ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

Eshanya Times

ಬೀದರ. ಮೇ.13 : ಇ- ಲಾಸ್ಟ್ ಮತ್ತು ಸಿಇಐಆರ್- ಫೋರ್ಟಲ್ ಮೂಲಕ ಕಳೆದು ಹೋಗಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ 52 ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿದ್ದಾರೆ.
ನೂತನ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಮೊಬೈಲ್‌ಗಳನ್ನು ಕಳೆದುಕೊಂಡಿದ್ದ ಸಾರ್ವಜನಿಕರು ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸಿದ್ದರು.
ಜಿಲ್ಲಾ ಪೊಲೀಸರು ಒಟ್ಟು 52 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು, ಎಸ್‌ಪಿ ಕಚೇರಿ ಆವರಣದಲ್ಲಿ ಸೋಮವಾರ ವಾರಸುದಾರರಿಗೆ ಮೊಬೈಲ್‌ಗಳನ್ನು ಹಿಂದಿರುಗಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜಿಲ್ಲೆಯ ಸಾರ್ವಜನಿಕರು ತಮ್ಮ ಮೊಬೈಲ್‌ಗಳನ್ನು ಕಳೆದುಕೊಂಡಲ್ಲಿ ತಕ್ಷಣ ಈ-ಲಾಸ್ಟ್ ಅಥವಾ ಸಿಇಐಆರ್ ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳ ಜತೆಗೆ ದೂರುಗಳನ್ನು ದಾಖಲಿಸಬೇಕು. ಇದರಿಂದ ಕಳುವು ಆದ ಮೊಬೈಲ್‌ಗಳು ಟ್ರೇಸ್ ಆಗುವ ಹಿನ್ನೆಲೆ ಬಳಕೆಗೆ ಯೋಗ್ಯ ಇರುವುದಿಲ್ಲ. ಹೀಗಾಗಿ ಅಂತಯ ಸೆಲ್‌ಗಳನ್ನು ಶೇ. 90ರಷ್ಟು ಪತ್ತೆ ಹಚ್ಚಬಹುದು. ಮೊಬೈಲ್ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಹೆಚ್ಚುವರಿ ಪೊಲಿಸ್ ಅಧೀಕ್ಷಕ ಚಂದ್ರಕಾ0ತ ಪೂಜಾರಿ, ಪೊಲೀಸ್ ಉಪಾಧೀಕ್ಷಕ ಶಿವನಗೌಡ ಪಾಟೀಲ, ನೂತನ ನಗರ ಠಾಣೆಯ ಸಿಪಿಐ ಸಂತೋಷ ಎಲ್.ಟಿ, ಸಿಬ್ಬಂದಿಗಳಾದ ರಾಹುಲ್, ಸಚಿನ್, ಸಂತೋಷ, ರಾಮಣ್ಣ, ಧನರಾಜ, ಮಲ್ಲಿಕಾರ್ಜುನ, ಭರತ ಮತ್ತು ನಿಂಗಪ್ಪ ಮತ್ತಿತರರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";