ಕುಷ್ಟಗಿ: ತಾಲ್ಲೂಕಿನ ಯಲಬುರ್ತಿ ಗ್ರಾಮದಲ್ಲಿ ಇಂದು ವಕೀಲರ ಸಂಘದ ಸಹಯೋಗದೊಂದಿಗೆ ಮಹಿಳಾ ಹಕ್ಕುಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿತು.
ಉದ್ಘಾಟನೆ ನೆರವೇರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅವರು ಮಾತನಾಡಿ ವಕೀಲರು ಎಂದರೆ ಕೋರ್ಟ್ ನಲ್ಲಿ ನ್ಯಾಯ ಮಾಡುವದಲ್ಲಾ ಅದರ ಜೋತೆಗೆ ಸ್ಪಂದನೆ ಮುಖ್ಯ ಎಂದು ಹೇಳಿದ ಅವರು ಈ ಗ್ರಾಮದ ವಕೀಲರಾದ ಎಸ್. ವಾಯ್.ಬುಕನಟ್ಟಿಯವರು ತಮ್ಮ ದುಡಿಮೆಯಲ್ಲಿ ಉಳಿಕೆ ಮಾಡಿದ ಹಣದಲ್ಲಿ ಸುಮಾರು ನಲವತ್ತು ಸೈಕಲ್ ಗಳನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ್ದು ಹೆಮ್ಮೆಯ ವಿಷಯ ಎಂದು ಹೇಳಿದ ಅವರು ಕಾನೂನು ಅರಿವು ಪ್ರತಿಯೊಬ್ಬರಿಗು ಅವಶ್ಯಕತೆ ಇದೆ ಎಂದು ಹೇಳಿದ ಅವರು ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಹೆಣ್ಣು ಗಂಡು ಎಂಬ ಬೇದವ ಮಾಡಬೇಡಿ ಅವರಿಗೆ ಇರುವ ಹಕ್ಕುಗಳನ್ನು ಸಮಾನವಾಗಿ ಪ್ರೀತಿಯಿಂದ ಬಿಟ್ಟು ಕೊಡಿ ಆಸ್ತಿ ವಿಷಯದಲ್ಲಿ ಸಂಬAಧಗಳನ್ನು ಕಳೆದುಕೊಳ್ಳಬೇಡಿ ಹೆತ್ತವರು ಮೊದಲೆ ವಿಲ್ ಮಾಡಿಟ್ಟು ಹೋಗಿ ಅದು ಮಕ್ಕಳಿಗೆ ಅನಕೂಲ ವಾಗುತ್ತದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ತಾಲೂಕು ಸಂಗನಗೌಡ ಜಿ.ಪಾಟೀಲ್ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಸಂಗಪ್ಪ ದರಗದ,ಮಂಜುನಾಥ ಆರ್.ಪ್ರಧಾನ ಸಿವಿಲ್ ನ್ಯಾಯಾಧೀಶ ಮಾಯಪ್ಪ ಲಗಮಪ್ಪ ,ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ,ವಕೀಲರ ಸಂಘದ ಕಾರ್ಯದರ್ಶಿ ಆನಂದ ಡೊಳ್ಳಿನ ಹಿರಿಯ ವಕೀಲರಾದ ನಾಗಪ್ಪ ಸೂಡಿ,ಉಪಸ್ಥಿತರಿದ್ದರು.
ಎ.ವಾಯ್.ಬುಕನಟ್ಟಿ ವಕೀಲರು ಉಪನ್ಯಾಸ ನೀಡಿದರು. ಸ್ಥಿರಾಸ್ತಿಗಳ ಹಕ್ಕುಗಳ ವರ್ಗಾವಣೆ ಕೆ.ವಿ.ಆಶ್ರೀತ ಮಾತನಾಡಿದರು. ಯಲಬುರ್ತಿ ಗ್ರಾಮದ ವಕೀಲರಾದ ಸುರೇಶ ಜರಕುಂಟಿ,ರಪೀಕ ನದಾಫ, ಶಂಕರಗೌಡ ಪಾಟೀಲ್, ಹೊನ್ನಪ್ಪ ಕಲ್ಲುಡಿ, ಇದ್ದರು.ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ನ್ಯಾಯಾಧೀಶರಿಂದ ನಡೆಯಿತು.