ಜಿಲ್ಲೆಯ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ- ಡಿಸಿ ನಿತೀಶ್

Eshanya Times

ರಾಯಚೂರು,ಜು.13: ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂದು ಅಂಟಿಕೊ0ಡಿರುವ ಹಣೆ ಪಟ್ಟಿಯನ್ನು ಹೋಗಲಾಡಿಸಲು ನಾವು ನೀವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ ಮತ್ತು ವಿಶೇಷವಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಜಿಲ್ಲೆಯನ್ನು ಮೆಲ್ಪಟ್ಟಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಕೆ.ನಿತೀಶ್ ಹೇಳಿದರು.
ಸರ್ಕಾರಿ ನೌಕರರ ಸಂಘ ಮತ್ತು ವಿವಿಧ ವೃಂದ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಭಿವೃದ್ದಿ ದೃಷ್ಟಿ ಕೋನದಲ್ಲಿ ನಾವೆಲ್ಲರೂ ಪ್ರಾಮಾಣಿಕತೆಯಿಂದ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು, ಅಲ್ಲದೆ ಮುಂದುವರೆದ ಜಿಲ್ಲೆಗಳಲ್ಲಿರುವ ಜನರಲ್ಲಿರುವ ಬುದ್ಧಿವಂತಿಕೆಯೂ ನಮ್ಮ ಜಿಲ್ಲೆಯಲ್ಲಿರುವವರಿಗೂ ಅದೇ ಇರುತ್ತದೆ ಹಾಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ಇಲ್ಲಿರುವ ನೌಕರರ ಸಂಘವು ಕ್ರಿಯಾಶೀಲವಾಗಿದ್ದು ನೌಕರರ ಪರವಾಗಿ ಯಾವತ್ತೂ ಇರುತ್ತದೆ ಎಂಬ ವಿಷಯ ನಮ್ಮ ಗಮನಕ್ಕೆ ಇದೆ ಮುಂದಿನ ದಿನಗಳಲ್ಲಿ ಕೂಡ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಘವು ಕಾರ್ಯನಿರ್ವಹಿಸಲಿ ಅವರಿಗೆ ಬೇಕಾಗಿರುವ ಸರ್ವ ರೀತಿಯ ಸಹಕಾರವನ್ನು ನೀಡುವುದು ಜಿಲ್ಲಾಡಳಿತದ ಕರ್ತವ್ಯವಾಗಿದ್ದು ನಾವು ತಮ್ಮೊಂದಿಗೆ ಇರುತ್ತೇವೆ ಎಂಬ ಭರವಸೆಯ ಮಾತುಗಳನ್ನಾಡಿದರು.
ಮುಂದಿನ ದಿನಗಳಲ್ಲಿ ವಿಶೇಷ ಅಧ್ಯಯನಕ್ಕಾಗಿ ತಂಡಗಳನ್ನು ರಚಿಸುವುದು ನೌಕರರಿಗಾಗಿ ಕ್ರೀಡಾಕೂಟ ಸಾಂಸ್ಕೃತಿಕ ಚಟುವಟಿಕೆಗಳನ್ನ ಹಮ್ಮಿಕೊಳ್ಳುವುದು ಸಮಸ್ಯೆಗಳನ್ನು ಪರಿಹರಿಸಲು ಸಭೆಗಳನ್ನು ನಡೆಸುವುದು ಸೇರಿದಂತೆ ಎಲ್ಲವನ್ನು ಮುಂದಿನ ದಿನಗಳಲ್ಲಿ ಕೆಲಸ ಮಾಡೋಣವೆಂದರು.
ಸರ್ಕಾರಿ ನೌಕರರಾಗಬೇಕೆಂಬುದು ಎಲ್ಲರೂ ಕನಸಾಗಿರುತ್ತದೆ ಆದರೆ ತಂದೆ ತಾಯಿಗಳ ಆಶೀರ್ವಾದ ಭಗವಂತನ ಆಶೀರ್ವಾದದಿಂದ ನಮ್ಮ ನಿನಗ ಮೆಲ್ಲರಿಗೂ ಆ ಅವಕಾಶ ದೊರಕಿದೆ ಅದನ್ನ ಸಾರ್ವಜನಿಕರ ಸೇವೆಗಾಗಿ ಶ್ರದ್ಧೆಯಿಂದ ಬಳಸೋಣ ಎಂದರು.
ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳಾದ ನಿತಿಶ್ ಕೆ ಇವರನ್ನು ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ರಾಯಚೂರು ಮತ್ತು ವಿವಿಧ ವೃಂದ ಸಂಘಗಳ ಸಹಯೋಗದಲ್ಲಿ ಗೌರವ ಪೂರ್ವಕವಾಗಿ ಇಂದು ಸನ್ಮಾನಿಸಿ ಜಿಲ್ಲೆಗೆ ಸ್ವಾಗತಿಸಲಾಯಿತು.
ಜಿಲ್ಲಾ ಸಂಘದ ಕಾರ್ಯದರ್ಶಿ ಮಹಾಂತೇಶ್ ಬಿರಾದಾರ ಮಾತನಾಡಿ, ಜಿಲ್ಲೆಗೆ ಇತ್ತೀಚಿನ ವರ್ಷಗಳಲ್ಲಿ ನೌಕರರ ಪರ ಜನರ ಪರ ಆಲೋಚನೆಗಳನ್ನ ಮಾಡುವುದರ ಜೊತೆಗೆ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವ ಅನೇಕ ಅತ್ಯುತ್ತಮ ದಕ್ಷ ಪ್ರಾಮಾಣಿಕ ಅಧಿಕಾರಿಗಳನ್ನು ಪಡೆಯುತ್ತಿರುವುದು ನಮ್ಮೆಲ್ಲರ ಮತ್ತು ಜಿಲ್ಲೆಯ ಸೌಭಾಗ್ಯ ಇಂತಹ ಸಂದರ್ಭದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಪ್ರಸ್ತುತ ಆಗಮಿಸಿರುವ ಮಾನ್ಯ ಜಿಲ್ಲಾಧಿಕಾರಿಗಳು ಕೂಡ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಲು ಸರ್ಕಾರಿ ನೌಕರರು ಮತ್ತು ಸರ್ಕಾರಿ ನೌಕರರ ಸಂಘ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ್ ಬಿರಾದಾರ್ ಸಂಘದ ಪದಾಧಿಕಾರಿಗಳಾದ ಶಂಕರ್ ಗೌಡ ಪಾಟೀಲ್ ಈರೇಶ್ ಮಲ್ಲೇಶ್ ಭಂಡಾರಿ ಸುರೇಶ್ ಶೌಕತುಲ್ಲಾ ಖಾದ್ರಿ ನಝೀರ್ ಅಹ್ಮದ್ ಈರೇಶ್ ಸಂಗಮ್ಮ , ರಾಜಶೇಖರ್ ರವಿ ಲೇಪಾಕ್ಷಿ ಡಂಡಪ್ಪ ಬಿರಾದಾರ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳಾದ ನಂದೀಶ್ ಶಂಕರಗೌಡ ಮಹದೇವಪ್ಪ ಯಂಕಪ್ಪ ಪಿರಂಗಿ ಕೃಷ್ಣಾ , ಮಲ್ಲಯ್ಯ ತಾಯಪ್ಪ ಪರಶುರಾಮ್ ಆಂಜನೇಯ ಹನಮಂತಪ್ಪ ,ಕೃಷ್ಣಾಜೀ, ವೆಂಕಟೇಶ್ ಸಂತೋಷ್ ನರಸಪ್ಪ ಭಂಡಾರಿ ಮಂಜುನಾಥ್ ಸಂಗಮೇಶ್ ವೀರೇಂದ್ರ ಶಂಕ್ರಪ್ಪ ಮಲ್ಲಿಕಾರ್ಜುನ್ ಛಾಯಾದೇವಿ ಲಕ್ಷ್ಮಿ ಧನಲಕ್ಷ್ಮಿ ಯಶೋಧ ಸುರೇಶ್ ಹರೀಶ್ ಸೇರಿದಂತೆ ವಿವಿಧ ಇಲಾಖೆಯ ೪೦ಕ್ಕೂ ಹೆಚ್ಚಿನ ಇಲಾಖೆಯ 200 ನೌಕರರು ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";