ಬೀದರ. ಮಾ. ೧೭ :- ಜಿಲ್ಲೆಯ ರೈತರು ಪ್ರತಿ ರ‍್ಷ ಹಲವಾರು ಸಮಸ್ಯೆಗಳಿಗೆ ಸಿಲುಕಿ ನರಳಾಡುತ್ತಿದ್ದು, ಆ ಸಮಸ್ಯೆಗಳಿಗೆ ರ‍್ಕಾರ ರೈತರ ಈ ಕೆಳಕಂಡ ಸಮಸ್ಯೆಗಳಿಗೆ ಸ್ಪಂದಿಸಿ, ಅತೀ ಶೀಘ್ರದಲ್ಲಿ ಬಗೆಹರಿಬೇಕು.ರಾಜ್ಯದಲ್ಲಿ ರೈತರು ಹೊಸದಾಗಿ ಕೃಷಿ ಪಂಪಸೆಟ್‌ಗಳು ಅಳವಡಿಕೆ ಮಾಡಲು ವಿದ್ಯುತ್ ನೊಂದಣಿ ಸಲುವಾಗಿ ಸುಮಾರು ೫೦-೬೦ ಸಾವಿರ ರ‍್ಚು ಬರುತ್ತಿದ್ದು, ಅದನ್ನು ಮೊದಲಿನಂತೆ ಜಾರಿ ಮಾಡಬೇಕು ಮತ್ತು ನೊಂದಣಿ ಪ್ರಕ್ರಿಯೆ ಶೀಘ್ರದಲ್ಲಿ ಜಾರಿ ಮಾಡಬೇಕು. ಬೀದರ ಸಹಕಾರ ಸಕ್ಕರೆ ಕರ‍್ಖಾನೆ ಈಗಾಗಲೇ ಡಿ.ಸಿ.ಸಿ. ಬ್ಯಾಂಕಿನವರು ತಮ್ಮ ವಶಕ್ಕೆ ಪಡೆದು ಮಾರಾಟ ಮಾಡಿರುತ್ತಾರೆ. ಆದರೆ ತಮ್ಮ ನೇತೃತ್ವದಲ್ಲಿ ಅದನ್ನು ವಾಪಸ್ ಪಡೆಯಲಾಯಿತು. ಆದರೆ ಜಿಲ್ಲಾಡಳಿತದಿಂದ ಇಲ್ಲಿಯವರೆಗೆ ಲೀಸ್ ಅಥವಾ ಇನ್ನೀತರ ಕರ‍್ಖಾನೆ ಪ್ರಾರಂಭ ಮಾಡುವ ಪ್ರಕ್ರಿಯೆ ನಡೆದಿಲ್ಲ. ಕೂಡಲೇ ಏನಾದರೂ ಮಾಡಿ, ಕರ‍್ಖಾನೆ ಪ್ರಾರಂಭ ಮಾಡಿಸಬೇಕು. ಜಿಲ್ಲಾ ಸಹಕಾರ ಬ್ಯಾಂಕಿನಿoದ (ಡಿ.ಸಿ.ಸಿ) ರೈತರಿಗೆ ಸಾಲ ಸಿಗುತ್ತಿಲ್ಲ.
ಅದನ್ನು ಕೂಡಲೇ ರೈತರಿಗೆ ಸಾಲ ಕೊಡಿಸುವ ವ್ಯವಸ್ಥೆ ಮಾಡಿಸಬೇಕು.ಬೆಳೆ ವಿಮೆ ಮಾಡಿಸಿದ ರೈತರಿಗೆ ಇಲ್ಲಿಯವರೆಗೆ ಬೆಳೆ ಹಾಳಾದರೂ ಕೂಡ ಬೆಳೆ ವಿಮೆ ಪರಿಹಾರ ಖಾತೆಗೆ ಜಮೆ ಆಗಿರುವುದಿಲ್ಲ. ಅದನ್ನು ಶೀಘ್ರದಲ್ಲಿ ಜಮೆ ಮಾಡಿಸಬೇಕು.ಪ್ರಸಕ್ತ ಸಾಲಿನಲ್ಲಿ ಮಂಜಿನಿಂದ ತೊಗರಿ ಬೆಳೆ ಸಂಪರ‍್ಣ ಹಾಳಾಗಿದ್ದು, ಅದಕ್ಕೆ ಅತೀ ಶೀಘ್ರದಲ್ಲಿ ಎಕರೆಗೆ ರೂ. ೨೫೦೦೦/- ರಂತೆ ಬೆಳೆ ಹಾನಿ ಪರಿಹಾರ ಕೊಡಿಸಬೇಕು. ಸಕ್ಕರೆ ಕರ‍್ಖಾನೆಗಳಿಗೆ ರೈತರು ಕಬ್ಬು ಸರಬರಾಜು ಮಾಡಿ, ೩ ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ಯಾವ ರೈತರ ಖಾತೆಗೆ ಕೂಡ ಬಿಲ್ಲು ಜಮೆ ಆಗಿರುವುದಿಲ್ಲ. ಅದನ್ನು ಶೀಘ್ರದಲ್ಲಿ ಎಲ್ಲಾ ರೈತರ ಖಾತೆಗೆ ಜಮೆ ಮಾಡಿಸಬೇಕು. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಸಕ್ಕರೆ ಕರ‍್ಖಾನೆಯ ಅಧ್ಯಕ್ಷರು ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿ, ಪ್ರತಿ ಟನ್ ಕಬ್ಬಿಗೆ ರೂ. ೨೭೦೦/- ನಿಗದಿಪಡಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಕರ‍್ಖಾನೆಯವರು ರೂ. ೨೭೦೦/- ಕೊಟ್ಟಿರುವುದಿಲ್ಲ. ಆದಕಾರಣ ಅತೀ ಶೀಘ್ರದಲ್ಲಿ ಸಚಿವರು ಬೆಲೆ ನಿಗದಿ ಮಾಡಿದಂತೆ ರೂ. ೨೭೦೦/- ರೈತರ ಖಾತೆಗೆ ಜಮೆ ಮಾಡಿಸಬೇಕು. ರೈತರು ಬೆಳೆದ ಬೆಳೆ ಕಾಡು ಪ್ರಾಣಿಗಳು, ದೊಡ್ಡ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಾರಣ ಶೀಘ್ರದಲ್ಲಿ ರ‍್ಯಾಯ ವ್ಯವಸ್ಥೆ ಹುಡುಕಿ, ಅದಕ್ಕೆ ಕಡಿವಾಣ ಹಾಕಬೇಕು. ೨೦೨೦ ರಲ್ಲಿ ಕೊರೊನಾ ಸಮಯದಲ್ಲಿ ಕೇಂದ್ರ ರ‍್ಕಾರ ೩ ಕೃಷಿ ವಿರೋಧಿ ಕಾಯ್ದೆ ತಂದಿತ್ತು. ಅದೇ ಪ್ರಕಾರ ರಾಜ್ಯದಲ್ಲಿ ಕೂಡ ಅಂದಿನ ರ‍್ಕಾರ ಜಾರಿ ಮಾಡಿದೆ. ಈವಾಗ ಕೇಂದ್ರ ರ‍್ಕಾರ ವಾಪಸ್ಸು ತೆಗೆದುಕೊಂಡಿದೆ. ಆದರೂ ನಮ್ಮ ರಾಜ್ಯ ರ‍್ಕಾರ ವಾಪಸ್ಸು ಪಡೆದಿಲ್ಲ. ಶೀಘ್ರದಲ್ಲಿ ವಾಪಸ್ಸು ಪಡೆಯಬೇಕು.
ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರ‍್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯ ವತಿತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂರ‍್ಭದಲ್ಲಿ ರ‍್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ, ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕರ‍್ಯಾಧ್ಯಕ್ಷರಾದ ಶ್ರೀಮಂತ ಬಿರಾದಾರ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ದಯಾನಂದ ಸ್ವಾಮಿ ಸರ‍್ಸಿ, ಶಂಕ್ರೆಪ್ಪಾ ಪಾರಾ, ಗೂಡಿಹಾಳ ಬಸವರಾಜ, ಮಲ್ಲನಗೌಡ ಪಾಟೀಲ,ಪ್ರವೀಣ ಕುಲರ‍್ಣಿ, ಬಾಬುರಾವ ಜೋಳದಾಬಕಾ, ಶೋಭಾವತಿ ಕಾರಭಾರಿ, ಮಹಾನಂದಾ ದೇಶಮುಖ, ಸುರ‍್ಣ ಬಳತೆ, ಸುಭಾಷ ರಗಟೆ, . ಭಾಗ್ಯಶ್ರೀ ದೇಶಮುಖ, ನಾಗಯ್ಯಾ ಸ್ವಾಮಿ, ಪ್ರಕಾಶ ಬಾವಗೆ, ಮಲ್ಲಿಕರ‍್ಜುನ ಬಿರಾದಾಗ ವಿಠಲರಾವ ಪಾಟೀಲ, ರೇವಣಸಿದ್ದಪ್ಪ ಯರಬಾಗ, ಸುಮಂತ ಗ್ರಾಮಲೆ, ವಿಶ್ವನಾಥ ಧರಣೆ, ಮಲ್ಲಿಕರ‍್ಜುನ ಚಕ್ಕಿ, ರಾಜಕುಮಾರ ಪಾಟೀಲ, ಧೂಳಪ್ಪಾ ಆಣದೂರ, ಬಸಪ್ಪಾ ಆಲೂರೆ, ಮೋಹನರಾವ ಮರಖಲ್ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳು ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮನವಿ
