ಕಾರಟಗಿ, ಆ.04
ತಾಲೂಕಿನ ಸೋಮನಾಳ ಗ್ರಾಮದಲ್ಲಿನ ಮೃತ ಪಿಎಸ್‌ಐ ಪರುಶುರಾಮ ಕುಟುಂಬಕ್ಕೆ ಆರ್. ಅಶೋಕ ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು
ಬಾಳಿ ಬೆಳಾಗಬೇಕಾದ ನಮ್ಮ ಮನೆಯ ದೀಪಾ ಆರಿವೋತ್ತಲ್ಲ, ಕಷ್ಟದಲ್ಲಿ ಬೆಳೆದು ಕಷ್ಟದಲ್ಲಿ ವಿಧ್ಯಾಭ್ಯಾಸ ಮಾಡಿ, ಸರಕಾರಿ ನೌಕರಿ ಸೇರಿದ್ದ ಆದರೆ ವಿಧಿ ಆಟನೇ ಬೇರೆ, ಈ ಕಷ್ಟ ಹೇಗೆ ಹೇಳಬೇಕು ಎಂದು ರೋದಿಸಿ ಆಳುತ್ತಿದ ತಂದೆ ತಾಯಿಗೆ ಆರ್.ಆಶೋಕ ಸಂತೈಸಿದರು. ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್‌ಐ ಪರುಶರಾಮ್ ಅವರ ಕುಟುಂಬದ ಸದಸ್ಯರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಾಲೂಕಿನ ಸೋಮನಾಳ ಗ್ರಾಮದಲ್ಲಿನ ಮೃತ ಪಿಎಸ್‌ಐ ಪರುಶುರಾಮ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವನದ ಮಾತುಗಳನ್ನಾಡಿ ನಿಮ್ಮೊಂದಿಗೆ ನಾವಿದ್ದೇವೆ. ನಿಮಗೆ ನ್ಯಾಯ ಸಿಗುವವರೆಗೂ ಜೊತೆಗಿರುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ವಿರೋಧಪಕ್ಷದ ನಾಯಕರು ಪಿಎಸ್‌ಐ ಅವರ ತಂದೆ ಹಾಗೂ ಸಹೋದರ ಹನುಮಂತಪ್ಪ ಅವರೊಂದಿಗೆ ಸುದೀರ್ಘವಾಗಿ ಸಮಾಲೋಚಿಸಿದರು. ನಾನು ಪಾದಯಾತ್ರೆಯಲ್ಲಿದ್ದೇ ವಿಷಯ ತಿಳಿಯುತ್ತಿದ್ದಂತೆ ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ಏನೇನು ಆಗಿದೆ ಎನ್ನುವ ಸಂಪೂರ್ಣ ಮಾಹಿತಿ ನೀಡಿ. ಈ ತರಹದ ಅನ್ಯಾಯ ಸಹಿಸಲ್ಲ ಮತ್ತು ಇಷ್ಟಕ್ಕೆ ಬಿಡಲ್ಲ. ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಲೇಬೇಕು. ಅಲ್ಲಿವರೆಗೂ ನಾನು ಸುಮ್ಮನಿರಲ್ಲ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಪಿಎಸ್‌ಐ ಪರುಶುರಾಮ ಅವರ ಪತ್ನಿಯ ತವರುಮನೆ ರಾಯಚೂರಿನಲ್ಲಿದ್ದು, ಅವರ ತಂದೆಗೆ ಕರೆ ಮಾಡಿದ ಅಶೋಕ ಸಾಂತ್ವನ ಹೇಳಿದರು. ನನಗೆ ವಿಷಯ ತಿಳಿದ ತಕ್ಷಣ ಮೈಸೂರಿನಿಂದ ನಿಮ್ಮ ಅಳಿಯನ ಗ್ರಾಮಕ್ಕೆ ಬಂದಿದ್ದೇನೆ. ನಿಮ್ಮ ಮಗಳು ತುಂಬು ಗರ್ಭಿಣಿ ಎನ್ನುವುದು ಗೊತ್ತಾಯ್ತು ಅವರು ಹೋಗಿರುವುದು ನನಗೆ ಗೊತ್ತಾಗಲಿಲ್ಲ. ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ. ಅಸ್ಪೃಶ್ಯತೆ ಆಚರಣೆ ಇದು ಅಂಬೇಡ್ಕರ್‌ಗೆ ಮಾಡಿದ ಅಪಮಾನ, ಇದು ಸರಿಯಲ್ಲ. ನಾನು ಸಚಿವನಾಗಿದ್ದಾಗ ಹಲವು ದಲಿತ ಅಧಿಕಾರಿಗಳಿದ್ದರು. ಜಾತಿ ಮುಖ್ಯವಲ್ಲ. ಆ ರೀತಿ ನಡೆದುಕೊಂಡಿದ್ದು ಸರಿಯಲ್ಲ. ನಾನು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ರಾಜು ನಾಯಕ್, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಮಾಜಿ ಸಂಸದ ಶಿವರಾಮೇಗೌಡ, ಮುಖಂಡರಾದ ಸಿ.ವಿ ಚಂದ್ರಶೇಖರ, ನಾಗರಾಜ್ ಬಿಲ್ಗಾರ್, ಶ್ರೀಧರ ಕೆಸರಟ್ಟಿ ಇನ್ನಿತರರು ಇದ್ದರು.