ಯಾದಗಿರಿ: ದೇಶದ ಉಪ ಪ್ರಧಾನಿಯಾಗಿ ರೈತರ,ಬಡವರ ಪರ ಉತ್ತಮ ಕೆಲಸ ಮಾಡುವ ವಿಶ್ವರದಲ್ಲಿಯೇ ಹೆಸರು ಮಾಡಿದ ಹಸಿರು ಕ್ರಾಂತಿ ಹರಿಕಾರ ದಿವಂಗತ ಡಾ.ಬಾಬು ಜಗಜೀವನ ರಾಮ ಅವರ. ೧೧೮ ನೇ ಜಯಂತೋತ್ಸವ ಕರ‍್ಯಕ್ರಮ ಎಲ್ಲರೂ ಸೇರಿ ಅತಿ ವಿಜ್ರಂಬಣೆಯಿಂದ ಆಚರಿಸೊಣ ಎಂದು ಜಯಂತೋತ್ಸವ ಸಮಿತಿ ನೂತನ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಹೇಳಿದರು.
ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಗುರುವಾರ ನಡೆದ ಪರ‍್ವಭಾವಿ ಸಭೆಯಲ್ಲಿ ರ‍್ವಾನುಮತದಿಂದ ಅಧ್ಯಕ್ಷರ ಹಾಗೂ ಇತರೇ ಪದಾಧಿಕಾರಿಗಳ ಆಯ್ಕೆ ನಂತರ ಸೇರಿದ ಎಲ್ಲರನ್ನು ಉದ್ದೇಶಿಸಿ ಹತ್ತಿಮನಿ ಮಾತನಾಡಿದರು.
ಅವರ ರ‍್ದಶಗಳು, ಬದುಕಿನ ಶೈಲಿ ಜನರಕ್ಕೆ ತಿಳಿಸುವಂತಹ ಮಹತ್ವದ ಜಯಂತಿ ಈ ಸಲ ಮಾಡೋಣ, ಇದಕ್ಕೆ ನಮ್ಮ ಸಮಾಜ ಸೇರಿದಂತೆಯೆ ರ‍್ವ ಜನಾಂಗದ ಸಹಕಾರ ಪಡೆಯೋಣ ಎಂದರು.
ಗೌರವಾಧ್ಯಕ್ಷರಾಗಿ ಮರಪರೆಡ್ಡಿ ಕಂದಕೂರ್, ಉಪಾಧ್ಯಕ್ಷರಾಗಿ ಬಸವರಾಜ ನಾಯ್ಕಲ್, ಜಿಲ್ಲಾ ಪ್ರಧಾನ ಕರ‍್ಯರ‍್ಶಿಯಾಗಿ ಭೀಮಾಶಂಕರ ಆಲ್ದಾಳ, ಖಜಾಂಚಿ ಮೈಲಾರಪ್ಪ ಜರ‍್ಗಿದಾರ್ ಅವರನ್ನು ರ‍್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಖಂಡಪ್ಪ ದಾಸನ್, ಶಾಂತರಾಜ ಮೋಟ್ಟನಳ್ಳಿ, ಎಮ್. ಕೆ. ಬಿರನೂರ್, ದೇವಿಂದ್ರನಾಥ, ಗೋಪಾಲ ದಾಸನಕೇರಿ, ಯಲ್ಲಪ್ಪ ಮಾಳಿಕೇರಿ, ನಿಂಗಪ್ಪ ವಡ್ನಳ್ಳಿ, ಸದಾಶಿವಪ್ಪ, ಚನ್ನಯ್ಯ ಮಾಳಿಕೇರಿ, ಸ್ವಾಮಿದೇವ ದಾಸನಕೇರಿ, ಆಂಜನೇಯ ಬಬಲಾದಿ, ಶಾಂತಪ್ಪ ಖಾನಳ್ಳಿ, ಹಣಮಂತ ಲಿಂಗೇರಿ, ನಾಗರಾಜ ಬಿರನೂರ್, ಮಲ್ಲು ದೊಡ್ಮನಿ ಹಮಂತ ಕಾಳೆಬೆಳಗುಂದಿ ಸೇದಂತೆ ಮತ್ತಿತರರು ಇದ್ದರು.
ಜಗಜೀವನರಾಮ್ ಜಯಂತೋತ್ಸವ ಸಮಿತಿ ನೂತನ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ
