ತಪ್ಪಿತಸ್ಥರಿದ್ದರು ಯಾರೆಯಾಗಲಿ ಈ ನೆಲದ ಕಾನೂನಿಗೆ ತಲೆ ಬಾಗಲೇಬೇಕು : ಎಚ್.ಡಿ.ಕುಮಾರಸ್ವಾಮಿ

Eshanya Times
WhatsApp Group Join Now

ಸಿಂಧನೂರು.ಮೇ.3- ಸಿಎಂ ಸಿದ್ದರಾಮಯ್ಯ ಪಿಎಂ ನರೇಂದ್ರ ಮೋದಿಯವರಿಗೆ ಲುಕ್ ಓಟ್ ಅಂತ ಪತ್ರ ಬರೆದಿದ್ದಾರೆ. ವೀಸಾ ಎಲ್ಲಿ ಕೊಡಲ್ಲ ಎಲ್ಲಿದ್ದಾನೋ ಅಲ್ಲಿ ಕೊಡೋದು, ಪಿಎಂಗೆ ಪಾಸ್ ಪೋರ್ಟ್ ರದ್ದು ಮಾಡಲು ಪತ್ರ ಬರೆದಿದ್ದಾರೆ. ಆ ವ್ಯಕ್ತಿ ವಿದೇಶಕ್ಕೆ ಹೋಗುವಾಗ ಯಾವುದೇ ಕೇಸ್ ಬುಕ್ ಆಗಿರಲ್ಲಿಲ್ಲ. ನೀವು ಕ್ರಮದ ಬಗ್ಗೆ ನಿಮ್ಮ ಚಿಂತನೆ ವ್ಯಕ್ತಪಡಿಸುವ ಮೊದಲೇ ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ ನಿಮಗೆ ಎಲ್ಲಾ ಅವಕಾಶಗಳಿದ್ದು ಕ್ರಮ ತೆಗೆದುಕೊಂಡಿದ್ದೀರಿ ತಪ್ಪೇನಿಲ್ಲ ಆದರೆ ಈ ವಿಷಯಕ್ಕೆ ಪದೇ ಪದೇ ಪಿಎಂ ನ ಯಾಕೆ ಎಳೆದು ತರ್ತಿರಿ, ಯಾರೇ ತಪ್ಪಿತಸ್ಥರಿದ್ದರು ಈ ನೆಲದ ಕಾನೂನಿಗೆ ತಲೆ ಬಾಗಲೇಬೇಕು. ಮತ್ತು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅವರು ಶುಕ್ರವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ಎನ್ ಡಿಎ ಮೈತ್ರಿ ಅಭ್ಯರ್ಥಿ ಡಾ.ಬಸವರಾಜ ಎಸ್.ಕ್ಯಾವಟರ್ ಪರ ಮತ ಯಾಚನೆ ಮತ್ತು ಬಹಿರಂಗ ಪ್ರಚಾರ ಸಭೆ ನಡೆಸಲು ಆಗಮಿಸಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ನಿವಾಸದಲ್ಲಿ ಪತ್ರಿಕಾಗೋಷ್ಢಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಆರೋಪಿ ಸ್ಥಾನದಲ್ಲಿದ್ದಾನೆ. ಇದನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಇದೆ. ಇದರಲ್ಲಿ ಯಾರ ಯಾರ ಪಾತ್ರ ಇದೆ. ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಈ ಬಗ್ಗೆ ಇನ್ನೊಂದು ಸಾರಿ ಮಾತನಾಡುತ್ತೇನೆ. ಇತ್ತೀಚೆಗೆ ಮಾಧ್ಯಮಗಳಿಗೆ ಏಪ್ರಿಲ್ ೨೧ ರಿಂದ ೨೫ ಕ್ಕೆ ಪೆನ್ ಡ್ರೈವ್ ಸರ್ಕ್ಯೂಲೇಟ್ ಮಾಡಿದ್ದಾರೆ ಪ್ರತಿದಿನ ಎಪಿಸೋಡ್ ಪ್ರಸಾರವಾಗುತ್ತಿದೆ. ದೇವೆಗೌಡರ ಮನೆ ಮುಂದೆ ಮತ್ತು ನನ್ನ ಮನೆ ಮುಂದೆ ಮಾಧ್ಯಮದವರು ರಾತ್ರಿಯಿಡೀ ನಿಲ್ಲುವ ಹೊಸ ಪದ್ದತಿ ಶುರುವಾಗಿದೆ. ನನ್ನದಾಗಲಿ ದೇವೆಗೌಡರಾಗಲಿ ಇದರಲ್ಲಿ ನಮ್ಮ ಪಾತ್ರ ಇಲ್ಲ. ಆದರೂ ನಮ್ಮ ಸುತ್ತ ಸುತ್ತೋದ್ಯಾಕೆ ಎಂದು ಪ್ರಶ್ನೆ ಮಾಡಿದರು.

ಪ್ರಜ್ವಲ್ ರೇವಣ್ಣ ಒಂದು ವಾರ ಸಮಯ ಕೇಳಿದ್ದಾನೆ, ಸಮನ್ಸ್ ಕೊಟ್ಟಾಗ ಬೇಲೆಬಲ್ ಸೆಕ್ಸ್ನ್ ಹಾಕಿಕೊಂಡಿದ್ದಾರೆ. ಕೂಡಲೇ ಪ್ರತಿಕ್ರಿಯೆ ಕೊಟ್ಟಿದ್ದಾನೆ, ರೇವಣ್ಣ ಸಮಯ ಕೇಳಿದ್ದಾರೆ ಬರಲ್ಲ ಅಂತ ಹೇಳಿಲ್ಲ, ಸಮನ್ಸ್ ಗೆ ಮರ್ಯಾದೆ ಕೊಡದೆ ಇರುವ ಘಟನೆಗಳು ದೇಶದಲ್ಲಿ ನಡೆಯುತ್ತಿವೆ. ನಿಮ್ಮ ಮಂತ್ರಿ ಡಿಸಿಎಂ ನೀವು ಸಿಎಂ ತನಿಖೆ ವರದಿ ಏನ್ ಮಾಡ್ತಿರಿ ವರದಿ ಕೇವಲ ಪ್ರಚಾರಕ್ಕೆ ಇಟ್ಟುಕೊಂಡಿದ್ದೀರೋ ನಾನು ಎಲ್ಲಾ ದಾಖಲೆ ರೆಡಿ ಮಾಡಿ ಇಟ್ಟುಕೊಂಡಿದ್ದೇನೆ ಏನೇನ್ ಮಾಡಿದ್ದಾರೆ ಎಂದು ನಾನೇ ಹೊರಗೆ ಬಿಟ್ಟಿದ್ದೀನಿ ಅಂತಾರೆ ನನಗೆನು ಹುಚ್ಚಾ! ಟೆಂಟ್‌ನಲ್ಲಿ ಬ್ಲೂಫಿಲ್‌ಂ ಬಿಡುಗಡೆ ಮಾಡುವವರು ಇದನ್ನ ಮಾಡಿದ್ದಾರೆ. ಸಿಎಂ ಗೆ ಹೇಳ್ತಿನಿ ತಂದೆ ತಾಯಿ ಮೇಲೆ ಗೌರವ ಇದ್ರೆ ಯಾವ ಸಂಸ್ಕೃತಿಯಿAದ ಬಂದಿದ್ದೀರಿ ಗೊತ್ತಿಲ್ಲ. ಸಿಎಂಗೆ ಮನುಷ್ಯತ್ವ ಇಲ್ಲದೆ ಇರಬಹುದು ಅವರ ಕುಟುಂಬದ ಬಗ್ಗೆ ಹೇಳಲ್ಲ. ನಮ್ಮ ತಂದೆತಾಯಿಗೆ ಆತ್ಮ ಸ್ಥೈರ್ಯ ತುಂಬಲು ನಾನು ಎರಡು ದಿನ ಬೆಂಗಳೂರಿನಲ್ಲಿದ್ದೆ. ಅಲ್ಲಿ ಕ್ಯಾಮೆರಾಗಳಿದ್ದವು ವಿಡಿಯೋಗಳನ್ನ ತರಿಸಿಕೊಂಡು ನೋಡ್ರಿ ನಮ್ಮ ತಂದೆ ತಾಯಿ ಜೀವಕ್ಕೆ ಅಪಾಯ ಆಗಬಾರದು. ಅವರು ಯಾವ ರೀತಿ ಬದುಕಿದ್ದಾರೆ ಅಂತ ನೀವು ಮರೆತಿರಬಹುದು. ನೀವು ದಿನ ಇಷ್ಟಬಂದ ಹೇಳಿಕೆ ಕೊಡುತ್ತಾ ಹೋದ್ರೆ ಇಷ್ಟು ದಿನ ಎಸ್ ಐ ಟಿ ರಚನೆ ಮಾಡಿದ್ದಿರಲ್ಲ ಯಾವುದರಲ್ಲಿ ಶಿಕ್ಷೆಯಾಗಿದೆ. ಪಿಎಂ ಕ್ಷಮೆ ಕೇಳಬೇಕು ಅಂತಿರಾ ಬಾಗಲಕೋಟೆ ಮೇಟಿ ಜೊತೆ ಕುಳಿತು ನೀವು ಪ್ರಚಾರ ಮಾಡಿಲ್ವಾ? ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮೇಲೆ ಕಿಡಿ ಕಾರಿದರು

ನಿಮ್ಮ ಬಳಿ ಮೊದಲೇ ಇತ್ತಲ್ಲಾ ಮೋದಿಗೆ ಕಳುಹಿಸಬೆಕಿತ್ತು. ಆ ಪೋಟೋ ಹಾಕಿದ್ದಿರಲ್ಲ ಅದರಲ್ಲಿ ಎಲ್ಲೂ ಪ್ರಜ್ವಲ್ ಮುಖ ಇಲ್ಲ ನೀವು ಮಾರ್ಕೆಟ್‌ಗೆ ಬಿಟ್ಟಿದ್ದೀರಿ, ಮಲ್ಲಿಕಾರ್ಜುನ ಖರ್ಗೆ ಪಿಎಂ ಆಗಬಾರದು ರಾಹುಲ್ ಗಾಂದಿ ಆಗಬೇಕು ಅಂದ್ರಲ್ಲಾ ಆ ರಾಹುಲ್ ಗಾಂಧಿ ಹೇಳಿದ್ದೇನು ? ಪ್ರಜ್ವಲ್ ೪೦೦ ರೇಪ್ ಮಾಡಿದ್ದಾನೆ ಅಂತ ಹೇಳ್ತಾರೆ ಮಾಜಿ ಪ್ರಧಾನಿ ಮಗಾನಾ ಇವನು ಅಂತಾರೆ. ಈ ಮಾಹಿತಿ ನೀವು ಇಲ್ಲಾ ನಿಮ್ಮ ಡಿಸಿಎಂ ಕೊಟ್ಟಿರಬೇಕು. ಅಷ್ಟು ಸಂಖ್ಯೆ ಹೇಳ್ತಾರೆ ಅಂದ್ರೆ ಅವರ ಬಳಿ ಮಾಹಿತಿ ಇರಬಹುದು. ಎಸ್ ಐಟಿ ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು. ತೋಟದ ಮನೆ ಬಗ್ಗೆ ಮಾತನಾಡ್ತಾರೆ. ಬನ್ನಿ ಬಂದು ನೋಡಿ ಎಷ್ಟು ಜನ ಇದ್ದಾರೆ ಗೊತ್ತಾಗುತ್ತೆ, ಡಿಸಿಎಂ ಹೊಟೆಲ್ ನಲ್ಲಿ ೬-೭ ಜನರನ್ನ ಬರೆಸಲು ಇಟ್ಟಿದ್ದಾರೆ ಲೆಕ್ಕ ಕೊಡ್ಲಾ ನಾನು ಎಂದರು.

ಸರ್ಕಾರಕ್ಕೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆಯಾ ತಕ್ಷಣ ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು, ಧಮ್ಮು ತಾಕತ್ತು ಇದ್ರೆ ನೋಟಿಸ್ ಕೊಡಿಸಿ, ಸಂತ್ರಸ್ತರಿಗೆ ಪರಿಹಾರ ಕೊಡುವುದು ನಿಮಗೆ ಬೇಕಿಲ್ಲ ಚುನಾವಣೆಯಲ್ಲಿ ಓಟು ಪಡೆಯಬೇಕು ಮೋದಿ ಹೆಸರು ಹಾಳು ಮಾಡಬೇಕು ಮೋದಿ ಪಾತ್ರ ಇದರಲ್ಲಿ ಏನಿದೆ ನಮಗೆ ಹಿಟ್ ಅಂಡ್ ರನ್ ಅಂತಾರೆ ನಾವೇನು ಹೆದರಿಕೊಂಡು ಹೋಗಲ್ಲ. ಕಾಲವೇ ಉತ್ತರ ಕೊಡುತ್ತೆ ಯಾರೋ ಮಾರ್ಫಿಂಗ್ ಮಾಡಿದ್ದಾರೆ ಅಂತೆಲ್ಲಾ ನಾವು ಹೇಳಿಲ್ಲ. ತನಿಖೆ ಮಾಡಿ ಅಂತ ಹೇಳಿದ್ದೇವೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪದೇ ಪದೇ ನನ್ನ, ದೇವೆಗೌಡರ ಹೆಸರು ಹೊರ ತಂದು ವರ್ಚಸ್ಸು ಹಾಳು ಮಾಡಲು ಆಗಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದರು.

 

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಹನುಮಂತಪ್ಪ ಹಾಲ್ಕೋಡ್, ಮಾನ್ವಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಹಾಂತೇಶ್ ಪಾಟೀಲ್ ಅತ್ತನೂರು, ಶಿವಶಂಕರ್, ಬಸವರಾಜ ನಾಡಗೌಡ, ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು, ಇದ್ದರು.

WhatsApp Group Join Now
Telegram Group Join Now
Share This Article

Eshanya Times, Regional Kannada Daily is a leading news paper in Kalyana Karnataka (North Karnataka). Which is having large number of circulation in the districts of Raichur, Koppla, Bellary, Yadgir, Gulbarga, Bidar, Vijayanagara, Bagalkote and in the capital city of Bangalore.

This News Paper having Registred Office in Raichur City, Karnataka State.

The main mooto of the Eshanya Times news paper is to serve the nation and to give wide publicity of Government Developmental programmes and policies which are execuited in Government and also to give social justice to the people of Karnataka.

Copyright © 2024. Eshanya Times.  All Rights Reserved,

Powered By KhushiHost
24/7 Help Desk Support – Call Now +919060329333 

error: Content is protected !!