WhatsApp Group
Join Now
ಬೀದರ. ಮೇ.೦೩ : ಹುಲಸೂರ ತಾಲ್ಲೂಕಿನ ಸಾಯಗಾಂವ್ ಗ್ರಾಮದ ಹಿರಿಯ ವಕೀಲ ಕಿಶನರಾವ್ ಸಾಯಗಾಂವಕರ್ ಅವರ ಹೊಲದಲ್ಲಿನ ಕಣಿಕೆ ಬಣವೆಗೆ ಶುಕ್ರವಾರ ಬೆಂಕಿ ತಗುಲಿ ನಷ್ಟ ಉಂಟಾಗಿದೆ.
ಆಕಸ್ಮಿಕ ಬೆಂಕಿಯಿಂದಾಗಿ ಸಾವಿರ ಸೂಡುಗಳಿದ್ದ ಬಣವೆ ಸಂಪರ‍್ಣ ಸುಟ್ಟು ಕರಕಲಾಗಿದೆ. ಸಾವಯವ ಗೊಬ್ಬರ ಗುಂಡಿಗೂ ಹಾನಿಯಾಗಿದೆ.
ಜಿಲ್ಲೆಯಲ್ಲಿ ಬಿಸಿಲು ದಿನೇ ದಿನೇ ಹೆಚ್ಚುತ್ತಲೇ ಇದೆ. ಅಲ್ಲಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಿವೆ. ತಮ್ಮ ಹೊಲದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ರೂ. ೩೦ ಸಾವಿರದಿಂದ ರೂ. ೪೦ ಸಾವಿರ ನಷ್ಟವಾಗಿದೆ ಎಂದು ಕಿಶನರಾವ್ ಸಾಯಗಾಂವಕರ್ ತಿಳಿಸಿದ್ದಾರೆ.
ಘಟನೆ ಕುರಿತು ಈಗಾಗಲೇ ನಾಡ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟವರು ಕೂಡಲೇ ಪರಿಶೀಲನೆ ನಡೆಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.