ಕುಷ್ಟಗಿ:ಮೇವಿನ ಕೊರತೆ ಪರಿಣಾಮ ದನಕರುಗಳನ್ನು ಕೇಳಿದಷ್ಟು ಹಣಕ್ಕೆ ಮಾರಟ ಮಾಡುವ ಸ್ಥಿತಿಗೆ ರೈತರು ತಲುಪಿದ್ದಾರೆ.ಅದರೆ ಅಧಿಕಾರಿಗಳು ಮೇವು ಪೂರೈಕೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಅಧಿಕಾರಿಗಳ ಮೇಲೆ ಗರಂ ಆದ ಘಟನೆ ನಡೆಯಿತು.ಪಟ್ಟಣದ ಇಂದು ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ತಾಲೂಕ ಟಾಸ್ಕ್ ಪೋರ್ಸ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೇಸಿಗೆ ಸಂಧರ್ಭದಲ್ಲಿ ಅಗತ್ಯ ಕುಡಿಯುವ ನೀರು,ಮೇವಿನ ಪರಿಸ್ಥಿತಿ ಮಿತಿ ಮೀರುವ ಮುನ್ನ ಪೂರೈಸಲು ಅಧಿಕಾರಿಗಳು ನಿರ್ಲಕ್ಷಿಸಬಾರದು ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.ಬೇಸಿಗೆ ಸಂಧರ್ಭದಲ್ಲಿ ತಾಲೂಕಿನ ಬಹಳಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಗಂಭೀರ ಪರಸ್ಧಿತಿ ಎದರಾಗಬಹುದು.ಸಮಸ್ಯೆ ತಲೆದೊರದಂತೆ ಅಧಿಕಾರಿಗಳು ನಿಗಾವಹಿಸಬೇಕು.ಬಹುಗ್ರಾಮ ಯೋಜನೆಯ ನೀರು ಬಂದ್ ಅದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.ಹೀಗಾಗಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯವುದು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು.ಕಂದಾಯ,ಗ್ರಾಮೀಣ ನೀರು ಪೂರೈಕೆ,ಜೆಸ್ಕಾಂ,ತಾಲೂಕ ಪಂಚಾಯತ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಪಿ.ಡಿ.ಓ.ಗಳು ಬರುವ ಜೂನ್ ವರೆಗೆ ಸಮನ್ವಯದಿಂದ ಕೆಲಸ ನಿರ್ವಹಿಸಿ ಜನರ ಸಮಸ್ಯೆಗೆ ಸ್ಪಂದಿಸಲು ತಾಕೀತು ಮಾಡಿದರು.ತಾಲೂಕಿನಲ್ಲಿ ಶೇ ೮೦ ರಷ್ಟು ಹಳ್ಳಿಗಳಿಗೆ ಜೆಜೆಎಂ ನೀರು ಬರುತ್ತದೆ ಎಂದು ಹೇಳಿದ ಎಇಇ ಸಭೆಯಲ್ಲಿ ಹೇಳಿದಾಗ ಶಾಸಕ ದೊಡ್ಡನಗೌಡ ಬಹುತೇಕ ಹಳ್ಳಿಗಳಲ್ಲಿ ನೀರು ಪೂರೈಕೆಯಾಗುವುದಿಲ್ಲ ಎಂಬ ಗ್ರಾಮಂತರ ಪದೇಶದ ಜನರಿಂದ ದೂರುಗಳು ಬರುತ್ತಿವೆ.ಹೀಗಾಗಿ ಗುಣಮಟ್ಟದ ಕೆಲಸ ಆಗುವವರೆಗೂ ಅದನ್ನು ಸರಿಯಾಗಿ ವಹಿಸಿಕೊಳ್ಳುವಂತೆ ತಾಕೀತು ಮಾಡಿದರು.ಟಾಸ್ಕ್ ಪೋರ್ಸ ಸಭೆಯಯಲ್ಲಿ ತಹಶಿಲ್ದಾರ್ ರವಿ ಅಂಗಡಿ,ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ , ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.