ಕೊಪ್ಪಳ,ಜ.೨೦ : ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ಸರಕಾರಿ ನೌಕರರು ಕಡ್ಡಾಯವಾಗಿ ಎಲ್ಲರೂ ಮಾಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಲು ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಯೋಜನೆಗಳನ್ನು ನಾನು ಮಾಡಿಕೊಂಡಿದ್ದು ನನ್ನ ಕುಟುಂಬದವರ ಹೆಸರಿನಲ್ಲಿ ಮಾಡಿಸಿದ್ದೇನೆ. ತಾವುಗಳು ಇವುಗಳನ್ನು ಮಾಡಿಕೊಳ್ಳಬೇಕು ಮತ್ತು ತಮ್ಮ ಕಛೇರಿಯಲ್ಲಿರುವ ಸಿಬ್ಬಂದಿಗಳಿಗೂ ಈ ಮಾಹಿತಿ ನೀಡಿ. ಇದು ಸರಕಾರಿ ನೌಕರರು ಮಾತ್ರವಲ್ಲದೆ ಸಾರ್ವಜನಿಕರು ಈ ಪಾಲಿಸಿ ಮಾಡಿಕೊಂಡರೆ ಅವರಿಗೂ ತುಂಬಾ ಅನುಕೂಲವಾಗಲಿದ್ದು. ಸಾಮಾನ್ಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ವಾರ್ಷಿಕ ಕೇವಲ ೨೦ ರೂ ಕಟ್ಟಿದರೆ ೨ ಲಕ್ಷ ರೂಗಳ ದುರ್ಘಟನಾ ವಿಮೆ ಸಿಗಲಿದ್ದು ೧೮ ರಿಂದ ೭೦ ವರ್ಷದ ವರೆಗಿನ ಪ್ರಾಯದ ಎಲ್ಲಾ ಸೇವಿಂಗ್ಸ್ ಬ್ಯಾಂಕ್ ಖಾತೆದಾರರು ಈ ಪಾಲಿಸಿ ಮಾಡಬಹುದಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವಾರ್ಷಿಕ ಪ್ರಿಮಿಯಮ್ ೪೩೬ ಕಟ್ಟಿದರೆ ೨ ಲಕ್ಷ ರೂ ಜೀವ ವಿಮೆ ೧೮ ರಿಂದ ೫೦ ವರ್ಷದ ಪ್ರಾಯದ ಎಲ್ಲಾ ಸೇವಿಂಗ್ ಬ್ಯಾಂಕ್ ಖಾತೆದಾರರು ಈ ಪಾಲಿಸಿಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಎಸ್.ಬಿ. ಐ ಬ್ಯಾಂಕಿನ ಎಲ್.ಡಿ.ಎಮ್ ವಿರೇಂದ್ರ ಕುಮಾರ್ ಮಾತನಾಡಿ ನಮ್ಮನ್ನು ನಂಬಿದವರಿಗೆ ಸೆಕ್ಯುರಿಟಿ ಇಟ್ಟು
ಸಾಯಬೇಕು ವಿಶೇಷವಾಗಿ ಹಳ್ಳಿಗಾಡಿನ ಜನರಿಗೆ ಈ ಯೋಜನೆಗಳಿಂದ ತುಂಬಾ ಉಪಯೋಗವಾಗಲಿದೆ. ಕಡಿಮೆ ಪ್ರಿಮಿಯಂ ಕಟ್ಟಿದರೆ ಸಾಕು ಇದರ ಲಾಭ ಸಿಗಲಿದೆ. ಇದಕ್ಕೆ ಭಾರತ ದೇಶದ ಎಲ್ಲಾ ನಾಗರಿಕರು ಅರ್ಹರು. ಯಾವುದೇ ಬ್ಯಾಂಕಿನಲ್ಲಿ ತಮ್ಮ ಅಕೌಂಟ್ ಇದ್ದರೆ ಅಟೊ ಡೆಬಿಟ್ ಆಗುತ್ತದೆ. ೧೮ ವರ್ಷ ಮೇಲ್ಪಟ್ಟ ಎಲ್ಲರೂ ಈ ಪಾಲಿಸಿ ಮಾಡಿಕೊಳ್ಳಲು ಹೇಳಬೇಕು ಈ ಕುರಿತು ತಮ್ಮ ಅಕ್ಕಪಕ್ಕದವರಿಗೂ ಮಾಹಿತಿ ನೀಡಿ. ಇದರ ರಾಜ್ಯದ ಗುರಿ ೨೨ ಪ್ರತಿಶತ ಆಗಿದ್ದು ನಮ್ಮ ಜಿಲ್ಲೆಯಲ್ಲಿ ೨೩ ಪ್ರತಿಶತ ಆಗಿದೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಆಗಬೇಕಿದೆ ಎಂದು ಹೇಳಿದರು.
ಈ ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ರೇಷ್ಮಾ ಹಾನಗಲ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕೊಟ್ರೇಶ ಮರಬನಳ್ಳಿ, ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಉಪನಿರ್ದೆಶಕರಾದ ಜಗದೀಶ,
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕರಾದ ನಾಗರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.