ರಾಯಚೂರು,ಅ.17: ಎಡೆದೊರೆ ನಾಡು ರಾಯಚೂರು ನಗರಕ್ಕೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಯ ಆಗಮನವಾಗಿದ್ದು, ಗುರುವಾರ ಬೆಳಿಗ್ಗೆ ನಗರದಿಂದ ಹೊರಡುವ ಮುನ್ನ ಜಿಲ್ಲಾಡಳಿತದ ಹಾಗೂ ವಿವಿಧ ಗಣ್ಯರಿಂದ ಪೂಜೆ ಸಲ್ಲಿಸಿ, ಕಲಾ, ಮೇಳದ ವರ್ಣರಂಜಿತ ಪ್ರದರ್ಶನದೊಂದಿಗೆ ರಥಕ್ಕೆ ಬೀಳ್ಕೊಡಲಾಯಿತು.
ಈ ವೇಳೆ ಸಂಸದರಾದ ಜಿ.ಕುಮಾರ್ ನಾಯಕ ಅವರು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆಯು ಕನ್ನಡಿಗರಲ್ಲಿ ನಾಡು ನುಡಿಯ ಜಾಗೃತಿಯನ್ನು ಮೂಡಿಸುತ್ತಿದೆ. ಕನ್ನಡಿಗರಲ್ಲಿ ಭಾಷೆಯ ಅಭಿಮಾನವನ್ನು ಮತ್ತು ನಾಡ ಪ್ರೇಮವನ್ನು ಹೆಚ್ಚಿಸಲು ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸುವುದರ ಮೂಲಕ ಜಾಗೃತಿಯ ಸಂದೇಶವನ್ನು ಮೊಳಗಿಸುತ್ತಿದೆ. ಎಲ್ಲ ಕನ್ನಡಿಗರು ಕನ್ನಡ ರಥವನ್ನು ಸಂಭ್ರಮದಿ0ದ ಸ್ವಾಗತಿಸಿ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರುವ ಜೊತೆಗೆ ರಥವು ಕನ್ನಡಿಗರ ನಡುವೆ ಭಾವನಾತ್ಮಕ ಸಂಬ0ಧವನ್ನು ವೃದ್ಧಿಗೊಳಿಸುತ್ತಿದೆ ಎಂದರು.
ಕನ್ನಡ ರಥವು ಕೇವಲ ಒಂದು ರಥವಲ್ಲ. ಇದು ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ರಥವಾಗಿದ್ದು, ಕನ್ನಡಿಗರು ಜಾತಿ-ಮತ-ಪಂಥ ಲಿಂಗ ಎಂಬ ಬೇಧವನ್ನು ಮರೆತು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಲು ನಾವೆಲ್ಲರೂ ಕಂಕಣಬದ್ಧರಾಗಬೇಕಾಗಿದೆ ಎಂದರು.
ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಯು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನ ರಂಗಮAದಿರದಿAದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೂ ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ವಿವಿಧ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗೂರು, ರಾಯಚೂರು ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯ ಸ್ವಾಮಿ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕಾಳಪ್ಪ ಬಡಿಗೇರೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಅಭಿಮಾನಿಗಳು ಹಾಗೂ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.