ಬೀಜ,ರಸಗೊಬ್ಬರ,ಕೀಟನಾಶಕ ಮಾರಾಟಗಾರರು ನಿಗದಿತ ದರಕ್ಕೆ ಮಾರಾಟ ಮಾಡಿ ರೈತರಿಗೆ ಬಿಲ್ ನೀಡಬೇಕು

Eshanya Times

ರಾಯಚೂರು:ಮೇ-23:

ಜಿಲ್ಲೆಯ ಬೀಜ, ರಸಗೊಬ್ಬರ, ಕೀಟನಾಶ ಮಾರಾಟಗಾರರು ನಿಗದಿತ ದರಕ್ಕೆ ರೈತರಿಗೆ ಮಾರಾಟ ಮಾಡಿ ಬಿಲ್ ನೀಡಬೇಕು ಒಂದು ವೇಳೆ ಕಾನೂನು ಬಾಹಿರವಾಗಿ ನಡೆದುಕೊಂಡರೆ ನಿಯಮನುಸಾರ ಪರವಾನಿಗೆಯನ್ನು ಅಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ಧೇಶಕರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು ಪ್ರಸ್ತುತ ಸಾಲಿನ ಮುಂಗಾರು ಹಂಗಾಮು ಮಳೆ ಪ್ರಾರಂಭಗೊAಡಿದ್ದು, ಜಿಲ್ಲೆಯಲ್ಲಿ ಹತ್ತಿ ಬಿತ್ತನೆ ಕ್ಷೇತ್ರ ಹೆಚ್ಚಾಗುವ ಸಾಧ್ಯತೆಯಿದ್ದು, ರೈತರಿಂದ ಹತ್ತಿ ಬೀಜಗಳಿಗೆ ಅಪಾರವಾದ ಬೇಡಿಕೆ ಇರುವ ಕಾರಣ ಅಧಿಕೃತ ಬೀಜ ಮಾರಾಟಗಾರರು ಬೀಜಗಳ ದಾಸ್ತನು ಮಾಡುವ ಪೂರ್ವದಲ್ಲಿ ಬೀಜ ನಿಯಂತ್ರಣ ಆದೇಶದ ನಿಯಮನುಸಾರ ಬೀಜಗಳನ್ನು ದಾಸ್ತಾನಕರಿಸಿ ರೈತರಿಗೆ ನಿಗಧಿತ ಧರಕ್ಕೆ ಕಡ್ಡಾಯವಾಗಿ ಮಾರಾಟ ಮಾಡಿ ಬಿಲ್ಲನ್ನು ನೀಡಬೇಕೆಂದು ಅವರು ಸೂಚನೆ ನೀಡಿದ್ದಾರೆ.
ಬೀಜ ಮಾರಾಟದ ಪರವಾನಿಯನ್ನು ಹೊಂದಿರತಕ್ಕದ್ದು, ಮತ್ತು ಕಂಪನಿವಾರು,ತಳಿವಾರು ಸೋರ್ಸ್ ಸರ್ಟಿಫಿಕೇಟ್ ಕಡ್ಡಾಯವಾಗಿ ನಿರ್ವಹಿಸತಕ್ಕದ್ದು, ಗರಿಷ್ಠ ಮಾರಾಟ ಧರಕ್ಕೆ ಮಾರಾಟ ಮಾಡುವುದು, ಬಿಲ್ಲಿನಲ್ಲಿ ಲಾಟ್ ಸಂಖ್ಯೆ ನಮೂದಿಸಿ ಬಿಲ್ಲನ್ನು ರೈತರಿಗೆ ನೀಡಬೇಕು,ಯಾವುದೇ ರೀತಿಯ ಬಿಡಿ ಬೀಜಗಳನ್ನು ಮಾರಾಟ ಮಾಡಬಾರದು,ನಿಗಧಿತ ದರ ಪ್ರತಿ ಪ್ಯಾಕೆಟ್‌ಗೆ ರೂ. ೮೬೪ ಇದ್ದು, ಇದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ಮಾರಾಟ ಮಳಿಗೆಯ ಪರವಾನಿಗೆಯನ್ನು ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ರೈತರು ಕೂಡ ಕಡ್ಡಾಯವಾಗಿ ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜಗಳನ್ನು ಖರೀದಿಸಿ ಬಿಲ್ಲನ್ನು ಪಡೆಯುವಂತೆ ಸೂಚನೆ ನೀಡಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";