ಮುದಗಲ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯಲಿರುವ ಮತದಾನಕ್ಕಾಗಿ ಪಟ್ಟಣದ ಪುರಸಭೆಯ ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಮತಗಟ್ಟೆಗಳನ್ನು ಪರಿಶೀಲನೆ ನಡೆಸಿದರು.ಮತಗಟ್ಟೆ ಕೇಂದ್ರದಲ್ಲಿ ಸಖೀ ಮತಗಟ್ಟೆ ಮತ್ತು ಪಟ್ಟಣದ ಹೆಚ್ಚು ಮತದಾರರು ಇರುವ ಎಲ್ಲಾ ಮತಗಟ್ಟೆಗೆ,ಅಂಗವಿಕಲರಿಗೆ ವೃದ್ಧರಿಗೆ ಇನ್ನಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವ ಬಗ್ಗೆ ಮುಖ್ಯಾಧಿಕಾರಿ ನಬಿಸಾಬ ಕಂದಗಲ್ ಅವರಿಂದ ಮಾಹಿತಿ ಪಡೆದರು.ಕಿಲ್ಲಾದ ಒಳಭಾಗದಲ್ಲಿ ಹೆಚ್ಚು ಯುವ ಮತದಾರರು ಇರುವ ಕಾರಣಕ್ಕೆ ಯುವ ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು ಮುದಗಲ್ ಪಟ್ಟಣದ ಮತಗಟ್ಟೆಗಳ ಬಗ್ಗೆ ವಿವರಣೆ ಪಡೆದರು ಜಿಲ್ಲೆಯಾದ್ಯಂತ ಲೋಕಸಭಾ ಚುನಾವಣೆ ನಿಮಿತ್ಯ ಯಾವುದೇ ಅಹಿತ ಘಟನೆಗಳು ಜರುಗದಂತೆ ಇಲಾಖೆ ಸರ್ವ ಸಿದ್ಧತೆ ಕೈಗೊಂಡಿದೇ ಎಂದರು. ನಂತರ ಪತಿಯಿಂದ ಪತ್ನಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಹತ್ಯೆಗೈದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಮಾಹಿತಿಯನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಮುದಗಲ್ ಪೊಲೀಸ್ ಠಾಣೆ ಪಿಎಸೈ ಸದ್ದಾಂ,ಪುರಸಭೆ ಮುಖ್ಯ ಅಧಿಕಾರಿ ನಬಿಸಾಬ ಕಂದಗಲ್, ಪುರಸಭೆ ಸಿಬ್ಬಂದಿಗಳು ಹಾಗೂ ಇನ್ನಿತರರು ಇದ್ದರು.