ಮಾನ್ವಿ,: ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿ ಮಾನ್ವಿ, ಸಿರವಾರ ವತಿಯಿಂದ ಮಾನ್ವಿ ಪಟ್ಟಣದ ಹೊರವಲಯ ಲೋಯೋಲಾ ಶಾಲೆಯ ಹತ್ತಿರ ಉಚಿತ ರ‍್ವರ‍್ಮ ಸಾಮೂಹಿಕ ವಿವಾಹ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿ ೩೮ ಎಕರೆಯಲ್ಲಿ ಬೃಹತ್ ವೇದಿಕೆ, ಊಟದ ವ್ಯವಸ್ಥೆಗೆ ಪೆಂಡಾಲ್ ನರ‍್ಮಾಣ, ವಾಹನಗಳು ನಿಲುಗಡೆಗೆ ಮತ್ತು ಹೆಲಿಕಾಪ್ಟರ್ ಇಳಿಯಲು ಎಲ್ಲ ಸಿದ್ಧತೆಯನ್ನು ಸಮಾಜಿಕ ಸೇವಾ ಸಮಿತಿ ಮಾಡಿಕೊಳ್ಳಲಾಗಿದೆ.
ಸಾಮೂಹಿಕ ವಿವಾಹ ಕರ‍್ಯಕ್ರಮಕ್ಕೆ ಬೃಹತ್ ವೇದಿಕೆ ಹಾಗೂ ಜನರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ.
ಮಾನ್ವಿ ಸಿರವಾರ ತಾಲ್ಲೂಕಿನ ಪ್ರತಿಯೊಂದು ಮನೆ ಮನೆಗೂ ಹೋಗಿ ಮದುವೆಗೆ ಆಹ್ವಾನ ನೀಡಲಾಗಿದೆ. ಮಾನ್ವಿ ಪಟ್ಟಣದಲ್ಲಿ ಬ್ಯಾನರ್ ಕಟೌಟ್ ಗಳ ರಾರಾಜಿಸುತ್ತಿವೆ. ಎಲ್ಲಾ ತಯಾರಿಯನ್ನೂ ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿಯ ಮುಖಂಡರಾದ ವಿಶ್ವನಾಥ್ ಪಾಟೀಲ್, ಎಸ್.ತಿಮ್ಮಾರೆಡ್ಡಿಗೌಡ ಭೋಗಾವತಿ, ಮಲ್ಲಿಕರ‍್ಜುನ ಜಕ್ಕಲದಿನ್ನಿ, ಕೆ.ನಾಗಲಿಂಗಸ್ವಾಮಿ, ಉಮಾಕಾಂತ ಸಾಹುಕಾರ್ ಸೀಕಲ್, ವೀರೇಶನಾಯಕ ಬೆಟ್ಟದೂರು, ರಾಹುಲ್ ಕಲಗೇರಾ, ಸದ್ದಾಂ ಹುಸೇನ್ ಸೇರಿದಂತೆ ನೂರಾರು ಕರ‍್ಯರ‍್ತರು ಹಗಲಿರುಳು ಶ್ರಮಿಸುತ್ತಿದ್ದಾರೆ.
:- ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿ ನಡೆದು ಬಂದ ದಾರಿ.
ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಕಳೆದ ಹತ್ತು ರ‍್ಷಗಳಿಂದ ಮಾಡುತ್ತಿರುವ ಸಾಮಾಜಿಕ ಸೇವಾ ಕರ‍್ಯಗಳು ಜನಮನ್ನಣೆಗೆ ಸಾಕ್ಷಿಯಾಗಿವೆ.
ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್ ಮಹಾಮಾರಿ ಸಂರ‍್ಭದಲ್ಲಿ ಜಿಲ್ಲೆಯಲ್ಲಿ ೧೦ ಲಕ್ಷ ಮಾಸ್ಕ್ ಗಳನ್ನು ಹಂಚಿಕೆ ಮಾಡಲಾಯಿತು.
ಕೋವಿಡ್ ಲಾಕ್ ಡೌನ್ ಸಂರ‍್ಭದಲ್ಲಿ ೪೮೦೦ ಕ್ವಿಂಟಾಲ್ ಅಕ್ಕಿಯನ್ನು ಬಳಸಿ ಅನ್ನದೊಂದಿಗೆ ನೀರಿನ ಬಾಟಲ್ ಹಾಗೂ ಮೊಟ್ಟೆಯನ್ನು ಮಾನ್ವಿ, ಸಿರವಾರ, ಅರಕೆರಾ, ದೇವದರ‍್ಗ, ಮಸ್ಕಿ, ಸಿಂಧನೂರು, ಲಿಂಗಸ್ಗೂರು ಕುಷ್ಟಗಿ ತಾಲೂಕಿನಲ್ಲಿ ರೋಗಿಗಳಿಗೆ, ಸಂತ್ರಸ್ತರಿಗೆ, ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ಹಂಚುವ ಕೆಲಸ ಮಾಡಲಾಯಿತು.
ಕೋವಿಡ್ ಸಂರ‍್ಭದಲ್ಲಿ ಶಾಲಾ ಕಾಲೇಜು ಬಂದ್ ಆಗಿದ್ದರಿಂದ ಖಾಸಗಿ ಶಾಲೆಗಳ ಶಿಕ್ಷಕರಿಗೆ ಉಪನ್ಯಾಸಕರಿಗೆ ಆಹಾರದ ಕಿಟ್ ಗಳನ್ನೂ ಹಂಚಿಕೆ ಮಾಡಲಾಯಿತು.
ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಸುಮಾರು ೪೫೦೦ ಜನರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲಾಗಿದೆ.
ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಬ್ಬಡ್ಡಿ ಪಂದ್ಯಾವಳಿ, ವಾಲಿಬಾಲ್ ಪಂದ್ಯಾವಳಿಯ ಜೊತೆಗೆ ಕ್ರಿಕೆಟ್ ಪ್ರಿಯರಿಗೆ ನೂರಾರು ಟರ‍್ನಮೆಂಟ್ ನಡೆಸಿದ ಕರ‍್ತಿ ಸೇವಾ ಸಮಿತಿಯದ್ದಾಗಿದೆ. ಮಹಿಳೆಯರಿಗಾಗಿ ರಂಗೋಲಿ ಸ್ರ‍್ಧೆ ರ‍್ಪಡಿಸಲಾಗಿದೆ. ಹಾಗೆಯೇ, ಮಾನ್ವಿ ಸಿರವಾರ ತಾಲ್ಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ದೇವಸ್ಥಾನಗಳ ಜರ‍್ಣೋದ್ಧಾರಕ್ಕೆ ದೇಣಿಗೆ ನೀಡಲಾಗಿದೆ.
ಅಲ್ಲದೇ ನಮ್ಮ ಮಾನ್ವಿ ಸಿರವಾರ ತಾಲ್ಲೂಕಿನ ಜನತೆಗೆ ಸಾಕಷ್ಟು ವೈಯಕ್ತಿಕ ಕೆಲಸಗಳನ್ನು ಮಾಡಿಸಿದ್ದು ನಮಗೆ ಖುಷಿ ತಂದಿದೆ. ಅಧಿಕಾರ ಮುಖ್ಯ ಅಲ್ಲ ಸಾಮಾಜಿಕ ಸೇವೆ ಮಾಡುವುದು ಮುಖ್ಯ ಎನ್ನುವುದನ್ನು ಮುಂದುವರೆಸಿಕೊಂಡು ಬಂದಿದ್ದೇವೆ.
ಇದರ ಮುಂದುವರೆದ ಭಾಗವಾಗಿ ಜನವರಿ ೧೯ ರಂದು ಮಾನ್ವಿ ಪಟ್ಟಣದಲ್ಲಿ ಉಚಿತ ರ‍್ವರ‍್ಮ ಸಾಮೂಹಿಕ ವಿವಾಹ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿಯಿಂದ ೫೦೦೧ ರ‍್ವರ‍್ಮ ಸಾಮೂಹಿಕ ವಿವಾಹಗಳನ್ನು ಮಾಡುವ ಉದ್ದೇಶವಿಟ್ಟುಕೊಂಡು ಮಾನ್ವಿ ಸಿರವಾರ ತಾಲ್ಲೂಕಿನ ಪ್ರತಿಯೊಂದು ಭೂತ್ ನಲ್ಲಿ ಕೆ ಎಸ್ ಎನ್ ಸಾಮೂಹಿಕ ವಿವಾಹ ಸಮಿತಿಗಳನ್ನು ರಚಿಸಿ ಅದೇ ಸಮಿತಿಯಲ್ಲಿ ಮದುವೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಯಿತು. ಪ್ರತಿಯೊಂದು ಮನೆ ಮನೆಗೂ ಹೋಗಿ ಜನವರಿ ೧೯ ರಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿರುವ ಕುರಿತು ತಿಳಿಸುವುದು ಮತ್ತು ಪ್ರಚಾರ ಮಾಡಲಾಗಿದೆ. ಒಂದು ಲಕ್ಷ ಜನರಿಗೆ ಮೊಬೈಲ್ ಕರೆ ಮಾಡಿ ಸಾಮೂಹಿಕ ವಿವಾಹ ಕುರಿತು ತಿಳಿಸಲಾಗಿದೆ ಹಾಗೂ ಇನ್ನು ಅನೇಕ ಬಗೆಯ ಪ್ರಚಾರಗಳನ್ನು ಮಾಡಿದ್ದು ನಮಗೆ ಖುಷಿ ತಂದಿದೆ.
ಒಟ್ಟಿನಲ್ಲಿ ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಸುಮಾರು ಹತ್ತು ರ‍್ಷಗಳಿಂದ ಮಾಡುತ್ತಿರುವ ಸಾಮಾಜಿಕ ಸೇವಾ ಕರ‍್ಯಗಳನ್ನು ಮುಂದುವರೆಸಿಕೊಂಡು ಹೋಗುವ ಉದ್ದೇಶವಿಟ್ಟುಕೊಳ್ಳಲಾಗಿದೆ.
ಜನವರಿ ೧೯ ರಂದು ನಡೆಯುವ ರ‍್ವರ‍್ಮ ಸಾಮೂಹಿಕ ವಿವಾಹ ಕರ‍್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವರಾದ ಭೈರತಿ ಬಸವರಾಜ, ಶ್ರೀರಾಮುಲು, ಶಾಸಕರಾದ ಜನರ‍್ದನ ರೆಡ್ಡಿ, ದೊಡ್ಡನಗೌಡ ಪಾಟೀಲ್ ಸೇರಿದಂತೆ ಜಿಲ್ಲೆಯ ಸಚಿವರು ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ.
ರ‍್ವರ‍್ಮ ರ‍್ಮಗುರುಗಳು ಸಾನಿಧ್ಯ ವಹಿಸಲಿದ್ದಾರೆ.
ಸಾಮೂಹಿಕ ವಿವಾಹ ಕರ‍್ಯಕ್ರಮವನ್ನು ಯಶಸ್ವಿಗೊಳಿಸಲು ೨೧ ಸಮಿತಿಗಳು ಕರ‍್ಯಪ್ರವೃತ್ತರಾಗಿದ್ದು ಒಟ್ಟಾರೆ ಕೆಎಸ್ ಎನ್ ಬಳಗದ ಸಾಮಾಜಿಕ ಸೇವಾ ಕರ‍್ಯಗಳು ಜನ ಮೆಚ್ಚುಗೆಗೆ ಪಾತ್ರವಾಗಿವೆ ಎಂದರೆ ತಪ್ಪಾಗಲಾರದು.