ರಾಯಚೂರು,ಮೇ.17: ತಾಲೂಕಿನಾದ್ಯಂತ ಗುರುವಾರ ರಾತ್ರಿ ಭಾರೀ ಮಳೆಯಾಗಿದ್ದು, ಅನೇಕ ಹಳ್ಳ,ಚರಂಡಿ,ನಾಲೆಗಳು ನೀರು ತುಂಬಿ ಹರಿಯುತ್ತಿವೆ. ಭಾರೀ ಮಳೆ ಹೊಡೆತಕ್ಕೆ ಬಿ.ಯದ್ಲಪೂರ ರಸ್ತೆ ಕೊಚ್ಚಿಗೊಂಡು ಹೋಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜ0ಬಲದಿನ್ನಿಯಲ್ಲಿ 99.5 ಮಿ.ಮೀ ಮಳೆಯಾಗಿದೆ. ಯರಗೇರಾ ಹೋಬಳಿ ವ್ಯಾಪ್ತಿಯಲ್ಲಿ 87 ಮಿ.ಮೀ.ಸಿಂಗನೋಡಿ ವ್ಯಾಪ್ತಿಯಲ್ಲಿ 76 ಮಿ.ಮೀ.ಮಿಟ್ಟಿ ಮಲ್ಕಾಪೂರದಲ್ಲಿ 78.5 ಮಿ.ಮೀ.ಬಂದ್ರಬಂಡಾ ವ್ಯಾಪ್ತಿಯಲ್ಲಿ94.5 ಮಿ.ಮೀ.ಲಿಂಗನಖಾನ ದೊಡ್ಡಿಯಲ್ಲಿ 78.5 ಮಿ.ಮೀ. ಶಾಖಾವಾದಿಯಲ್ಲಿ 77 ಮಿ.ಮೀ., ಮಾನವಿ ತಾಲೂಕಿನ ಬಲ್ಲಟಗಿಯಲ್ಲಿ 68.5 ಮಿ.ಮೀ ಮಳೆಯಾಗಿದೆ.
ಹೈದ್ರಾಬಾದ್ ರಸ್ತೆಯ ರೈಲ್ವೆ ಸೇತುವೆ ಕೆಳಗೆ ನಿಂತ ನೀರು
ಗುರುವಾರ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತೆವಾಗಿದೆ. ಬಿ. ಯದ್ಲಾಪೂರ ಗ್ರಾಮದ ರಸ್ತೆ ಕೊಚ್ಚಿಕೊಂಡು ಹೋಗಿ ಸಂಪರ್ಕ ಸೇತುವೆ ಕಡಿದು ಹೋಗಿ ಸಂಪರ್ಕ ಕಡಿತಗೊಂಡಿದೆ. ಸುತ್ತಮುತ್ತಲಿನ ಗ್ರಾಮಗಳಿಗೆ ಜನರು ತೆರಳದಂತಾಗಿದೆ. ನಗರದ ಓಪಕ್ ಆಸ್ಪತ್ರೆ ಬಳಿಯ ರೈಲ್ವೆ ಸೇತುವೆ ಕೆಳಭಾಗದಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ಹೈದ್ರಾಬಾದ್ ತೆರಳುವ ಪ್ರಮುಖ ರಸ್ತೆಯಾಗಿದ್ದು, ವಾಹನ ಚಾಲಕರು ಮತ್ತು ಸವಾರರು ಪರದಾಡುವಂತಾಯಿತು.
ಮರ್ಚೆಡ ಗ್ರಾಮದ ಕೆರೆಯಲ್ಲಿ ಇತ್ತೀಚಿಗೆ ನೀರು ಖಾಲಿಯಾಗಿ ಮೀನುಗಳು ಸಾವನಪ್ಪಿದ್ದು, ಮಳೆಯಿಂದಾಗಿ ನೀರು ಕೆರೆಗೆ ಬಂದಿರುವುದರಿAದ ಉಳಿದ ಮೀನುಗಳು ಬದುಕುಳಿದಿವೆ.
ಹೊಸಪೇಟೆ ಗ್ರಾಮದಲ್ಲಿ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಹೊರವಲಯದಲ್ಲಿ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳ ತುಂಬಿ ನೀರು ರಸ್ತೆ ಹರಿಯುತ್ತಿರುವುದರಿಂದ ಹೊಸಪೇಟೆ ಜೇಗರಕಲ್ ಗ್ರಾಮದ ಮಧ್ಯ ಸಂಚಾರ ಸ್ಥಗಿತಗೊಂಡಿದೆ.