ಕವಿತಾಳ : ಸಮೀಪದ ಹುಸೇನಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ ಕಳೆದ ಮೂರು ದಿನಗಳಿಂದ ಗ್ರಾಮಸ್ತರು ನೀರಿಗಾಗಿ ಪರದಾಡುವ ಪರಿಸ್ಥಿತಿ ನರ‍್ಮಾಣವಾಗಿದೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ವಿದ್ಯುತ್ ಪರಿರ‍್ತಕ ಸುಟ್ಟ ಕಾರಣ ವಿದ್ಯುತ್ ಪೂರೈಕೆ ಸ್ಥಗಿತವಾಗಿ ನೀರಿನ ಸಮಸ್ಯೆ ಉಲ್ಬಣವಾಗಿದೆ ಕಳೆದ ೧೫ ದಿನಗಳಲ್ಲಿ ಈ ರೀತಿ ನೀರಿನ ಸಮಸ್ಯೆ ಉಂಟಾಗುತ್ತಿರುವುದು ಎರಡನೇ ಸಲವಾಗಿದ್ದು ಅಧಿಕಾರಿಗಳು ತರ‍್ತಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸರ‍್ವಜನಿಕರು ಆರೋಪಿಸಿದರು.
ಪರಿರ‍್ತಕ ಸುಟ್ಟ ಪರಿಣಾಮ ಮೂರು ದಿನಗಳಿಂದ ನೀರಿಗಾಗಿ ಅಲೆಯುತ್ತಿರುವ ಜನರು ಊರಿಂದ ೧ ಕಿ.ಮೀ ದೂರದಲ್ಲಿರುವ ಒಂದು ಕೊಳವೆಬಾವಿಯಿಂದ ನೀರು ತರುತ್ತಿದ್ದಾರೆ ಆದರೂ ನೀರು ಸಾಕಷ್ಟು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಶುದ್ದೀಕರಣ ಘಟಕ ದುರಸ್ತಿ ಹಿನ್ನೆಲೆಯಲ್ಲಿ ಸ್ಥಗಿತವಾಗಿದೆ ಹೀಗಾಗಿ ಕುಡಿಯುವ ನೀರಿಗಾಗಿ ಕವಿತಾಳಕ್ಕೆ ಬರಬೇಕು ಮತ್ತು ಬಳಕೆ ನೀರು ಇಲ್ಲದ ಕಾರಣ ಮೂರು ದಿನಗಳಿಂದ ಜನರು ಮತ್ತು ದನ ಕರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ರಮೇಶ ನಾಯಕ, ಅಮರೇಶ, ಲಿಂಗಣ್ಣ ಸಾಹುಕಾರ, ಮೌನೇಶ ಮಂತ್ರಿ, ಯಂಕಪ್ಪ ನಾಯಕ, ದೇವಣ್ಣ, ಅಯ್ಯಪ್ಪ, ಲಕ್ಷ್ಮಿ ಚನ್ನಪ್ಪ ನಾಯಕ, ಗಂಗಮ್ಮ, ಯಲ್ಲಮ್ಮ, ಹನುಮಂತಿ, ಇಮಂಬಿ, ಅಂಬಮ್ಮ ದೂರಿದರು.
ಗ್ರಾಮದಲ್ಲಿ ೧೫ ದಿನಗಳ ಹಿಂದೆ ನಡೆದ ಜಾತ್ರೆ ಸಮಯದಲ್ಲಿ ಪರಿರ‍್ತಕ ಸುಟ್ಟ ಪರಿಣಾಮ ಬೇರೆ ಪರಿರ‍್ತಕ ಅಳವಡಿಸಿ ತಾತ್ಕಲಿಕ ವ್ಯವಸ್ಥೆ ಮಾಡಲಾಗಿತ್ತು ನಾಲ್ಕು ದಿನಗಳ ಹಿಂದೆ ಮಳೆ ಸುರಿದ ಪರಿಣಾಮ ಹೊಸದಾಗಿ ಅಳವಡಿಸಿದ ಪರಿರ‍್ತಕ ಮತ್ತೆ ಸುಟ್ಟಿದೆ ಹೀಗಾಗಿ ಹೊಸ ಪರಿರ‍್ತಕಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿಯೇ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಜೆಸ್ಕಾಂ ಅಧಿಕಾರಿ ಜಲಾಲ್ ಹೇಳಿದರು.