ರಾಯಚೂರು,ಜೂ.10: ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋ. ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕರ್ನಾಟಕ ಪ್ರದೇಸ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಗರಣದಲ್ಲಿ ಸರಕಾರ ನೇರವಾಗಿ ಭಾಗಿಯಾಗಿದೆ. ಎಸ್‌ಐಟಿ ತನಿಖೆಯಿಂದ ಸತ್ಯಾಸತ್ಯತೆ ಬಹಿರಂಗ ಅಸಾಧ್ಯವಾಗಿದ್ದು ಈ ಹಿನ್ನಲೆಯಲ್ಲಿ ಪ.ಪಂಗಡದ ಅಭಿವೃದ್ದಿಗಾಗಿ ಮೀಸಲಿಟ್ಟ ಹಣ ದುರ್ಬಳಿಕೆ ಪ್ರಕರಣ ಸಿಬಿಐ ಮೂಲಕ ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದರು.
ಪ್ರತಿ ವರ್ಷ ಆರ್ಥಿಕ ವರ್ಷಕ್ಕೆ ನಿಗಮಕ್ಕೆ 6 ರಿಂದ 7 ಕೋ. ಅನುದಾನ ಮೀಸಲಿಡಲಾಗುತ್ತದೆ. ಉದ್ದೇಶಿತ ಅನುದಾನ ಗಂಗಾ ಕಲ್ಯಾಣ ಕಿರು ಸಾಲ, ವೈಯಕ್ತಿಕ ಸಾಲ, ನೇರ ಸಾಲ, ಗುಂಪು ಸಾಲ ಹಾಗೂ ಇನ್ನಿತರ ಯೋಜನೆಗಳಿಗೆ ಬಳಕೆ ಮಾಡಲಾಗುತ್ತದೆ. ಕೋರೋನಾ ನಂತರ ಅನೇಕ ಯೋಜನೆ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಪಂಗಡ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿರುವ ಮಾಹಿತಿ ಲಭ್ಯವಿದೆ ಎಂದರು.
187 ಕೋ ಅವ್ಯವಹಾರ ಪ್ರಕರಣ ಅಧಿಕಾರಿಯ ಆತ್ಮಹತ್ಯೆ ನಂತರ ಬೆಳಕಿಗೆ ಬಂದಿದೆ. ಈ ಅವ್ಯವಹಾರ ಯಾವ ಅವಧಿಯಲ್ಲಿ ಆರಂಭಗೊAಡಿದೆ ಎನ್ನುವ ಮಾಹಿತಿ ಗೊಂದಲದಲ್ಲಿದೆ. ಈ ನೆಲೆಯಲ್ಲಿ ಸಿಬಿಐ ತನಿಖೆಯಿಂದ ಮಾತ್ರ ಈ ಪ್ರಕರಣದ ಎಲ್ಲಾ ಸತ್ಯ ಬಹಿರಂಗ ಸಾಧ್ಯವಾಗುತ್ತದೆ ಎಂದರು.
ಕೇಲವ ಸಚಿವ ನಾಗೇಂದ್ರ ಅವರ ರಾಜೀನಾಮೆಯಿಂದ ಈ ಸಮಸ್ಯೆ ಪರಿಹಾರ ಗೊಲ್ಳುವುದಿಲ್ಲ, ಇದರಲ್ಲಿ ಯಾರು ಭಾಗಿಯಾಗಿದ್ದಾರೆ. ಆರ್ಥಿಕ ಇಲಾಖೆಯ ಅಧಿಕಾರಿಗಳ ಪಾತ್ರವೇನು? ಸರಕಾರದ ಪಾತ್ರವೇನು? ಮುಖ್ಯ ಮಂತ್ರಿಗಳ ಗಮನಕ್ಕೆ ಇಲ್ಲದೇ ಈ ಹಣ ವರ್ಗಾವಣೆ ಆಯಿತೇ? ಎನ್ನುವ ಅನೇಕ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ. ಬ್ಯಾಂಕ್ ವ್ಯವಸ್ಥಾಪಕ ರಿಂದ ಸಿಬಿಐ ತನಿಖೆಗೆ ಪತ್ರ ಬರೆಯಲಾಗಿದೆ. ಆದರೆ ಸರಕಾರ ದಿಂದ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಮಾತ್ರ ಇನ್ನು ನಿಗೂಡವಾಗಿದೆ. ಸಮಗ್ರ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.