ರಾಯಚೂರು: ನಗರದ ವಾರ್ಡ ನಂ.೨೮ರ ವ್ಯಾಪ್ತಿಯಲ್ಲಿ ಬರುವ ಮೈಲಾರ ನಗರದ ಸ್ಮಶಾನ ಭೂಮಿಯನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಠಿಸಿ ಭೂಮಿ ಕಬಳಿಸಿದ್ದು, ಈ ಭೂಮಿ ನೊಂದಾಣಿಯನ್ನು ಜಿಲ್ಲಾಧಿಕಾರಿಗಳು ರದ್ದುಗೊಳಿಸದ್ದಾರೆಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ನರಸಿಂಹಲು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಶಾನ ಭೂಮಿ ನಕಲಿ ದಾಖಲೆ ಸೃಷ್ಠಿಸಿ ಕಬಳಿಸಿ ನೋಂದಾಣಿ ಮಾಡಿಸಿಕೊಂಡಿದ್ದ ಲಕ್ಷö್ಮಣ ಹುಲಿಗಾರ ನೋಂದಾಣಿ ರದ್ದು ಪಡಿಸಲಾಗಿದೆ. ಪಹಣಿಯಲ್ಲಿ ಸರಕಾರಿ ಭೂಮಿಯೆಂದು ನಮೂದಿಸಲಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಸಂಭAದಿಸಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮೈಲಾರ ನಗರದ ಹರಿಶ್ಚಂದ್ರ ರುದ್ರಭೂಮಿ ಸರ್ವೆ ನಂ.೩೮೧/೩ ಐದು ಎಕರೆ ಹತ್ತು ಗುಂಟೆ ಸ್ಮಶಾನ ಭೂಮಿಯಾಗಿದ್ದು, ಹತ್ತಾರು ವರ್ಷಗಳಿಂದ ಎಸ್. ಸಿ,ಎಸ್.ಟಿ,ಓಬಿಸಿ ಸಮುದಾಯದ ಜನರು ಸ್ಮಶಾನ ಭೂಮಿಯಾಗಿ ಬಳಸಿಕೊಂಡು ಬಂದಿದ್ದಾರೆ. ಆದರೆ ಈ ಭೂಮಿ ಕಬಳಿಸಿ ನಕಲಿ ದಾಖಲೆ ಸೃಷ್ಠಿಸಿ ನೋಂದಾಣಿ ಮಾಡಿಕೊಂಡಿರುವದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಮತ್ತು ಅಲ್ಲಿನ ನಿವಾಸಿಗಳು ಹೋರಾಟಕ್ಕೆ ಇಳಿದಾಗ ಹಿಂದಿನ ಜಿಲ್ಲಾಧಿಕಾರಿಗಳೂ ತಹಶೀಲ್ದಾರ್ರಿಗೆ ಪಂಚನಾಮೆ ವರದಿ ನೀಡಲು ಸೂಚಿಸಿದರು.
ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ೨೦೨೩ ಡಿಸೆಂಬರ್ ೨೩ ರಂದರು ವರದಿ ನೀಡಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸರ್ವೆ ಇಲಾಖೆ,ನಗರಸಭೆ,ಪೌರಾಯುಕ್ತರರು, ಭೂ ದಾಖಲೆಗಳ ಸಾಯುಕ ನಿರ್ದೇಶಕರು ಹಾಗೂ ಸ್ಯಾಟಲೈಟ್ ಕ್ಯಾಮರ್ ಮೂಲಕ ಜಂಟಿ ಸರ್ವೆ ನಡೆಸಿ ನೀಡಿದ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಲಕ್ಷö್ಮಣ ಹುಲಗಾರ ಇವರು ಮಾಡಿಕೊಂಡಿದ್ದ ಜಮೀನು ನೋಂದಾಣಿ,ಮುಟ್ಯೇಶನ್ ರದ್ದುಗೊಳಿಸಿ ಆದೇಶಿಸಿದ್ದಾರೆ. ಅಲ್ಲದೇ ಪಹಣಿಯಲ್ಲಿ ಮತ್ತು ಮುಟ್ಯೇಷನ್ಲ್ಲಿ ಸರಕಾರಿ ಜಮೀನು ಎಂದು ನಮೂದಿಸಲಾಗಿದೆ.
ಲಕ್ಮ÷್ಷಣ ಹುಲಿಗಾರ ಇವರು ಸುಳ್ಳು ಆರೋಪ ಮಾಡಿ ನರಸಿಂಹಲು, ನ್ಯಾಯವಾದಿ ವಿನೋದ ಸಾಗರ ಇವರು ಬ್ಲಾಕ್ ಮೇಲೆ ಮಾಡುತ್ತಿದ್ದಾರೆ. ಸ್ವತಃ ಖರೀದಿಸಿರುವದಾಗಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿರುವದು ಬಹಿರಂಗವಾಗಿದೆ. ನಕಲಿ ದಾಖಲೆ ಸೃಷ್ಠಿಸಿ ಸರಕಾರಿ ಜಮೀನು ಕಬಳಿಸಲು ಯತ್ನಿಸಿದ ಲಕ್ಷö್ಮಣ ಹುಲಿಗಾರ, ನಕಲಿ ಮಾರಾಟಗಾರ ತಿಮ್ಮಯ್ಯ, ನರಸಿಂಹಲು ಅಲಿಯಾಸ್ ಬುರಸಲಿ, ವೇಣುಗೋಪಾಲರೆಡ್ಡಿ ಗುಂಟೂರು, ವೆಂಟರೆಡ್ಡಿ ಇವರ ಎಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ಇ.ಕುಮಾರ, ಹನುಮೇಶ ಆರೋಲಿ, ವಿನೋದಸಾಗರ ವಕೀಲ್, ಎಂ.ಮಾರೆಪ್ಪ, ಮಾದವರೆಡ್ಡಿ, ಶಾಲಂಸಾಬ್,ಸೆAಟಿAಗ್ ಮಾಹದೇವ, ನಾಗರಾಜ,ಉಮೇಶ, ಶೇಖರ್, ರಾಜೇಶ್ವರಿ ಬಸ್ಸಮ್ಮ, ಫುರುದ್ದೀನ್ ಅಹ್ಮದ್ ಅಲಿ, ಜೆ.ನರಸಿಂಹಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.