ಸಿರವಾರ,ಮಾ.೨೧: ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಕ್ರಾಣಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ಜಿಲ್ಲಾ ಪಂಚಾಯತ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಕ್ರಾಣಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ನಂತರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಘಟಕದ ಕರ‍್ಯನರ‍್ವಹಣೆಯ ಕುರಿತು ಮಾಹಿತಿಯನ್ನು ಪಡೆದುಕೊಂಡು.ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳನ್ನು ಶೀಘ್ರದಲ್ಲಿ ಪರ‍್ಣ ಗೊಳಿಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕೆಂದು ಗುತ್ತಿಗೆದಾರರಿಗೆ ಹೇಳಿದರು.
ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಕ್ರಾಣಿ ಕ್ರಾಸ್ ಹತ್ತಿರ ಒಣಮೆಣಸಿನಕಾಯಿ ಬೆಳೆದ ರೈತರ ಹೊಲದಲ್ಲಿ ಮೆಣಸಿನಕಾಯಿ ಬಿಡುಸುವುದನ್ನು ಗಮನಿಸಿ ಗಣದಿನ್ನಿ, ಪಂಚಾಯತಿ ಅಭಿವೃದ್ದಿ ಅಧಿಕಾರಿಗೆ ಜನರಿಂದ ಕೆಲಸಕ್ಕಾಗಿ ಭೇಡಿಕೆ ಸಂಗ್ರಹಿಸಿ ಫಾರಂ ೬ ರ‍್ತಿ ಮಾಡಲು ಕ್ರಮವಹಿಸಬೇಕು.ನಂತರ ಪಂಚಾಯತಿ ಕಡೆಯಿಂದ ನರೇಗಾ ಯೋಜನೆಯಡಿ ಸಿಗುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳು ಸೇರಿದಂತೆ ಇನ್ನಿತರ ಎಲ್ಲಾ ಸೌಲಭ್ಯಗಳ ಮಾಹಿತಿ ಜನರಿಗೆ ನೀಡಿ ಇದರ ಸದುಪಯೋಗ ಪಡೆದುಕೊಳ್ಳಲು ಮುಂದೆ ಬರಲು ಪ್ರೇರಣೆ ನೀಡಬೇಕೆಂದರು.
ಈ ಸಂರ‍್ಭದಲ್ಲಿ ಗಣದಿನ್ನಿ ಗ್ರಾಪಂ ಅದ್ಯಕ್ಷ ಜಿ ಸೂಗೂರಯ್ಯ ಸ್ವಾಮಿ,ತಾಪಂ ಕರ‍್ಯನರ‍್ವಾಹಕ ಅಧಿಕಾರಿ ಶಶೀಧರ ಸ್ವಾಮಿ ಮಠದ, ಗಣದಿನ್ನಿ ಗ್ರಾಪಂ. ಸದಸ್ಯರಾದ ನಲ್ಲಾರೆಡ್ಡಿ, ಅಯ್ಯಳಪ್ಪ ಸೇರಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ದೇವಪ್ಪ, ವಿಜಯಕುಮಾರ,ಇನ್ನು ಅನೇಕರು ಇದ್ದರು.
ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಪರಿಶೀಲಿಸಿದ,ಜಿಪಂ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ.
