ರಾಯಚೂರು: ಮೇ-28:
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದ್ದು, ಮತದಾನ ಆರಂಭಕ್ಕೂ ಮುನ್ನಾ ಏಜೆಂಟ್‌ಗಳ ಸಮ್ಮುಖದಲ್ಲಿ ಮತಪೆಟ್ಟಿಗೆ ತೋರಿಸಿ ಸೀಲ್ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.
ನಗರದ ಜಿ.ಪಂ.ಸಭಾAಗಣದಲ್ಲಿ ನಡೆದ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಗೆ ನಿಯೋಜನೆಗೊಂಡ ಮೈಕ್ರೋ ಅಬ್ಸರ್ವರ್‌ಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ, ೧೧ ಚೆಕ್ ಲೀಸ್ಟ್ನಲ್ಲಿ ಮಾಹತಿ ನಮೂದಿಸಬೇಕೆಂದು ಹೇಳಿದರು.
ಬೆಳಗ್ಗೆ ೮ ಗಂಟೆಗೆ ಮತದಾನ ಕಾರ್ಯ ಆರಂಭವಾಗಲಿದ್ದು, ಇದಕ್ಕೂ ಮುಂಚಿತವಾಗಿ ಮತಪೆಟ್ಟಿಗೆಗಳನ್ನು ಏಜೆಂಟ್‌ರ ಸಮ್ಮುಖದಲ್ಲಿ ಪರಿಶೀಲನೆ ಮಾಡಿ ಸೀಲ್ ಮಾಡಬೇಕೆಂದರು. ಬಳಿಕ ಮತದರರ ಪಟ್ಟಿಯಲ್ಲಿ ಮತದಾರರ ಗುರುತು, ಶ್ಯಾಹಿ ಹಾಕುವುದು, ಏಜೆಂಟರ್ ಪರಿಶೀಲನೆ ಮಾಡಬೇಕೆಂದರು.
ಮೈಕ್ರೋ ಅಬ್ಸರ್ವರ್‌ಗಳಿಗೆ ಚೆಕ್ ಲೀಸ್ಟ್ ನೀಡುತ್ತಿದ್ದು ಅದರಲ್ಲಿನ ೧೧ ಅಂಶಗಳನ್ನು ನಮೂದಿಸಬೇಕು, ಚೆಕ್‌ಲೀಸ್ಟ್ ೨ ಇದ್ದು,ಸೀಲ್ಡ್ ಮತ್ತು ಅನ್‌ಸೀಲ್ಡ್ ಚೆಕ್ ಲೀಸ್ಟ್ ಸಲ್ಲಿಸಿಲಾಗುತ್ತದೆ, ಅಂಶಗಳನ್ನು ನಮಝೂದಿಸಬೇಕು, ಜಿಲ್ಲೆಯಲ್ಲಿ ೩೦ ಮತದಾನ ಕೇಂದ್ರಗಳೀದ್ದು, ೩೦ ಜನ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ. ನೇಮಕಗೊಂಡವರು ಮತದಾನದ ಹಿಂದಿನ ದಿನವೇ ಮತದನ ಕೇಂದ್ರದಲ್ಲಿ ಇರಬೇಕು ಎಂದು ಸೂಚಿಸಿದರು.
ಮತದಾನ ದಿನದಂದು ಮೈಕ್ರೋ ಅಬ್ಸರ್ವರ್ ಗುರುತಿಸಿದ ಸ್ಥಳದಲ್ಲಿ ನಿಯೋಜನೆಗೊಂಡಿರಬೇಕು, ಅಬ್ಸರ್ವರ್‌ಗಳ ಪರವಾಗಿ ತಾವು ಕೆಲಸ ಮಾಡುತ್ತಿದ್ದೀರಿ, ಪ್ರತಿಯೊಂದು ಮಾಹಿತಿ ಹಾಗೂ ಎಲ್ಲವನ್ನು ಪರಿಶೀಲನೆ ಮಾಡಬೇಕು, ಮತದನ ಕೇಂದ್ರದ ಆರಂಭದಲ್ಲಿ ಪರಿಶೀಲನೆ ಮತ್ತು ಮತದಾನ ಮುಗಿದ ಬಳಿಕ ಪರಿಶೀಲನೆ ಅತ್ಯಂತ ಮುಖ್ಯವಾಗಿದೆ ಎಂದರು.
ಮತದಾನ ದಿನ ಮತದಾರರ ಪಟ್ಟಿಯಲ್ಲಿರುವಂತೆ ಅಧಿಕಾರಿಗಳು ಮತದಾರರ ಗಂಡು ಮತ್ತು ಹೆಣ್ಣು ಗುರುತು ಮಾಡುತ್ತಿದ್ದಾರೆಯೇ, ಮತದಾರರ ಯಾವ ಕೈಯಿಗೆ ಶಾಹಿ ಹಾಕಿದ್ದಾರೆ, ಹೆಸರು ಸಹಿ, ಸಂಗ್ರಹ ಮತ್ತು ಇತರೆ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಇಲ್ಲವೆಂದು ಪರಿಶೀಲನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಚುನಾವಣಾ ತರಬೇತುದಾರ ಸದಾಶಿವಪ್ಪ ತರಬೇತಿ ನೀಡಿದರು. ಸಹಾಯಕ ಆಯುಕ್ತ ಸಂಪಗಾವಿ ಸೇರಿ ಮೈಕ್ರೋ ಅಬ್ಸರ್ವರ್‌ಗಳು ಉಪಸ್ಥಿತರಿದ್ದರು.