ರಾಯಚೂರು: ಬಿಟ್ಟಿ ಚಾಕರಿ ತೊಲಗಿಸಿ ಮಸಣ ಕರ‍್ಮಿಕರನ್ನು ಸ್ಥಳೀಯ ಸಂಸ್ಥೆಯ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆ ಸೇರಿದಂತೆ ಪ್ರಮುಖ ೮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಸಣ ಕರ‍್ಮಿಕರು ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ತಾಲೂಕಾ ಪಂಚಾಯಿತಿ ಕರ‍್ಯನರ‍್ವಾಹಕಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
1) ಎಲ್ಲ ಮಸಣ ಕರ‍್ಮಿಕರ ಗಣತಿ ಮಾಡಿ ಪುರ‍್ವಸತಿಗೆ ಕ್ರಮವಹಿಸಬೇಕು. 2) 45 ರ‍್ಷ ವಯಸ್ಸಿನ ಎಲ್ಲರಿಗೂ ಮಾಸಿಕ ಕನಿಷ್ಠ ೩೦೦೦ ಪಿಂಚಣೆ ಒದಗಿಸಬೇಕು. 3) ಕುಣಿ ಅಗೆದು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ವೇತನ ನೀಡಬೇಕು. 4) ಹಾಗೂ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು. 5) ಮಸಣಕ್ಕೊಬ್ಬರಂತೆ ಮಸಣ ನರ‍್ವಾಹಕರನ್ನು ಸ್ಥಳೀಯ ಸಂಸ್ಥೆಗಳು ನೇಮಿಸಿಕೊಳ್ಳಬೇಕು. 6) ಮಸಣ ಕರ‍್ಮಿಕರ ಕುಟುಂಬಗಳಿಗೆ ತಲಾ ಐದು ಎಕರೆ ಜಮೀನು ಒದಗಿಸಬೇಕು. 7) 24-09-204 ರ ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿಗಳು ರಾಯಚೂರುರವರ ಅಧಿಕೃತ ಜ್ಞಾಪನ ಪತ್ರದ ಆದೇಶದಂತೆ ಎಲ್ಲ ಮಸಣ ಕರ‍್ಮಿಕರಿಗೆ ಪರಿಕರಗಳನ್ನು ವಿತರಿಸಲು ಕ್ರಮವಹಿಸಬೇಕು ಮತ್ತು ಮಸಣ ಕರ‍್ಮಿಕರೆಂದು ದೃಢೀಕೃತ ಪತ್ರವನ್ನು ನೀಡಲು ಗ್ರಾಮ ಪಂಚಾಯತ್ ಪಿ.ಡಿ.ಓ.ರವರಿಗೆ ಆದೇಶಿಸಬೇಕು. 8) ಅಗತ್ಯವಿರುವ ಎಲ್ಲ ಕಡೆ ಜಿಲ್ಲೆಯಾದ್ಯಂತ ಮಸಣಕ್ಕೆ ಭೂ ಮಂಜೂರ ಮಾಡಬೇಕು. ಮಸಣಗಳು ಇದ್ದ ಕಡೆ ಮಸಣಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ಸಂರ‍್ಭದಲ್ಲಿ ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಕೆ.ಜಿ.ವೀರೇಶ, ಹೆಚ್. ಪದ್ಮಾ, ಮುತ್ತಣ್ಣ, ನರಸಿಂಹಲು, ರಾಮಣ್ಣ, ಹುಲಿಗೆಪ್ಪ, ಲಕ್ಷ್ಮಣ, ರಾಮಣ್ಣ ಸುಲ್ತಾನಪುರ, ಆಂಜನೇಯ, ನರಸಿಂಹಲು ಇಮ್ರಾನ್ದೊಡ್ಡಿ ಸೇರಿದಂತೆ ಅನೇಕರು ಇದ್ದರು.
ಮಸಣ ಕರ‍್ಮಿಕರನ್ನು ಸ್ಥಳೀಯ ಸಂಸ್ಥೆಯ ನೌಕರರೆಂದು ಪರಿಗಣಿಸಲು ಆಗ್ರಹ
