ಸಿಂಧನೂರು.ಜ.೧೫ : ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ಧ ಸಿದ್ದಪರ್ವತದ ಬಗಳಾಮುಖಿ ಅಂಬಾಮಠದ ಅಂಬಾದೇವಿ ಜಾತ್ರೆಗೆ ಕುಷ್ಟಗಿ ಮೂಲದ ಸಾಧು ಒಬ್ಬರು ಪಾದಯಾತ್ರೆ ಮಾಡಿ ಜಾತ್ರೆಗೆ ಬಂದಿದ್ದರು. ಅಂಬಾದೇವಿಯ ಸನ್ನಿಧಾನದಲ್ಲಿ ಜೀವ ಬಿಟ್ಟಿದ್ದಾರೆ.
ವಿಷಯ ತಿಳಿದು ಪಿಎಸ್‌ಐ. ಎಂ.ಡಿ.ಇಸಾಕ್ ಭೇಟಿ ನೀಡಿ ಪರಿಶೀಲಿಸಿ ಸಾಧು ಮನೆಗೆ ವಿಷಯ ಮುಟ್ಟಿಸಿದ್ದಾರೆ. ಜಾತ್ರೆಯಲ್ಲಿ ಗೊಂದಲ ಬೇಡ ಎಂದು ಅವರು ಬರುವವರೆಗೂ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿಸಲು ಸಮಾಜ ಸೇವಕ ಹಾಗೂ ಆಟೋ ಚಾಲಕ ಉಸ್ಮಾನ್ ಪಾಷಾ ಚಕ್ರವರ್ತಿ ಮಕಂದರ್ ಷಾ ಅವರಿಗೆ ತಿಳಿಸಿ ಅವರ ಆಟೋದಲ್ಲಿ ಮರಣ ಹೊಂದಿದ ಸಾಧುವನ್ನ ಸಾಗಿಸಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇಡಲಾಗಿತ್ತು. ಸಂಬAಧಿಕರು ಬಂದ ಮೇಲೆ ಹಸ್ತಾಂತರಿಸಲಾಯಿತು ಎಂದು ತಿಳಿದು ಬಂದಿದೆ.