ಸಿರವಾರ,ಅ.14 : 2022-23 ನೇ ಸಾಲಿನ ಕೆಕೆಆರ್ ಡಿಬಿಡಿ,ಯೋಜನೆಯಡಿಯಲ್ಲಿ,ಕೆಆರ್ ಐಡಿಎಲ್ ನಿರ್ಮಾಣದ 2 ಶಾಲಾ ಕೊಠಡಿಗಳ ಕಾಮಗಾರಿಯ ವೆಚ್ಚ 31ಲಕ್ಷ ಮತ್ತು 2024-25 ನೇ ಸಾಲಿನ,ಕೆಕೆಆರ್ ಡಿಬಿಡಿ ಯೋಜನೆಯಡಿಯಲ್ಲಿ ,ನಿರ್ಮಿತ ಕೇಂದ್ರ ನಿರ್ಮಾಣದ 2 ಶಾಲಾ ಕೊಠಡಿಗಳ ಕಾಮಗಾರಿಯ ವೆಚ್ಚ 25 ಲಕ್ಷ ರೂಪಾಯಿ,ಒಟ್ಟು 4 ಕೊಠಡಿಗಳ ಕಾಮಗಾರಿಯ ವೆಚ್ಚ,56 ಲಕ್ಷ ರೂ ವೆಚ್ಚದ ಕಾಮಗಾರಿಗೆ ಸಚಿವ ಎನ್ ಎಸ್ ಭೋಸರಾಜು ಮತ್ತು ಜನಪ್ರಿಯ ಶಾಸಕ ಜಿ ಹಂಪಯ್ಯ ನಾಯಕ ಅವರು ಶಾಲಾ ಕೊಠಡಿಗಳ, ನಿರ್ಮಾಣದ ಕಾಮಗಾರಿಗೆ ಜಂಟಿಯಾಗಿ ಭೂಮಿ ಪೂಜೆ ನೆರವೆರಿಸಿದರು
ತಾಲೂಕಿನ ಪಾತಪೂರ ಗ್ರಾಮದಲ್ಲಿ,2023-24,ನೇ ಸಾಲಿನ ಕೆಆರ್ ಐಡಿಎಲ್ ನಿರ್ಮಾಣದ 31ಲಕ್ಷ ರೂ, ಮತ್ತು 2024-25 ನೇ ಸಾಲಿನ, ನಿರ್ಮಿತ ಕೇಂದ್ರ ನಿರ್ಮಾಣದ 25 ಲಕ್ಷ ರೂ ವೆಚ್ಚದ ಕಾಮಗಾರಿಗೆ,ಕೆಕೆಆರ್ ಡಿಬಿಡಿ ಯೋಜನೆಯ ಅನುದಾನಲ್ಲಿ 4 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 56 ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಯಿತು.
ನಂತರ ಭೂಮಿ ಪೂಜೆ ಮಾಡಿ ಮಾತನಾಡಿದ ಸಚಿವ ಎನ್ .ಎಸ್ .ಭೋಸರಾಜು ಅವರು ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಲುವಾಗಿ ಈ ಗ್ರಾಮದಲ್ಲಿ 4 ಶಾಲಾ ಕೊಠಡಿಗಳನ್ನು ಅಂದಾಜು ಪತ್ರಿಕೆ ಪ್ರಕಾರ ಒಳ್ಳೆಯ ರೀತಿಯಲ್ಲಿ ಶಾಲೆಯ ಕೊಠಡಿಗಳನ್ನು ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಜನಪರ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಜನಪ್ರಿಯ ಶಾಸಕ ಜಿ ಹಂಪಯ್ಯ ನಾಯಕ,ಸಿರವಾರ ಪಪಂ ಅಧ್ಯಕ್ಷ ವೈ ಭೂಪನಗೌಡ,ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ,ರುದ್ರಪ್ಪ ಅಂಗಡಿ,ಶರಣಯ್ಯ ನಾಯಕ ಕೆ ಗುಡದಿನ್ನಿ,ಚುಕ್ಕಿ ಶಿವುಕುಮಾರ ಸಾಹುಕಾರ,ಕಿರಿಲಿಂಗಪ್ಪ ಕವಿತಾಳ,ಶಿವಪ್ಪ ಗೊಲದಿನ್ನಿ,ರಮೇಶ ದರ್ಶನಕರ್,ಅರಕೇರಿ ಶಿವಶರಣ ಸಾಹುಕಾರ,ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ,ಇನ್ನು ಅನೇಕ ಮುಖಂಡರು ಇದ್ದರು