ಅಪ್ರಾಪ್ತೆ ಬಾಲಕಿ ಆತ್ಮಹತ್ಯೆ ಖಂಡಿಸಿ ಜೇವರ್ಗಿ ಬಂದ್ ಯಶಸ್ವಿ ಬಾಲಕಿ ಕುಟುಂಬಕ್ಕೆ 1 ಕೋಟಿ ಪರಿಹಾರ ಸರಕಾರಿ ಕೆಲಸ ನೀಡಲು ಆಗ್ರಹ

Eshanya Times

ಜೇವರ್ಗಿ: ಯುವಕನೊಬ್ಬನ ಕಿರುಕುಳ ತಾಳಲಾರದೆ ಅಪ್ರಾಪ್ತೆ ಬಾಲಕಿ ಜನವೇರಿ 11ರಂದು ಶನಿವಾರ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಖಂಡಿಸಿ ಬುಧುವಾರ ವೀರಶೈವ ಲಿಂಗಾಯತ ಸಮಾಜದವ ವತಿಯಿಂದ ಜೇವರ್ಗಿ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಲಾಯಿತು.
ವೀರಶೈವ ಲಿಂಗಾಯತ ಸಮಾಜದವ ವತಿಯಿಂದ ಬುಧುವಾರ ಜೇವರ್ಗಿ ಬಂದ್ ಕರೆ ನೀಡಿದ ಪ್ರತಿಭಟನೆಯಲ್ಲಿ ಮುಖಂಡರು ಮಾತನಾಡಿದ ಅವರುಗಳು ಜೇವರ್ಗಿ ತಾಲೂಕಿನಲ್ಲಿ ಆಡಳಿತ ಸಂಪೂರ್ಣ ಹದಗೇಟ್ಟು ಹೋಗಿದೆ. ಪಟ್ಟಣ ಸೇರಿ ತಾಲೂಕಿನಲ್ಲಿ ಮಹಿಳೆಯರ ಮೇಲೆ ಹಲ್ಲೆಗಳು ನಡೆಯುತ್ತಲ್ಲೆ ಇದೆ. ಇದನ್ನು ಕಡಿವಾಣ ಹಾಕುವ ಕೆಲಸ ಮಾಡಬೇಕಾದ ಪೊಲೀಸರು ವಿಫಲವಾಗಿದ್ದರಿಂದ ಇಂಥ ಘಟನೆಗಳು ನಡೆಯುತ್ತಿವೆ. ಇದು ಇಲ್ಲಿಗೆ ಕೊನೆ ಯಾಗಬೇಕು ಮುಂದೆ ಯಾವುದೆ ಸಮಾಜದ ಹೆಣ್ಣು ಮಕ್ಕಳ ಮೇಲೆ ಈ ರೀತಿಯಾದ ಹಲ್ಲೆ ಹಾಗೂ ಕಿರುಕುಳ ನಡೆಯಬಾರದು, ತಾಲೂಕಿನಲ್ಲಿರುವ ಮಹಿಳೆಯರ ವಸತಿ ನಿಲಯಗಳ ಮುಂದೆ ಹಾಗೂ ಶಾಲಾ ಕಾಲೇಜು ಗಳ ಮುಂದೆ ಪೊಲೀಸರು ನಿಗಾ ವಹಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಜನವೇರಿ 11 ರಂದು ಅನ್ಯ ಕೋಮಿನ ಯುವಕನೊಬ್ಬನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಪ್ರಪ್ತೆ ಬಾಲಕಿಯ ಕುಟುಂಬಕ್ಕೆ ಸರಕಾರದಿಂದ ೧ ಕೋಟಿ ಪರಿಹಾರ ನೀಡಬೇಕು ಮತ್ತು ಆ ಕುಟುಂಬದ ಸದಸ್ಯರಿಗೆ ಸರಕಾರಿ ಕೆಲಸ ನೀಡಬೇಕು ಎಂದು ಮುಖಂಡರು ಒತ್ತಾಯಿಸಿ ತಹಸೀಲ್ದಾರ ಮಲ್ಲಣ್ಣ ಯಲಗೋಡ ಮುಖಾಂತರ ಮುಖಂಡರು ಮನವಿ ಸಲ್ಲಿಸಿದರು.
ಬುಧುವಾರ ಬೆಳಗ್ಗೆ 6 ಗಂಟೆಗೆಯಿAದಲ್ಲೆ ಯುವಕರು ರಸ್ತೆಗಿಳಿದು ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮುಖಂಡರು ಎಲ್ಲರು ಸೇರಿಕೊಂಡು ಬಿಜಾಪೂ ಕ್ರಾಸದಿಂದ ಷಣ್ಮೂಖ ಶಿವಯೋಗಿ ಮಠದ ಮೂಲಕ ರಿಲಾಯನ್ಸ್ ಪಂಪಗೆ ತಲುಪಿ ನಂತರ ಬಿಜಾಪೂರ ಕ್ರಾಸ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಪ್ರತಿಭನಟೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ರಾಜಶೇಖ ಸೀರಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಗುರಲಿಂಗಪ್ಪಗೌಡ ಪಾಟೀಲ ಆಂದೋಲ, ಬಸವರಾಜ ಪಾಟೀಲ್ ನರಿಬೋಳ, ಮಹಾಸಭಾ ತಾಲೂಕ ಅಧ್ಯಕ್ಷ ಸಿದ್ದು ಸಾಹು ಅಂಗಡಿ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಮಲ್ಲಣ್ಣಗೌಡ ನೇದಲದಗಿ, ಶಾಂತಪ್ಪ ಕೂಡಲಗಿ, ದಯಾನಂದ ದೇವರಮನಿ, ಬಾಪುಗೌಡ ಬಿರಾಳ, ಷಣ್ಮುಖಪ್ಪ ಹಿರೇಗೌಡ, ಚಂದ್ರಶೇಖರ ಪುರಾಣಿಕ, ಗುಂಡು ಸಾಹು ಗೋಗಿ, ಸೋಮಶೆಖರ ಗುಡೂರ, ಉಮಾಕಾಂತ ಗೋಲಗೇರಿ, ಶರಣಗೌಡ ಸರಡಗಿ, ರವಿ ಕೋಳಕೂರ, ವಿಜಯಕುಮಾರ ಕಲ್ಲಾ, ನೀಲಕಂಠ ಅವಂಟಿ, ಪ್ರಶಾಂತ ಪಾಟೀಲ ಜೈನಾಪೂರ, ಭೀಮರಾಯ ನಗನೂರ, ರವಿಚಂದ್ರ ಗುತ್ತೇದಾರ, ಮಲಶೆಟ್ಟೆಪ್ಪಗೌಡ ಹಿರೇಗೌಡ, ಶ್ರೀಶೈಲಗೌಡ ಪೊಲೀಸ ಪಾಟೀಲ, ರಾಜುಗೌಡ ಗುಡುರ, ಸಿದ್ರಾಮಕಟ್ಟಿ ಕೋಳಕೂರ, ಮಲ್ಲಿಕಾರ್ಜುನ ಬಿರೆದಾರ, ಅವಣ್ಣ ಮ್ಯಾಗೇರಿ, ಜ್ಯೋತಿ ಪಾಟೀಲ ಮರಗೂಳ, ಮರೆಪ್ಪ ಕೋಬಾಳಕರ್, ರಾಜು ತಳವಾರ, ಸಂಗಣ್ಣ ಹೂÃಗಾರ, ಅಂಬರೇಷ ರಡ್ಡಿ ಶಖಾಪೂರ, ಶರಣು ಅವರಾದ, ಸಂಗಣ್ಣಗೌಡ ರದ್ದೇವಾಡಗಿ, ಪ್ರಕಾಶ ಹರನೂರ, ಈಶ್ವರ ಹಿಪ್ಪರಗಿ, ಸಾಗರ ಬಡಿಗೇರ, ದತ್ತು ಗುತ್ತೇದಾರ, ಕರುಣೇಶ ಘಂಟಿ, ಸಿದ್ದು ಮದರಿ, ಅನಿಲಕುಮಾರ ದೊಡಮನಿ, ಬಸವರಾಜ ಲಾಡಿ, ನಿಂಗಣ್ಣಗೌಡ ನಂದಿಹಳ್ಳಿ, ಷಣ್ಮೂಖ ಬಸವಪಟ್ಟಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";