ್ನು ಬಳಸಿರುತ್ತಾರೆ. ದೇಶದ ಶೇ. ೧೪.೨ರಷ್ಟು ಮುಸ್ಲಿಂರನ್ನು ಪಾಕಿಸ್ತಾನ ರಾಷ್ಟçದ ಜೊತೆಗೆ ಗುರುತಿಸಿ ಅವಮಾನಗೊಳಿಸಿದ್ದಾರೆ. ಕೊಟ್ಯಾಂತರ ಕನ್ನಡಿಗರು ಕಾರ್ಯಕ್ರಮ ವಿಕ್ಷೀಸಿದ್ದು, ಇದರಿಂದ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಸಂದರ್ಭದಲ್ಲಿ ವರ್ಗಗಳ ಮಧ್ಯೆ ದ್ವೇಷ ಹರಿಡಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಸಮುದಾಯದ ರಾಷ್ಟಿçÃಯ ಭಾವೈಕ್ಯತೆಗೆ ಭಾದಕವಾಗುವ ಆರೋಪಣೆ, ಒತ್ತು ಹೇಳಿಕೆಗಳು ನೀಡಿರುತ್ತಾರೆ. ಮತೀಯ ನಂಬಿಕೆಗಳನ್ನು ದ್ವೇಷ ಭಾವನೆಯಿಂದ ಅಪಮಾನಗೊಳಿಸವದು ಮಾಡಿರುತ್ತಾರೆ. ಅಲ್ಲದೇ ರಾಷ್ಟçದ ಹಿತಶಕ್ತಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆAದು ದೂರಿದರು.
ದೇಶದಲ್ಲಿನ ಮುಸ್ಲಿಂ ಸಮುದಾಯ ಪಾಕಿಸ್ತಾನದವರು ಎನ್ನುವ ನಂಬಿಕೆಯನ್ನು ಉಂಟು ಮಾಡಲು ಪ್ರಯತ್ನ ಪಟ್ಟಿರುತ್ತಾರೆ. ಸುದ್ದಿ ನಿರೂಪಕ ಅಜೀತ್ ಹನುಮಕ್ಕನವರು ಈ ಹಿಂದೆಯೂ ಸಹ ಹಲವು ಬಾರಿ ಮುಸ್ಲಿಂ ಸಮುದಾಯದ ವಿರುದ್ದ ಸಮುದಯವನ್ನು ಅಪಮನಿಸುವಂತಹ ಸುದ್ದಿಗಳನ್ನು ಪ್ರಚಾರ ಪಡಿಸಿರುವಂತಹ ಕೃತ್ಯ ಎಸೆಗಿದ್ದು, ಅವರ ವಿರುದ್ದ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವರು ಒಂದು ರೀತಿ ಹವ್ಯಾಸಿ ಅಪರಾಧಿಯಾಗಿ ನಡೆದಿಕೊಳ್ಳೂತ್ತಿದ್ದಾರೆ. ದೇಶದ ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲದ ರಿಇತಿ ಅವರು ನಡುವಳಿ ಇದ್ದು, ನಿರೂಪಕ ಅಜೀತ್ ಹನುಮಕ್ಕನವರ ಹಾಗೂ ಸುದ್ದಿವಾಹಿನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಇಂತಹ ಸುದ್ದಿವಾಹಿನಿ ಪ್ರಸರಣವನ್ನು ರದ್ದುಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಸೈಯದ್ ಜಾವೀದ್ ಉಲ್ ಹಕ್ ವಕೀಲ್, ಡಾ.ರಝಾಕ್ ಉಸ್ತಾದ್,ಅಬ್ದುಲ್ ಹೈ ಫೆರೋಜ್,ಸೈಯದ್ ಶಂಶುದ್ದೀನ್, ಮೊಹ್ಮದ್ ಉಸ್ಮಾನ್,ಸೈಯದ್ ಅಮೀನುಲ್ ಹಸನ್,ಖಾಜಾ ಮೋಹಿನುದ್ದೀನ್(ಮೋನಾ) ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";