ದೇವದುರ್ಗ:ಮಂಡ್ಯದಲ್ಲಿ ಡಿಸೆಂಬರ್ನಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರಟಿರುವ ಕನ್ನಡ ರಥ ಜ್ಯೋತಿಗೆ ಪಟ್ಟಣದಲ್ಲಿ ಬುಧವಾರ ಭವ್ಯ ಸ್ವಾಗತ ಕೋರಲಾಯಿತು.
ಪಟ್ಟಣದ ಜೆಡ್ಪಿ ವೃತ್ತದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಹಾಗೂ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ ಕನ್ನನಡ ಧ್ವಜ ನೀಡುವದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಹೆಚ್.ಶಿವರಾಜ,ಮಾಜಿ ಅಧ್ಯಕ್ಷ ನರಸಿಂಗರಾವ್ ಸರಕೀಲ್,ಬಿಆರ್ಸಿ ಶಿವರಾಜ ಪೂಜಾರಿ,ಗ್ರೇಡ್-2 ತಹಸೀಲ್ದಾರ ವೆಂಕಟೇಶ ಕುಲಕರ್ಣಿ,ಸಿಡಿಪಿಓ ಮಾಧವಾನಂದ,ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಜಿ.,ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ,.ಮೇಲ್ವಿಚಾರಕಿ ನಿರ್ಮಲಾ ಬಲ್ಲಿದವ,ಸಂಘಟನೆ ಪದಾಧಿಕಾರಿಗಳಾದ ಜಯರಾಜ್,ಶಿವರಾಜ ಛಲವಾದಿ ಹಾಗೂ ಆಶಾ,ಅಂಗನವಾಡಿ ಕಾರ್ಯಕರ್ತೆಯರು,ಶಿಕ್ಷಣ ಇಲಾಖೆ,ಪೊಲೀಸ್ ಇಲಾಖೆ ಅಧಿಕಾರಿಗಳು,ವಿವಿಧ ಇಲಾಖೆ ಅಧಿಕಾರಿಗಳು,ಸಿಬ್ಬಂದಿ ಪಾಲ್ಗೊಂಡಿದ್ದರು.
ಕನ್ನಡ ರಥಜ್ಯೋತಿಗೆ ಭವ್ಯ ಸ್ವಾಗತ
