ದೇವದುರ್ಗ : ಭಾರತೀಯ ಹತ್ತಿ ನಿಗಮದ ಆಶ್ರಯದಲ್ಲಿ ಹತ್ತಿ ಖರೀದಿ ಕೇಂದ್ರ ಹಾಗೂ ಬೆಂಬಲ ಬೆಲೆಯೊಂದಿಗೆ ಕನಿಷ್ಠ 10 ಸಾವಿರ ರೂಪಾಯಿಗೆ ಖರೀದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಸಮಿತಿ ಪದಾಧಿಕಾರಿಗಳು ಗ್ರೇಡ್2 ತಹಸೀಲ್ದಾರ ವೆಂಕಟೇಶ ಅವರಿಗೆ ಮನವಿ ಪತ್ರ ಸಲ್ಲಿಸಿ, ಆಗ್ರಹಿಸಿದರು.
ಅತಿಯಾದ ಮಳೆಯಿಂದಾಗಿ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಪ್ರಸ್ತುತ ಈಗಿನ ಮಾರುಕಟ್ಟೆಯಲ್ಲಿ ಹತ್ತಿ 6500 ರಿಂದ 7000 ವರಿಗೆ ರೈತರ ಹತ್ತಿ ಖರೀದಿ ಮಾಡಲಾಗುತ್ತದೆ. ಇದರಿಂದ ಪ್ರತಿ ಹೇಕ್ಟರಿಗೆ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷದಲ್ಲಿ ಹತ್ತಿ ಇಳುವರಿ ಕೂಡ ಕಡಿಮೆಯಾಗಿದ್ದು, ರೈತರಿಗೆ ಆತಂಕ ಮನೆ ಮಾಡಿದೆ.
ಹೀಗಾಗಿ ರೈತರಿಗೆ ಪ್ರತಿ ಕಿಂಟ್ಟಲಿಗೆ ಭಾರತೀಯ ಹತ್ತಿ ನಿಗಮದ ಆಶ್ರಯದಲ್ಲಿ ಬೆಂಬಲ ಬೆಲೆಯೊಂದಿಗೆ 10 ಸಾವಿರವರೆಗೆ ಬೆಲೆ ನಿಗದಿ ಮಾಡಿ ಖರೀದಿಸಬೇಕು ಎಪಿಎಂಸಿಯಲ್ಲಿ ನಿಗದಿಪಡಿಸಿದ ಆಧಾರದ ಮೇಲೆ ಖಾಸಗಿ ಮಿಲ್ಗಳಲ್ಲಿ ಬೆಲೆ ಕಡಿಮೆ ಮಾಡಬಾರದು. ಪ್ರತಿ ಕಿಂಟಲಿಗೆ ಸೂಟು ಮುರಿಯೋದು ನಿಲ್ಲಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಅವರಣದಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೇಬ್ರಿಜ್ ಸ್ಥಾಪನೆ ಮಾಾಡುವದರ ಮೂಲಕ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮರಿಲಿಂಗ ಪಾಟೀಲ ಗೌರಂಪೇಟೆ, ತಿಮ್ಮನಗೌಡ ಗೌರಂಪಟೆ, ರಮೇಶ ನಾಯಕ, ಮಲ್ಲೇಶ ನಾಯಕ, ಸೂಗರೆಡ್ಡಿಗೌಡ, ಮಾರುತಿ ನಾಯಕ, ಚಂದ್ರು ನಾಯಕ, ಇಬ್ರಾಹಿಂ ಸಾಬ, ನಾಗರಾಜ, ಚನ್ನಬಸಯ್ಯ ಸ್ವಾಮಿ, ಶಿವು ಉಪ್ಪಾರ, ಶರಣು ನಾಯಕ, ಹನುಮಂತ್ರಾಯ, ಸೇರಿದಂತೆ ಇತರರಿದ್ದರು.