ರಾಯಚೂರು: ಲಿಂಗಸೂಗೂರು ತಾಲೂಕಿನ ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆಗೆ ನಿರಂತರ ಗೈರಾಗುತ್ತಿರುವ ಮುಖ್ಯಗುರು ನಾಗನಗೌಡ ರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಲಿಂಗಸ್ಗೂರು ತಾಲೂಕು ಸಮಿತಿ ನೇತೃತ್ವದಲ್ಲಿ ಶಾಲೆಯ ಒಳಾಂಗಣದಲ್ಲಿ ಅನಿರ್ಧಿಷ್ಟಾವಧಿ ರವಿವಾರಕ್ಕೆ ಧರಣಿ ೫ನೇ ದಿನಕ್ಕೆ ಕಾಲಿಟ್ಟದೆ. ಈ ಧರಣಿ ಬೆಂಬಲಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದಿ0ದ ಬೆಂಬಲಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ ಮಾತನಾಡಿದರು.
ಸೋಮುವಾರ ದಂದು ೫ನೇ ದಿನದ ಧರಣಿಗೆ ಬೆಂಬಲಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಉದ್ಧಾರ ಆಗೋದು ಈ ಬಂಡವಾಳ ಶಾಹಿ ವ್ಯವಸ್ಥೆಗೆ ಬೇಕಿಲ್ಲ. ನಮ್ಮನ್ನ ಕೂಲಿಕಾರರನ್ನಾಗಿ, ಗುಲಾಮರನ್ನಾಗಿ ಉಳಿಯುವಂತೆ ನಮ್ಮನ್ನ ಜಾತಿ, ಧರ್ಮದ ಹೆಸರಲ್ಲಿ ಹೊಡೆದು ದುಡಿಯುವ ವರ್ಗದ ಜನತೆಗೆ ಶಿಕ್ಷಣ, ಆರೋಗ್ಯ, ಆಹಾರ, ಗುಣಮಟ್ಟದ ಬದುಕು ದೊರೆಯದಂತೆ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ದಿನಾಂಕ 20-06-2024 ರಿಂದ ಶಾಲಾ ಆವರಣದಲ್ಲಿ ಎಸ್‌ಎಫ್‌ಐ ಸಂಘಟನೆ ಧರಣಿ ನಡೆಸುತ್ತಿದ್ದರೂ ಆಯುಕ್ತರು ಇವರನ್ನು ಅಮಾನತು ಮಾಡಲು ವಿಳಂಬ ಮಾಡುತ್ತಿದ್ದಾರೆ. ಮಂಗಳವಾರ ನೀವು ಶಾಲೆಗೆ ಬೀಗ ಹಾಕಲು ತೀರ್ಮಾನಿಸಿದ್ದು, ಮುಂದಿನ ಎಲ್ಲಾ ರೀತಿಯ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲ್ಲೂಕು ಕಾರ್ಯದರ್ಶಿ ಪವನ್ ಕಮದಾಳ, ತಾಲೂಕು ಮುಖಂಡರಾದ ವಿನಯ್ ಕುಮಾರ್, ಬಸವರಾಜ, ಸೋಮನ ಮರಡಿ, ಕೆಪಿಆರ್ ಎಸ್ ತಾಲ್ಲೂಕು ಮುಖಂಡ ನಿಂಗಪ್ಪ ಎಂ., ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗಪ್ಪ ಸಾಹುಕಾರ್, ವಿವಿಧ ಸಂಘಟನೆಗಳ ಮುಖಂಡರಾದ ರಿಯಾಜ್ ಖುರೇಶಿ, ದಾವೂದ್, ನಜೀರ್ ಮಾಚನೂರು, ಅಣ್ಣಯ್ಯ, ಶಿವಶಂಕರ, ವಡಿಕೆಪ್ಪ, ರಾಜು ನಾಯಕ, ಯಂಕಣ್ಣ ಕೊಲ್ಕರ್, ಶಿವು ಪಿ ಜಿ., ನಿರುಪಾದಿ, ವೆಂಕಟೇಶ್ ಯಾದವ್, ವೀರೇಶ್ ಬಡಿಗೇರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.