ಕಲಬುರಗಿ ಜಿಮ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

Eshanya Times

ಕಲಬುರಗಿ,ಜೂ.೦೫ : ಕಲಬುರಗಿಯ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ಗಿಡ ನೆಡುವುದು, ಚಿತ್ರಕಲೆ ಸ್ಪರ್ಧೆ, ಮ್ಯಾರಥಾನ್ (ಪರಿಸರಕ್ಕಾಗಿ ಓಟ) ಕ್ಯಾಂಪಸ್ ಸ್ವಚ್ಛತಾ ಅಭಿಯಾನವನ್ನು ಹಾಗೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕಲಬುರಗಿ ಜಿಮ್ಸ್ನ ಡೀನ್ ಮತ್ತು ನಿರ್ದೇಶಕರಾದ ಡಾ. ಉಮೇಶ ಎಸ್. ಆರ್. ಅವರು ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮಗಳ ಅಗತ್ಯತೆ ೨೦೨೪ ರ ವಿಶ್ವ ಪರಿಸರ ದಿನದ ಅಭಿಯಾನವು ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಅಜಯಕುಮಾರ ಜಿ., ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ. ಆರ್., ಕಲಬುರಗಿ ಜಿಮ್ಸ್ ಶೈಕ್ಷಣಿಕ ರೆಜಿಸ್ಟಾçರ್ ಡಾ. ಫರಖಾನಾ ಖುಶನೂದ್ ಹಾಗೂ ವಿವಿಧ ಬೋಧಕ, ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಿನಾಚರಣೆ ಅಂಗವಾಗಿ ಜೂನ್ ೪ ರಂದು “energy conservation and its sustainable consumption” ಎಂಬ ವಿಷಯದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಮೊದಲ ವರ್ಷದಿಂದ ಅಂತಿಮ ವರ್ಷದವರೆಗಿನ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದರು. ಜೂನ್ ೫ ರಂದು ಮ್ಯಾರಥಾನ್ ಈವೆಂಟ್‌ನಲ್ಲಿ ಸುಮಾರು ೪೦೦-೫೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕವನ್ನು ವಿತರಿಸಲಾಯಿತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";