ಮಾನ್ವಿ,: ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ಪಟ್ಟಣಕ್ಕೆ ರವಿವಾರದಂದು ಛತ್ರಪತಿ ಶಿವಾಜಿ ವೃತ್ತದ ಬಳಿ ರ್ನಾಟಕ ರ್ಕಾರ ಹಾಗೂ ಜಿಲ್ಲಾ ಆಡಳಿತ ಬೆಳಗಾವಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ೨೦೦ ನೇ ಕಿತ್ತೂರು ವಿಜಯೋತ್ಸವದ ೨೦೨೪ ರ ರಥಯಾತ್ರೆಯನ್ನು ಬರಮಾಡಿಕೊಂಡ ಶಾಸಕರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಶಿವರಾಜನಾಯಕ ಸಾಹುಕಾರ ವಕೀಲರು ಹಾಗೂ ಉಪ ತಹಶೀಲ್ದಾರ ಅಬ್ದುಲ್ ವಾಹಿದ್ ಅವರು ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಶಾಸಕರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಶಿವರಾಜನಾಯಕ ಸಾಹುಕಾರ ವಕೀಲರು ಅವರು ಆಂಗ್ಲರ ವಿರುದ್ಧ ಕಿತ್ತೂರು ಯುದ್ಧದಲ್ಲಿ ಯುದ್ಧ ಗೆದ್ದ ಕಿತ್ತೂರಾಣಿ ಚೆನ್ನಮ್ಮನ ೨೦೦ನೇ ರ್ಷದ ವಿಜಯೋತ್ಸವದ ಈ ರಥವು ಕಿತ್ತೂರು ರಾಣಿ ಚನ್ನಮ್ಮ ಅವರ ಜನ್ಮ ಸ್ಥಳವಾದ ಕಾಕತಿಯಿಂದ ಸೆ.೨೫ ರಂದು ರಾಣಿ ಚನ್ನಮ್ಮ ಜ್ಯೋತಿ ರಥಯಾತ್ರೆ ಆರಂಭಗೊಂಡಿದ್ದು ರಾಜ್ಯಾದ್ಯಂತ ಸಂಚರಿಸುವ ರಥಯಾತ್ರೆ ಈ ದಿನ ನಮ್ಮ ಮಾನ್ವಿ ನಗರಕ್ಕೆ ಬಂದಿರುವುದು ಸಂತೋಷದ ವಿಷಯ ಎಂದರು. ಕಿತ್ತೂರು ಚೆನ್ನಮ್ಮ ಅವರು ನವೆಂಬರ್ ೧೪, ೧೭೭೮ ರಂದು ರ್ನಾಟಕದ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಚೆನ್ನಮ್ಮ ಲಿಂಗಾಯತ ಸಮುದಾಯದಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಕೌಟುಂಬಿಕ ಸಂಪ್ರದಾಯದಂತೆ ಕತ್ತಿವರಸೆ, ಬಿಲ್ಲುಗಾರಿಕೆ ಮತ್ತು ಕುದುರೆ ಸವಾರಿಯಲ್ಲಿ ತರಬೇತಿ ಪಡೆದಿದ್ದಳು. ಕಿತ್ತೂರು ಚೆನ್ನಮ್ಮ ತನ್ನ ೧೫ನೇ ವಯಸ್ಸಿನಲ್ಲೇ ರಾಜಾ ಮಲ್ಲರ್ಜ ಎಂಬ ದೇಸಾಯಿ ಮನೆತನದವರನ್ನು ವಿವಾಹವಾದರು ಎಂದು ತಿಳಿಸಿದರು.
ಕಿತ್ತೂರಿನ ರಾಣಿ (ರಾಣಿ) ಕಿತ್ತೂರು ರಾಣಿ ಚೆನ್ನಮ್ಮ ಎಂದೂ ಕರೆಯುತ್ತಾರೆ, ಅವರು ಬ್ರಿಟಿಷರ ವಿರುದ್ಧ ಬಂಡಾಯವೆದ್ದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರು ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಅವರ ವಿರುದ್ಧದ ಮೊದಲ ಯುದ್ಧದಲ್ಲಿ ಸೋತ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ೧೮೨೪ ರ ದಂಗೆಗೆ ಪ್ರಸಿದ್ಧರಾಗಿದ್ದಾರೆ. ಈ ಸಾಧನೆಯು ಅವಳನ್ನು ರ್ನಾಟಕ ಸಂಸ್ಕೃತಿಯಲ್ಲಿ ಜಾನಪದ ನಾಯಕಿಯಾಗಿ ಮತ್ತು ಸ್ವಾತಂತ್ರ್ಯ ಚಳವಳಿಯ ಪ್ರಧಾನ ಸಂಕೇತವಾಗಿ ಪರಿರ್ತಿಸಿತು ಎಂದು ಶಿವರಾಜನಾಯಕ ವಕೀಲ ತಿಳಿಸಿದರು.
ಈ ಸಂರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ಲಕ್ಷ್ಮಿ ಡಿ ವೀರೇಶ್, ಶರಣಗೌಡ ಗವಿಗಟ್, ವೆಂಕಟೇಶನಾಯಕ, ಅಮ್ಜದ್ ಖಾನ್, ಸಬ್ಜಲಿಸಾಬ್, ಕೆ ಬಸವರಾಜ್ ಗುಡದಿನ್ನಿ, ಹರಿಹರ ಗೌಡ, ಸತ್ತಾರ್ ಬಂಗ್ಲೆವಾಲೆ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ, ತಾಲೂಕ ವೈದ್ಯಾಧಿಕಾರಿ ಡಾ.ಶರಣಬಸವಗೌಡ ಮುಷ್ಟೂರು, ಹಿಂದುಳಿದ ರ್ಗಗಳ ಕಲ್ಯಾಣಾಧಿಕಾರಿ ನೀಲಮ್ಮ, ಕಂದಾಯ ನಿರೀಕ್ಷಕ ಸತೀಶ್, ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ್ ಮುಧೋಳ, ಮಂಜುನಾಥ್ ಕಮತರ್, ಶ್ರೀಧರದೇಸಾಯಿ, ಬಸವರಾಜ ಶಿಕ್ಷಕ, ಶಿವಲಿಂಗಯ್ಯಸ್ವಾಮಿ, ರ್ಷರ್ಧನ