ರಾಯಚೂರು,ಜು.4: ರಾಜ್ಯದಲ್ಲಿ ನಾಲ್ಕು ವರ್ಷ ಪದವಿ ಸ್ಥಗಿತವಾದ ಹಿನ್ನೆಲೆಯಲ್ಲಿAIDSO ನೇತೃತ್ವದಲ್ಲಿ ನಡೆದ ಐತಿಹಾಸಿಕ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಜುಲೈ ೪ ರಂದು ರಾಯಚೂರು ಜಿಲ್ಲೆಯ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ರಾಯಚೂರು ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ AIDSO ರಾಯಚೂರು ಜಿಲ್ಲಾ ಅಧ್ಯಕ್ಷರಾದ ಹಯ್ಯಾಳಪ್ಪ ಅವರು ಮಾತನಾಡುತ್ತಾ. ಕೇಂದ್ರ ಸರ್ಕಾರ ಜನರ ಹೋರಾಟಕ್ಕೆ ಸ್ಪಂದಿಸದೆ ಬಂಡತನದಿ0ದ ಈ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ, ಜನ ವಿರೋಧಿ ನೀತಿಯನ್ನು ಜಾರಿಗೆ ತಂದಿತು. ಕರ್ನಾಟಕ ರಾಜ್ಯದಲ್ಲೂ ಕೂಡ ಅವೈಜ್ಞಾನಿಕವಾಗಿ ಅಪ್ರಜಾತಾಂತ್ರಿಕವಾಗಿ ವಿದ್ಯಾರ್ಥಿ ವಿರೋಧಿಯಾದ ಈ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಯಿತು. ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಯಿತು. ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಾಗಿದ್ದ ಭಗತ್ ಸಿಂಗ್, ನೇತಾಜಿ, ವಿವೇಕಾನಂದರ0ಥ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಪುಸ್ತಕದಿಂದ ತೆಗೆದುಹಾಕಲು ಮತ್ತು ತಿರುಚಲು ಸರ್ಕಾರ ಮುಂದಾಯಿತು. ಅದೇ ರೀತಿ ಯಾವ ತಯಾರಿಯೂ ಇಲ್ಲದೆ ನಾಲ್ಕು ವರ್ಷದ ಅಪ್ರಜಾತಾಂತ್ರಿಕ ಪದವಿ ಜಾರಿ ಮಾಡಿ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಲಾಯಿತು, ಇವುಗಳ ವಿರುದ್ಧ ರಾಜ್ಯದಾದ್ಯಂತ AIDSO ನೇತೃತ್ವದಲ್ಲಿ ಅವೈಜ್ಞಾನಿಕವಾದ ಎನ್ಇಪಿಯನ್ನು ರದ್ದುಗೊಳಿಸುವಂತೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಶಿಕ್ಷಣ ಪ್ರೇಮಿ ಜನರನ್ನು ಒಗ್ಗೂಡಿಸಿ ರಾಜಿರಹಿತವಾಗಿ ನಡೆಸಿದ ನಿರಂತರ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಸಂಪೂರ್ಣವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಿತು. ಭಗತ್ ಸಿಂಗ್, ನೇತಾಜಿ ರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳೊಂದಿಗೆ ವಿದ್ಯಾರ್ಥಿಗಳು ಇನ್ನು ಮುಂದೆಯೂ ಕೂಡ ಶಿಕ್ಷಣದ ವ್ಯಾಪಾರಿಕರಣ, ಶುಲ್ಕ ಹೆಚ್ಚಳದಂತ ಹಲವಾರು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.
ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ AIDSO ಜಿಲ್ಲಾ ಉಪಾದ್ಯಕ್ಷರಾದ ಪೀರ್‌ಸಾಬ್ ರವರು ಮಾತನಾಡುತ್ತಾ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಂದಾಗಿ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಎನ್ಇಪಿ-2020 ನೀತಿಯನ್ನು ವಿರೋಧಿಸಿ ಸಾರ್ವಜನಿಕ ಶಿಕ್ಷಣವನ್ನು ಉಳಿಸಿ ಎಂಬ ಘೋಷಣೆಯ ಅಡಿಯಲ್ಲಿ, ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗಾಗಿ ನಡೆದ ಒಂದು ಕೋಟಿ ಸಹಿಸಂಗ್ರಹ ಅಭಿಯಾನದಲ್ಲಿ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಸುಮಾರು 1.5 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ರಾಯಚೂರು ಜಿಲ್ಲೆಯಲ್ಲಿ ಸಂಗ್ರಹಿಸಲಾಗಿತ್ತು. ಈ ಹೋರಾಟದ ಮೂಲಕ ರಾಜ್ಯದಾದ್ಯಂತ ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಹೊಸ ಅಲೆಯನ್ನು ವಿದ್ಯಾರ್ಥಿಗಳು ಸೃಷ್ಟಿ ಮಾಡಿದ್ದರು. ಇಂತಹ ಒಗ್ಗಟ್ಟಿನ ಹೋರಾಟಗಳಿಂದ ಮಾತ್ರ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ವಿದ್ಯಾರ್ಥಿಗಳು ಸಂಘಟಿತರಾಗಿ ಇಂತಹ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟದ ಧ್ವನಿಯನ್ನು ಎತ್ತಬೇಕೆಂದು ಹೇಳಿದರು.
AIDSO ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಈ ಸಮಾವೇಶದ ಸಭೆಯನ್ನು ನಡೆಸಿಕೊಟ್ಟರು. ಈ ಸಮಾವೇಶದಲ್ಲಿ AIDSO ಜಿಲ್ಲಾ ಖಜಾಂಚಿ ಅಮೋಘ ಸದಸ್ಯರಾದ ವೀರೇಶ್, ನಿತಿನ್ ಸೇರಿದಂತೆ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.